ಬದಲಿ ಆಟಗಾರನಾಗಿ ರಾಜಸ್ಥಾನ್ ರಾಯಲ್ಸ್ ಸೇರಿದ ದಾಸುನ್ ಶನಕ
Dasun Shanaka: ಶನಕ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಏಳು ಪಂದ್ಯಗಳಲ್ಲಿ, 34 ವರ್ಷದ ಅವರು 187.50 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 165 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಐಪಿಎಲ್‌ನಲ್ಲಿ ಕೇಲವ ಮೂರು ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
dasun shanaka -
ಜೈಪುರ, ಮಾ.22: ಶ್ರೀಲಂಕಾದ ಟಿ20 ನಾಯಕ ದಾಸುನ್ ಶನಕ(Dasun Shanaka) ಪಾಕಿಸ್ತಾನ ಸೂಪರ್ ಲೀಗ್ (PSL 2026) ತ್ಯಜಿಸಿ ಮುಂಬರುವ ಐಪಿಎಲ್ 2026 ಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಸೇರಿದ್ದಾರೆ. ತೊಡೆಸಂದು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಸ್ಯಾಮ್ ಕರನ್ ಬದಲಿಗೆ ಶನಕ ಇಂಡಿಯನ್ ಪ್ರೀಮಿಯರ್ ಲೀಗ್‌ನೊಂದಿಗೆ ಸಹಿ ಹಾಕಿದ್ದಾರೆ.
ಇತ್ತೀಚಿಗೆ ನಡೆದಿದ್ದ ಪಾಕಿಸ್ಥಾನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಶನಕ ಅವರನ್ನು ಲಾಹೋರ್ ಖಲಂದರ್ಸ್ ತಂಡ 75 ಲಕ್ಷಕ್ಕೆ ಆಯ್ಕೆ ಖರೀದಿ ಮಾಡಿತ್ತು. ಆದರೆ ಈಗ ಇಂಡಿಯನ್ ಪ್ರೀಮಿಯರ್ ಲೀಗ್‌ನ ಭಾಗವಾಗಲು ಪಾಕಿಸ್ತಾನಿ ಲೀಗ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಕಳೆದ ವರ್ಷ ಅಬುಧಾಬಿಯಲ್ಲಿ ನಡೆದ ಐಪಿಎಲ್ 2026 ರ ಹರಾಜಿನಲ್ಲಿ ಶನಕ ಮಾರಾಟವಾಗದೆ ಉಳಿದಿದ್ದರು. ನಂತರ ಅವರು ಪಿಎಸ್ಎಲ್ ಹರಾಜಿಗೆ ಹೆಸರು ನೋಂದಾಯಿಸಿದ್ದರು. ಶನಕ ಈ ಹಿಂದೆ ಐಪಿಎಲ್ 2023 ಮತ್ತು 2025 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ರಾಜಸ್ಥಾನ್ ಪರ ಮೊದಲ ಬಾರಿಗೆ ಆಡಲಿದ್ದಾರೆ. ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಪಿಎಸ್‌ಎಲ್‌ನಿಂದ ಹಿಂದೆ ಸರಿದು ಕೆಲ ದಿನಗಳ ಹಿಂದಷ್ಟೇ ಕೋಲ್ಕತಾ ತಂಡ ಸೇರಿದ್ದರು.
ಶನಕ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಏಳು ಪಂದ್ಯಗಳಲ್ಲಿ, 34 ವರ್ಷದ ಅವರು 187.50 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 165 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಐಪಿಎಲ್‌ನಲ್ಲಿ ಕೇಲವ ಮೂರು ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
🚨 DASUN SHANAKA TO IPL 🚨
— Johns. (@CricCrazyJohns) March 22, 2026
- Sri Lankan T20 Captain Shanaka chose IPL over PSL Contract. [Danushka Aravinda]
He will replace Sam Curran in Rajasthan Royals in IPL 2026. pic.twitter.com/e5dUddEBKw
ರಾಜಸ್ಥಾನ ರಾಯಲ್ಸ್ ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತಮ್ಮ ಐಪಿಎಲ್ ಋತುವನ್ನು ಆರಂಭಿಸಲಿದೆ. ಎರಡೂ ತಂಡಗಳು ಮಾರ್ಚ್ 30 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಐಪಿಎಲ್ ಟಿಕೆಟ್ ಖರೀದಿಸುವಾಗ ಎಚ್ಚರ: ಬೆಂಗಳೂರು ಸೈಬರ್ ಪೊಲೀಸರ ಮನವಿ
ಐಪಿಎಲ್ 2025 ರಲ್ಲಿ ಎರಡೂ ತಂಡಗಳು ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದ ತಂಡಗಳಾಗಿದ್ದವು, ಮತ್ತು ಈ ಬಾರಿ ಪರಿಷ್ಕೃತ ತಂಡದೊಂದಿಗೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದ್ದು ಈ ಬಾರಿ ಟೂರ್ನಮೆಂಟ್ ನಾಕೌಟ್‌ಗಳಿಗೆ ಅರ್ಹತೆ ಪಡೆಯುವ ಗುರಿಯನ್ನು ಹೊಂದಿವೆ.
ಏತನ್ಮಧ್ಯೆ, ಪಿಎಸ್ಎಲ್ ಕಾರ್ಯಾಚರಣೆಗಳು ಮತ್ತು ಸ್ಥಳಗಳಲ್ಲಿನ ಬದಲಾವಣೆಗಳ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಭಾನುವಾರ ಲಾಹೋರ್‌ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು ಮತ್ತು ಪಿಎಸ್ಎಲ್ ಒಪ್ಪಂದಗಳನ್ನು ಉಲ್ಲಂಘಿಸಿದ ಆಟಗಾರರ ವಿರುದ್ಧ ಮಂಡಳಿಯು ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಸುಳಿವು ನೀಡಿದರು.