Ranji Trophy: ಗೋಪಾಲ್ 10 ವಿಕೆಟ್ ಸಾಧನೆ; ಕರ್ನಾಟಕಕ್ಕೆ ಗೆಲುವಿನ ಶ್ರೇಯಸ್ಸು
ವಿಕಿ ಓಸ್ಟ್ವಾಲ್, ರಾಜವರ್ಧನ್ ಹಂಗರ್ಗೇಕರ್ ಮತ್ತು ರಜನೀಶ್ ಗುರ್ಬಾನಿ ಅವರ ಅದ್ಭುತ ಪ್ರದರ್ಶನದಿಂದಾಗಿ ಮಹಾರಾಷ್ಟ್ರ ತಂಡ ಪಂಜಾಬ್ ವಿರುದ್ಧ ಇನ್ನಿಂಗ್ಸ್ ಮತ್ತು 92 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 125/4 ರೊಂದಿಗೆ ದಿನದಾಟ ಆರಂಭಿಸಿದ ಪಂಜಾಬ್ 151 ರನ್‌ಗಳಿಗೆ ಆಲೌಟ್ ಆಯಿತು.
ಗೋಪಾಲ್ 10 ವಿಕೆಟ್ ಸಾಧನೆ; ಕರ್ನಾಟಕಕ್ಕೆ ಗೆಲುವಿನ ಶ್ರೇಯಸ್ಸು -
ಹುಬ್ಬಳ್ಳಿ: ರಣಜಿ ಟ್ರೋಫಿಯ(Ranji Trophy) ತನ್ನ 5ನೇ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಅನುಭವಿ ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರ 10 ವಿಕೆಟ್ ಗೊಂಚಲು ಸಾಧನೆ ಹಾಗೂ ಸ್ಮರಣ್ ರವಿಚಂದ್ರನ್ ಅವರ ದ್ವಿಶತಕ ನೆರವಿನಿಂದ ಕರ್ನಾಟಕ ತಂಡ(Karnataka vs Chandigarh) ಚಂಡೀಗಢದ ವಿರುದ್ಧ ಇನಿಂಗ್ಸ್ ಹಾಗೂ 185 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಕರ್ನಾಟಕ ನೀಡಿದ್ದ 547 ರನ್ ಗುರಿ ಬೆನ್ನಟ್ಟಿದ ಚಂಡೀಗಢ 222ರನ್‌ಗೆ ಸರ್ವಪತನ ಕಂಡು 325 ರನ್‌ಗಳ ಹಿನ್ನೆಡೆಯೊಂದಿಗೆ ಫಾಲೋ ಆನ್ ಸಂಕಷ್ಟಕ್ಕೆ ಸಿಲುಕಿತು. ಎರಡನೇ ಇನಿಂಗ್ಸ್‌ನಲ್ಲಿ ಇನ್ನಷ್ಟು ಶೋಚನೀಯ ಬ್ಯಾಟಿಂಗ್ ನಡೆಸಿ ಕೇವಲ 140 ರನ್‌ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಚಂಡೀಗಢ ಪರ (43) ರನ್ ಗಳಿಸಿದ ಆರಂಭಿಕ ಬ್ಯಾಟರ್ ಶಿವಂ ಭಾಂಬ್ರಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಕರ್ನಾಟಕದ ಪರ ಬೌಲಿಂಗ್‌ನಲ್ಲಿ ಮಿಂಚಿದ ಶ್ರೇಯಸ್ ಗೋಪಾಲ್ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಿತ್ತರೆ ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಿತ್ತು ಒಟ್ಟು 10 ವಿಕೆಟ್ ಸಾಧನೆಗೈದರು. ಇವರಿಗೆ ಉತ್ತಮ ಸಾಥ್ ನೀಡಿದ ಶಿಖರ್ ಶೆಟ್ಟಿ ದ್ವಿತೀಯ ಇನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲಿನೊಂದಿಗೆ ಒಟ್ಟು 7 ವಿಕೆಟ್ ಕೆಡವಿದರು.
ಇದನ್ನೂ ಓದಿ IND vs SA: ಗಿಲ್‌ಗೆ ವಿಶ್ರಾಂತಿ ಸಾಧ್ಯತೆ; ಏಕದಿನ ಸರಣಿಗೆ ರಾಹುಲ್ ನಾಯಕ?
4 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದ್ದಲ್ಲಿಂದ ಮಂಗಳವಾರ ಆಟ ಮುಂದುವರಿಸಿದ ಚಂಡೀಗಢ ಪರ ನಾಯಕ ವೊಹ್ರಾ ಅಜೇಯ 106 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು. ಉಳಿದ ಯಾವುದೇ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ದ್ವಿತೀಯ ಇನಿಂಗ್ಸ್‌ನಲ್ಲಿ ವೊಹ್ರಾ 6 ರನ್ ಗಳಿಸಿ ಔಟಾದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಕರ್ನಾಟಕ ಪರ ರಣ್ ರವಿಚಂದ್ರನ್ ಅಜೇಯ 227 ರನ್ ಬಾರಿಸಿದ್ದರು. ಶ್ರೇಯಸ್ ಗೋಪಾಲ್ (62) ಮತ್ತು ಶಿಖರ್ ಶೆಟ್ಟಿ(59) ಅರ್ಧಶತಕದ ಕೊಡುಗೆ ನೀಡಿದ್ದರು. ಕರುಣ್ ನಾಯರ್ ಮೊದಲ ದಿನದಾಟದಲ್ಲಿ 95ರನ್ ಬಾರಿಸಿದ್ದರು. ಅಂತಿಮವಾಗಿ ತಂಡ 8 ವಿಕೆಟ್‌ಗೆ 547 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು.
ಪಂಜಾಬ್ ವಿರುದ್ಧ ಮಹಾರಾಷ್ಟ್ರಕ್ಕೆ ಜಯ
ವಿಕಿ ಓಸ್ಟ್ವಾಲ್, ರಾಜವರ್ಧನ್ ಹಂಗರ್ಗೇಕರ್ ಮತ್ತು ರಜನೀಶ್ ಗುರ್ಬಾನಿ ಅವರ ಅದ್ಭುತ ಪ್ರದರ್ಶನದಿಂದಾಗಿ ಮಹಾರಾಷ್ಟ್ರ ತಂಡ ಪಂಜಾಬ್ ವಿರುದ್ಧ ಇನ್ನಿಂಗ್ಸ್ ಮತ್ತು 92 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 125/4 ರೊಂದಿಗೆ ದಿನದಾಟ ಆರಂಭಿಸಿದ ಪಂಜಾಬ್ 151 ರನ್‌ಗಳಿಗೆ ಆಲೌಟ್ ಆಯಿತು, ಕೇವಲ 19 ರನ್‌ಗಳಿಗೆ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಹಂಗರ್ಗೇಕರ್ ಐದು ವಿಕೆಟ್‌ಗಳನ್ನು ಪಡೆದರೆ, ಗುರ್ಬಾನಿ ನಾಲ್ಕು ವಿಕೆಟ್‌ಗಳನ್ನು ಪಡೆದರು.
ಇದನ್ನೂ ಓದಿ Temba Bavuma: ಗುವಾಹಟಿ ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆಯುವ ಸನಿಹ ಟೆಂಬಾ ಬವುಮಾ
ಮತ್ತೊಂದು ಪಂದ್ಯದಲ್ಲಿ ರಾಜ್ ಚೌಧರಿ ಅವರ ಐದು ವಿಕೆಟ್ ಗೊಂಚಲು ಮತ್ತು ಶಿವಂ ಚೌಧರಿ ಅವರ ಮೂರು ವಿಕೆಟ್‌ಗಳ ನೆರವಿನಿಂದ ರೈಲ್ವೇಸ್ ತಂಡವು ತ್ರಿಪುರಾ ವಿರುದ್ಧ ಇನ್ನಿಂಗ್ಸ್ ಮತ್ತು 117 ರನ್‌ಗಳ ಗೆಲುವು ಸಾಧಿಸಿತು. ರೈಲ್ವೇಸ್ ತಂಡವು 446/9 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು ಮತ್ತು ತ್ರಿಪುರಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲೌಟ್ ಆಗಿ ಮೂರು ದಿನಗಳಲ್ಲಿ ಪಂದ್ಯವನ್ನು ಮುಕ್ತಾಯಗೊಳಿಸಿತು.