IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ
ಗುಜರಾತ್ ತಂಡದ ಆರಂಭಿಕ ಎಡಗೈ ಬ್ಯಾಟರ್ ಸಾಯಿ ಸುದರ್ಶನ್(186) ಕೇವಲ ಮೂರು ರನ್ ಅಂತರದಿಂದ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವ ಅವಕಾಶ ಕಳೆದುಕೊಂಡರು. ಸದ್ಯ ಆರೆಂಜ್ ಕ್ಯಾಪ್ ಲಕ್ನೋ ತಂಡದ ನಿಕೋಲಸ್ ಪೂರನ್(189) ಬಳಿ ಇದೆ. ಪರ್ಪಲ್ ಕ್ಯಾಪ್‌ನಲ್ಲೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಚೆನ್ನೈ ತಂಡದ ನೂರ್ ಅಹ್ಮದ್(9 ವಿಕೆಟ್) ಅವರ ಬಳಿಯೇ ಇದೆ.

ಬೆಂಗಳೂರು: ಸತತ ಎರಡು ಗೆಲುವು ಸಾಧಿಸಿ ಬೀಗುತ್ತಿದ್ದ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಈ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ತವರಿನಲ್ಲಿ ಬುಧವಾರ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(RCB vs GT) ವಿರುದ್ಧ 8 ವಿಕೆಟ್‌ಗಳಿಂದ ಸೋಲು ಕಂಡಿದೆ. ಈ ಸೋಲಿನಿಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ(IPL 2025 Points Table) ತನ್ನ ಅಗ್ರಸ್ಥಾನವನ್ನು ಕೂಡ ಕಳೆದುಕೊಂಡಿದೆ. ಮೊದಲ ಸ್ಥಾನದಲ್ಲಿದ್ದ ಆರ್‌ಸಿಬಿ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ.
ಪಂಜಾಬ್ ಕಿಂಗ್ಸ್ ಈಗ ಅಗ್ರಸ್ಥಾನಕ್ಕೇರಿದೆ. ಆರ್‌ಸಿಬಿ ಪಂದ್ಯಕ್ಕೂ ಮುನ್ನ ಅದು ದ್ವಿತೀಯ ಸ್ಥಾನಿಯಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಮತ್ತೆ ದ್ವಿತೀಯ ಸ್ಥಾನಕ್ಕೇರಿದೆ. ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಗುಜರಾತ್ ತಂಡ ನಾಲ್ಕನೇ ಸ್ಥಾನಿಯಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಕೊನೆಯ ಸ್ಥಾನದಲ್ಲಿರುವ ಕೆಕೆಆರ್ ಮೇಲೇರಬೇಕಾದರೆ ಗೆಲುವು ಅತ್ಯಗತ್ಯ.
ಇದನ್ನೂ ಓದಿ IPL 2025: ಆರ್‌ಸಿಬಿ, ಸಿಎಸ್‌ಕೆ ಅಲ್ಲವೇ ಅಲ್ಲ! ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಆರಿಸಿದ ಇರ್ಫಾನ್ ಪಠಾಣ್!
ಆರೆಂಜ್ ಕ್ಯಾಪ್
ಗುಜರಾತ್ ತಂಡದ ಆರಂಭಿಕ ಎಡಗೈ ಬ್ಯಾಟರ್ ಸಾಯಿ ಸುದರ್ಶನ್(186) ಕೇವಲ ಮೂರು ರನ್ ಅಂತರದಿಂದ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವ ಅವಕಾಶ ಕಳೆದುಕೊಂಡರು. ಸದ್ಯ ಆರೆಂಜ್ ಕ್ಯಾಪ್ ಲಕ್ನೋ ತಂಡದ ನಿಕೋಲಸ್ ಪೂರನ್(189) ಬಳಿ ಇದೆ. ಪರ್ಪಲ್ ಕ್ಯಾಪ್‌ನಲ್ಲೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಚೆನ್ನೈ ತಂಡದ ನೂರ್ ಅಹ್ಮದ್(9 ವಿಕೆಟ್) ಅವರ ಬಳಿಯೇ ಇದೆ.
ನೂತನ ಅಂಕಪಟ್ಟಿ
IPL 2025 POINTS TABLE. 📈
— Mufaddal Vohra (@mufaddal_vohra) April 2, 2025
- PBKS are the new Table Toppers. 1️⃣ pic.twitter.com/zf8i4D45yX