RCB vs RR: ಇಂದು ರಾಜಸ್ಥಾನ್-ಆರ್‌ಸಿಬಿ ಮುಖಾಮುಖಿ
IPL 2025: ಆರ್‌ಸಿಬಿ ಬ್ಯಾಟಿಂಗ್ ಲೈನ್ ಅಪ್ ಉತ್ತಮವಾಗಿದೆ. ಸಾಲ್ಟ್ ಪವರ್ ಪ್ಲೇ ತನಕ ಕ್ರೀಸ್ ಕಾಯ್ದುಕೊಂಡರೆ ದೊಡ್ಡ ಮೊತ್ತಕ್ಕೇನು ಅಡ್ಡಿಯಿಲ್ಲ. ಕೆಲ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಬಿರುಸಿನ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ಕಲೆ ಹಾಕುತ್ತಿದ್ದಾರೆ. ವೇಗಿಗಳಾದ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಈ ಋತುವಿನಲ್ಲಿ ಉತ್ತಮವಾಗಿ ಬೌಲ್ ಮಾಡಿದ್ದಾರೆ.


ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡವು ಇಂದು(ಭಾನುವಾರ) ನಡೆಯುವ ಐಪಿಎಲ್(IPL 2025) ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್(RCB vs RR) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯ ಜೈಪುರದ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜಸ್ಥಾನ್ ಆಡಿದ 5 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿದರೆ, ಆರ್‌ಸಿಬಿ 5 ಪಂದ್ಯಗಳಿಂದ 3 ಗೆಲುವು ಸಾಧಿಸಿದೆ. ಆರ್‌ಸಿಬಿಯು ತವರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿತ್ತು. ರಾಜಸ್ಥಾನ್ ತನ್ನ ಹಿಂದಿನ ಪಂದ್ಯದಲ್ಲಿ ಗುಜರಾತ್ ಎದುರು ಸೋಲು ಕಂಡಿತ್ತು. ಹೀಗಾಗಿ ಉಭಯ ತಂಡಗಳು ಗೆಲುವಿನ ಹಳಿಗೆ ಮರಳುವ ಯತ್ನದಲ್ಲಿವೆ.
ಆರ್ಚರ್ ಭೀತಿ
ಗಂಟೆಗೆ 144 ಕಿ.ಮಿ. ವೇಗದಲ್ಲಿ ಬೌಲ್ ಮಾಡಿ ಬ್ಯಾಟರ್‌ಗಳನ್ನು ಕಂಗೆಡಿಸುತ್ತಿರುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರ ಭೀತಿಯಲ್ಲಿ ಆರ್‌ಸಿಬಿ ಇಂದು ಕಣಕ್ಕಿಳಿಯಲಿದೆ. ಕಳೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ ಅವರನ್ನು 147.7 ಕಿ.ಮೀ. ವೇಗದ ಇನ್‌ಸ್ವಿಂಗರ್ ಎಸೆತದಲ್ಲಿ ಬೌಲ್ಡ್ ಆರ್ಚರ್ ಮಾಡಿದ್ದರು. ಹೀಗಾಗಿ ಆರಂಭಿಕರಾದ ಕೊಹ್ಲಿ, ಮತ್ತು ಸಾಲ್ಟ್ ಇವರ ಎಸೆತಗಳನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದ ಪಂದ್ಯದ ಕುತೂಹಲ.
ರಾಜಸ್ಥಾನ್ ತಂಡ ದೇಶೀಯ ಬ್ಯಾಟರ್‌ಗಳನ್ನೇ ನೆಚ್ಚಿಕೊಂಡಿದೆ. ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ರಾಣಾ ಅಂಥ ಅನುಭವಿಗಳಿದ್ದಾರೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೇಲ್, ಶಿಮ್ರಾನ್ ಹೆಟ್ಮೆಯರ್ ಇದ್ದಾರೆ. ಆದರೆ ಇವರೆಲ್ಲ ಸ್ಥಿರ ಪ್ರದರ್ಶನ ತೋರುತ್ತಿಲ್ಲ.
ಆರ್‌ಸಿಬಿ ಬ್ಯಾಟಿಂಗ್ ಲೈನ್ ಅಪ್ ಉತ್ತಮವಾಗಿದೆ. ಸಾಲ್ಟ್ ಪವರ್ ಪ್ಲೇ ತನಕ ಕ್ರೀಸ್ ಕಾಯ್ದುಕೊಂಡರೆ ದೊಡ್ಡ ಮೊತ್ತಕ್ಕೇನು ಅಡ್ಡಿಯಿಲ್ಲ. ಕೆಲ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಬಿರುಸಿನ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ಕಲೆ ಹಾಕುತ್ತಿದ್ದಾರೆ. ವೇಗಿಗಳಾದ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಈ ಋತುವಿನಲ್ಲಿ ಉತ್ತಮವಾಗಿ ಬೌಲ್ ಮಾಡಿದ್ದಾರೆ. ಆದರೆ ಸ್ಪಿನ್ ವಿಭಾಗದಲ್ಲಿ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ.
🧱 Wall 🤝 King 👑
— Royal Challengers Bengaluru (@RCBTweets) April 12, 2025
A Royal meet-up indeed. 😇 pic.twitter.com/Ei2jwX8ahz
ಪಿಚ್ ರಿಪೋರ್ಟ್
ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದ ಪಿಚ್ ಅಷ್ಟಾಗಿ ಬ್ಯಾಟರ್‌ಗಳಿಗೆ ನೆರವು ನೀಡುವುದಿಲ್ಲ. ಇಲ್ಲಿ ಬ್ಯಾಟರ್‌ಗಳು ಸಾಮಾನ್ಯವಾಗಿ ದೊಡ್ಡ ಇನಿಂಗ್ಸ್ ಆಡಲು ಹೆಣಗಾಡುತ್ತಾರೆ. ಇದುವರೆಗೆ ಇಲ್ಲಿ ನಡೆದ 57 ಐಪಿಎಲ್ ಪಂದ್ಯಗಳಲ್ಲಿ ಕೇವಲ ಮೂರು ಬಾರಿ ಮಾತ್ರ 200ರ ಗಡಿ ದಾಟಿದೆ ಹಗಲು ನಡೆಯುವ ಪಂದ್ಯವಾದ ಕಾರಣ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಬಿಸಿಲಿನ ವಾತಾವರಣ ಇದ್ದು ಸಂಜೆಯ ವೇಳೆ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಗುಜರಾತ್
ಸಂಭಾವ್ಯ ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ) ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಯುಧ್ವಿರ್ ಸಿಂಗ್ ಚರಕ್, ಸಂದೀಪ್ ಶರ್ಮಾ.
ಆರ್‌ಸಿಬಿ: ಫಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.