ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಕನ್ನಡ ನಟಿ ಶ್ರೀಲೀಲಾಗೆ ಅವಮಾನ ಮಾಡಿದ್ರಾ ಮಹಾರಾಷ್ಟ್ರ ಸಿಎಂ ಪತ್ನಿ? ವಿಡಿಯೋ ವೈರಲ್
ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದ ನಂತರ ನಟಿ ಶ್ರೀಲೀಲಾ ಅವರಿಗೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವಿಸ್ ಬೆರಳು ಸನ್ನೆ ಮಾಡಿ ಪಕ್ಕಕ್ಕೆ ಸರಿಯುವಂತೆ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಇದು ಶ್ರೀಲೀಲಾಗೆ ಮಾಡಿದ ಅವಮಾನ ಎಂದು ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.
-
ಮುಂಬೈನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಕನ್ನಡ ನಟಿ ಶ್ರೀಲೀಲಾಗೆ ಅವಮಾನ ಆಯ್ತಾ? ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್, ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ನಟಿ ಶ್ರೀಲೀಲಾ ಸೇರಿದಂತೆ ಹಲವು ಗಣ್ಯರು ಅಂತಾರಾಷ್ಟ್ರೀಯ ಯೋಗ ದಿನದಂದು ಪಾಲ್ಗೊಂಡು ಉತ್ಸಾಹದಿಂದ ಯೋಗಾಸನಗಳನ್ನು ಮಾಡಿದರು.
ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಎಷ್ಟು ಅಗತ್ಯ ಎಂಬುದನ್ನು ವಿವರಿಸಿದ ಅಮೃತಾ ಫಡ್ನವಿಸ್, ಎಲ್ಲರೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಕಾರ್ಯಕ್ರಮ ಮುಗಿದ ನಂತರ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಟಿ ಶ್ರೀಲೀಲಾಗೆ ಅಮೃತಾ ಫಡ್ನವಿಸ್ ಅಪಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ.
MBBS ಪಾಸ್ ಮಾಡಿ ಡಾಕ್ಟರ್ ಆದ ಶ್ರೀಲೀಲಾ ಮುಂದೇನು ಮಾಡ್ತಾರೆ? ಅಮ್ಮನಿಂದಲೇ ಸಿಕ್ತು ಹೊಸ ಅಪ್ಡೇಟ್!
ಅಷ್ಟಕ್ಕೂ ಆಗಿದ್ದೇನು?
ಯೋಗಾಭ್ಯಾಸ ಮುಗಿದ ನಂತರ ಅಮೃತಾ ಫಡ್ನವಿಸ್, ಅವರ ಮಗಳು ಮತ್ತು ಶ್ರೀಲೀಲಾ ಒಟ್ಟಿಗೆ ಮಾಧ್ಯಮದವರಿಗೆ ಗ್ರೂಪ್ ಫೋಟೋಗೆ ಫೋಸ್ ನೀಡುತ್ತಿದ್ದರು. ಆದರೆ ಆ ಸಮಯದಲ್ಲಿ ಅಲ್ಲಿದ್ದ ಕೆಲವು ಪತ್ರಕರ್ತರು ಕೇವಲ ಅಮೃತಾ ಫಡ್ನವಿಸ್ ಮತ್ತು ಅವರ ಮಗಳ ಫೋಟೋ ಮಾತ್ರ ಬೇಕು ಎಂದು ಕೇಳಿಕೊಂಡರು. ಅದಕ್ಕೆ ಅಮೃತಾ ಪ್ರತಿಕ್ರಿಯಿಸಿದ ರೀತಿ ಈಗ ವಿವಾದಕ್ಕೆ ಕಾರಣವಾಗಿದೆ. ಪಕ್ಕದಲ್ಲೇ ಇದ್ದ ನಟಿ ಶ್ರೀಲೀಲಾಗೆ ಪಕ್ಕಕ್ಕೆ ಸರಿಯುವಂತೆ ಸನ್ನೆ ಮಾಡಿದ ರೀತಿ ಈಗ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಅಮೃತಾ ಅವರ ಈ ವರ್ತನೆಯಿಂದ ತಕ್ಷಣಕ್ಕೆ ಶಾಕ್ ಆದ ಶ್ರೀಲೀಲಾ, ಹೇಗೆ ರಿಯಾಕ್ಟ್ ಮಾಡಬೇಕೆಂದು ತಿಳಿಯದೆ ಅಸಹಾಯಕರಾಗಿ ನೋಡುತ್ತಾ ಸ್ವಲ್ಪ ದೂರ ಹೋಗಿ ನಿಂತುಕೊಂಡರು.
ಕ್ರಿಕೆಟರ್ ತಿಲಕ್ ವರ್ಮಾ ಜೊತೆ ನಟಿ ಶ್ರೀಲೀಲಾ ಡೇಟಿಂಗ್ ಮಾಡ್ತಿರೋದು ನಿಜವೇ? ಇಲ್ಲಿದೆ ನೋಡಿ ಅಸಲಿ ಸತ್ಯ!
ಅಭಿಮಾನಿಗಳ ಬೇಸರ
ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಶ್ರೀಲೀಲಾ ಜೊತೆ ಅಮೃತಾ ನಡೆದುಕೊಂಡ ರೀತಿ ಸರಿಯಲ್ಲ, ಹಾಗೆ ಬೆರಳು ಸನ್ನೆ ಮಾಡಿ ಪಕ್ಕಕ್ಕೆ ಹೋಗು ಎನ್ನುವುದು ಶ್ರೀಲೀಲಾಗೆ ಮಾಡಿದ ಅಪಮಾನ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶ್ರೀಲೀಲಾ ಫ್ಯಾನ್ಸ್ ಕೂಡ ಬೇಜಾರು ಮಾಡಿಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ
Did they tell Sreeleela to move out of frame? pic.twitter.com/hOJlSzHSir
— Nand@n (@nandantwts) June 21, 2026
ಕಡಿಮೆ ಅವಧಿಯಲ್ಲಿ ಸ್ಟಾರ್ ಆಗಿರುವ ನಟಿ
2019ರಲ್ಲಿ ಕನ್ನಡದ 'ಕಿಸ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಶ್ರೀಲೀಲಾ, 2021ರಲ್ಲಿ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ರವಿತೇಜ ಜೊತೆ ನಟಿಸಿದ್ದ 'ಧಮಾಕಾ' ಚಿತ್ರದ ಭರ್ಜರಿ ಯಶಸ್ಸಿನೊಂದಿಗೆ ಸ್ಟಾರ್ ಪಟ್ಟ ಪಡೆದುಕೊಂರು. 'ಭಗವಂತ್ ಕೇಸರಿ', 'ಗುಂಟೂರು ಕಾರಂ', 'ಸ್ಕಂದ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶ್ರೀಲೀಲಾ, 'ಪುಷ್ಪ 2: ದಿ ರೂಲ್' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಸಖತ್ ಆಗಿಯೇ ಮಿಂಚಿದರು.
‘ಪರಾಶಕ್ತಿ’ ಚಿತ್ರದ ಮೂಲಕ ಕಾಲಿವುಡ್‌ಗೂ ಎಂಟ್ರಿ ಕೊಟ್ಟಿರುವ ಶ್ರೀಲೀಲಾ, ಈಗ ಧನುಷ್ ಹೊಸ ಚಿತ್ರದಲ್ಲೂ ನಟಿಸುವ ಕ್ರೇಜಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ 'ಆಶಿಕಿ 3' ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಲಾಂಚ್ ಆಗುತ್ತಿದ್ದಾರೆ.