ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಚಿನ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮದುವೆಗೆ ಡೇಟ್‌ ಫಿಕ್ಸ್

Arjun Tendulkar:‌ ಸಾನ್ಯಾ ಚಂದೋಕ್‌ ಪಶು ವೈದ್ಯಕೀಯ ಕೋರ್ಸ್‌ ಪೂರ್ತಿಗೊಳಿಸಿ, ವೃತ್ತಿಪರ ತರಬೇತಿ ಪಡೆಯುತ್ತಿದ್ದಾರೆ. ಸಾನ್ಯಾರ ಮುತ್ತಾತ ಐ.ಕೆ.ಘೈ, ಭಾರತದ ಖ್ಯಾತ ಐಸ್‌ಕ್ರೀಂ ಬ್ರ್ಯಾಂಡ್‌ ಆದ ಕ್ವಾಲಿಟಿ ಐಸ್‌ಕ್ರೀಂನ ಸಂಸ್ಥಾಪಕರು. ಮುಂಬೈನ ಮರೀನ್‌ ಡ್ರೈವ್‌ನಲ್ಲಿರುವ ಇಂಟರ್‌ ಕಾಂಟಿನೆಂಟಲ್‌ ಹೋಟೆಲ್‌ ಸಹ ಇವರೇ ಆರಂಭಿಸಿದ್ದಾರೆ.

ಸಚಿನ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮದುವೆಗೆ ಡೇಟ್‌ ಫಿಕ್ಸ್

Arjun Tendulkar and Saaniya Chandok -

Abhilash BC
Abhilash BC Jan 9, 2026 8:56 AM

ಮುಂಬಯಿ, ಜ.9: ಟೀಮ್‌ ಇಂಡಿಯಾದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ರ ಪುತ್ರ, ಯುವ ಕ್ರಿಕೆಟಿಗ ಅರ್ಜುನ್‌ ತೆಂಡುಲ್ಕರ್‌(Arjun Tendulkar) ಈ ವರ್ಷ ಮಾರ್ಚ್‌ನಲ್ಲಿ(Arjun Tendulkar wedding date confirmed) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದುಬಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಮುಂಬೈನ ಖ್ಯಾತ ಉದ್ಯಮಿ ರವಿ ಘೈ ಅವರ ಮೊಮ್ಮಗಳು ಸಾನ್ಯಾ ಚಂದೋಕ್‌(Saaniya Chandok) ಅವರೊಂದಿಗೆ ಮಾ.5ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.

ಮಾ.3ರಂದೇ ಮದುವೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಈಗಾಗಲೇ ಸಿದ್ಧತೆ ಶುರುವಾಗಿದೆ. ಮುಂಬೈನಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿದೆ. ಅರ್ಜುನ್‌ ಹಾಗೂ ಸಾನ್ಯಾರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ಆಗಸ್ಟ್‌ನಲ್ಲಿ ನೆರವೇರಿತ್ತು. ಕೇವಲ ಆಪ್ತ ಬಳಗವಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.

ಸಾನ್ಯಾ ಚಂದೋಕ್‌ ಪಶು ವೈದ್ಯಕೀಯ ಕೋರ್ಸ್‌ ಪೂರ್ತಿಗೊಳಿಸಿ, ವೃತ್ತಿಪರ ತರಬೇತಿ ಪಡೆಯುತ್ತಿದ್ದಾರೆ. ಸಾನ್ಯಾರ ಮುತ್ತಾತ ಐ.ಕೆ.ಘೈ, ಭಾರತದ ಖ್ಯಾತ ಐಸ್‌ಕ್ರೀಂ ಬ್ರ್ಯಾಂಡ್‌ ಆದ ಕ್ವಾಲಿಟಿ ಐಸ್‌ಕ್ರೀಂನ ಸಂಸ್ಥಾಪಕರು. ಮುಂಬೈನ ಮರೀನ್‌ ಡ್ರೈವ್‌ನಲ್ಲಿರುವ ಇಂಟರ್‌ ಕಾಂಟಿನೆಂಟಲ್‌ ಹೋಟೆಲ್‌ ಸಹ ಇವರೇ ಆರಂಭಿಸಿದ್ದು. ಸಾನ್ಯಾರ ಕುಟುಂಬ ಗ್ರಾವಿಸ್‌ ಗ್ರೂಪ್‌ ಎನ್ನುವ ಸಂಸ್ಥೆ ನಡೆಸುತ್ತಿದ್ದು, ಹಲವು ದೇಶಗಳಲ್ಲಿ ಈ ಸಂಸ್ಥೆಯು ಹೋಟೆಲ್‌ಗಳನ್ನು ಹೊಂದಿದೆ.

25 ವರ್ಷದ ಅರ್ಜುನ್ ಎಡಗೈ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಅರ್ಜುನ್‌ ತೆಂಡೂಲ್ಕರ್‌ ದೇಶೀಯ ಕ್ರಿಕೆಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸುತ್ತಾರೆ. ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರವೂ ಆಡಿದ್ದಾರೆ. ಅವರು 2020/21 ಋತುವಿನಲ್ಲಿ ಮುಂಬೈ ಜತೆ ತಮ್ಮ ದೇಶೀಯ ವೃತ್ತಿಜೀವನವನ್ನು ಪ್ರಾರಂಭಿಸಿರು. ಹರಿಯಾಣ ವಿರುದ್ಧದ T20 ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಅದಕ್ಕೂ ಮೊದಲು, ಅವರು ಜೂನಿಯರ್ ಮಟ್ಟದಲ್ಲಿ ಮುಂಬೈಯನ್ನು ಪ್ರತಿನಿಧಿಸಿದ್ದರು. ಮತ್ತು ಭಾರತ U19 ತಂಡದಲ್ಲಿಯೂ ಕಾಣಿಸಿಕೊಂಡಿದ್ದರು. 2022/23 ಋತುವಿನಲ್ಲಿ, ಅವರು ಗೋವಾಕ್ಕೆ ತೆರಳಿದರು. ಅಲ್ಲಿ ಅವರು ತಮ್ಮ ಪ್ರಥಮ ದರ್ಜೆ ಮತ್ತು ಲಿಸ್ಟ್ A ಗೆ ಪದಾರ್ಪಣೆ ಮಾಡಿದರು.

ರೆಡ್-ಬಾಲ್ ಕ್ರಿಕೆಟ್‌ನಲ್ಲಿ, ಅರ್ಜುನ್ 17 ಪಂದ್ಯಗಳಲ್ಲಿ ಆಡಿದ್ದಾರೆ. ಈ ಪೈಕಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 532 ರನ್ ಗಳಿಸಿದ್ದಾರೆ. ಮತ್ತು 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಒಂದು ಐದು ವಿಕೆಟ್ ಗೊಂಚಲು ಮತ್ತು ಎರಡು ನಾಲ್ಕು ವಿಕೆಟ್ ಗೊಂಚಲು ಸೇರಿವೆ.