ಪರ್ತ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಮೊದಲ ಬಾರಿ ಭಾರತ ತಂಡದ ಪರ ಕಣಕ್ಕಿಳಿದ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮ(Rohit Sharma) ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ನೂತನ ಪರ್ತ್ ಸ್ಟೇಡಿಯಂನಲ್ಲಿ ಭಾನುವಾರ ಆಸ್ಟ್ರೇಲಿಯಾ(Australia vs India 1st ODI) ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡುವ ಮೂಲಕ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಪೂರ್ತಿಗೊಳಿಸಿದರು. ಈ ಸಾಧನೆಗೈದ 5ನೇ ಭಾರತೀಯ ಕ್ರಿಕೆಟಿಗ ಎನಿಸಿದರು.
ರೋಹಿತ್‌ಗೂ ಮುನ್ನ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಪೂರ್ತಿಗೊಳಿಸಿದ್ದರು. ಈ ಪಂದ್ಯದಲ್ಲಿ ಭಾರತ ಟಾಸ್ ಸೋಲುವ ಮೂಲಕ ಏಕದಿನದಲ್ಲಿ ಸತತ 16 ನೇ ಟಾಸ್ ಸೋತಂತಾಯಿತು. ಭಾರತ ಕೊನೆಯ ಟಾಸ್ 2023 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಾಂಖೆಡೆಯಲ್ಲಿ ಗೆದ್ದಿತ್ತು. ಇದಾದ ಬಳಿಕ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಟಾಸ್ ಸೋಲುತ್ತಲೇ ಬಂದಿದೆ.
ರೋಹಿತ್‌ಗೆ ಬಿಸಿಸಿಐ ಅಭಿನಂದನೆ
2027ರ ವಿಶ್ವಕಪ್ವರೆಗೆ ಸ್ಥಾನ ಉಳಿಸಿಕೊಳ್ಳುವ ದೃಷ್ಟಿಯಿಂದ ವಿರಾಟ್ ಕೊಹ್ಲಿ ಜತೆ ರೋಹಿತ್ ಶರ್ಮ ಅವರಿಗೆ ಇದು ಮಹತ್ವದ ಸರಣಿಯಾಗಿದೆ. ಮೊದಲ ಪಂದ್ಯದಲ್ಲಿ ರೋಹಿತ್ ನಿರೀಕ್ಷಿತ ಬ್ಯಾಟಿಂಗ್ ನಡೆಸಲು ವಿಫಲರಾದರು. 14 ಎಸೆತಗಳಿಂದ 8 ರನ್ ಮಾತ್ರ ಗಳಿಸಿ ವಿಕೆಟ್ ಕಳೆದುಕೊಂಡರು. ಕೇವಲ ಒಂದು ಬೌಂಡರಿ ಬಾರಿಸಲಷ್ಟೇ ಶಕ್ತವಾದರು.
ಇದನ್ನೂ ಓದಿ IND vs AUS: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಗರಡಿಯಲ್ಲಿ ಅಭ್ಯಾಸ ನಡೆಸಿದ ಅಭಿಷೇಕ್ ಶರ್ಮಾ!
ಭಾರತ ಪರ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯ ಆಡಿದ ಆಟಗಾರರು
ಸಚಿನ್ ತೆಂಡೂಲ್ಕರ್-664
ವಿರಾಟ್ ಕೊಹ್ಲಿ-551*
ಎಂಎಸ್ ಧೋನಿ-535
ರಾಹುಲ್ ದ್ರಾವಿಡ್-504
ರೋಹಿತ್ ಶರ್ಮಾ-500 *