ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಬೌಲಿಂಗ್ ಯೋಜನೆ ಖಚಿತಪಡಿಸಿದ ಶುಭಮನ್ ಗಿಲ್

India vs New Zealand test: ಪತ್ರಿಕಾಗೋಷ್ಠಿಯಲ್ಲಿ, ಗಿಲ್ ಅವರು ರಿಷಬ್ ಪಂತ್ ಬಗ್ಗೆಯೂ ಮಾತನಾಡಿದರು. ಪಂತ್ ತಂಡದಲ್ಲಿರುವ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರು. ಅವರು ಪ್ರಪಂಚದಾದ್ಯಂತ ಶತಕಗಳನ್ನು ಸಿಡಿಸಿದ್ದಾರೆ ಎಂದು ರಿಷಬ್ ಬಗ್ಗೆ ಗಿಲ್ ಹೇಳಿದರು.

ಕಿವೀಸ್‌ ಟೆಸ್ಟ್ ಸರಣಿಗೆ ಭಾರತದ ಬೌಲಿಂಗ್ ಯೋಜನೆ ಖಚಿತಪಡಿಸಿದ ಗಿಲ್

Shubman Gill -

Abhilash BC
Abhilash BC Nov 17, 2026 9:16 AM

ವೆಲ್ಲಿಂಗ್ಟನ್‌, ನ.17: ಬೇಸಿನ್ ರಿಸರ್ವ್‌ನಲ್ಲಿ ಗುರುವಾರ (ನವೆಂಬರ್ 19) ಪ್ರಾರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಸರಣಿಯ ಮೊದಲ ಪಂದ್ಯಕ್ಕೆ ಮುನ್ನ ನಡೆದ ಸರಣಿ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಿಲ್, ನ್ಯೂಜಿಲೆಂಡ್ ವಿರುದ್ಧದ ಈ ನಿರ್ಣಾಯಕ ಸರಣಿಗಾಗಿ ಭಾರತದ ಬೌಲಿಂಗ್ ಯೋಜನೆಗಳನ್ನು ಖಚಿತಪಡಿಸಿದರು. ಅಲ್ಲದೆ, ಆಡುವ ಹನ್ನೊಂದರ ಬಳಗದಲ್ಲಿ (ಪ್ಲೇಯಿಂಗ್ ಇಲೆವೆನ್) ನಾಲ್ವರು ವೇಗದ ಬೌಲರ್‌ಗಳನ್ನು ಸೇರಿಸಿಕೊಳ್ಳುವುದಾಗಿ ಅವರು ತಿಳಿಸಿದರು.

ಆದರೆ, ಅವರು ಕಣಕ್ಕಿಳಿಯಲಿರುವ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ. ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಆಯ್ಕೆ ಮಾಡಲಾದ ಆರು ವೇಗದ ಬೌಲರ್‌ಗಳ ಪೈಕಿ, ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿರುವ ನಾಲ್ವರು ವೇಗಿಗಳ ಹೆಸರನ್ನು ತಂಡದ ಆಡಳಿತ ಮಂಡಳಿ ಇನ್ನೂ ಅಂತಿಮಗೊಳಿಸಬೇಕಿದೆ ಎಂದು ಅವರು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್‌, "ಇದು ಒಂದು ರೀತಿಯ 'ಒಳ್ಳೆಯ ತಲೆನೋವು' (ಆಯ್ಕೆಯ ಗೊಂದಲ)... ಏಕದಿನ ಸರಣಿಯಲ್ಲಿ ವೇಗದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಅಂತಿಮ ಸಂಯೋಜನೆಯ ಬಗ್ಗೆ ನಾವಿನ್ನೂ ನಿರ್ಧರಿಸುತ್ತಿದ್ದೇವೆ. ನಾವು ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದ್ದೇವೆ. ಇದು ಏಕದಿನ ಸರಣಿಗಿಂತ ದೊಡ್ಡ ಸವಾಲಾಗಿರಲಿದೆ. ನ್ಯೂಜಿಲೆಂಡ್ ತಂಡಕ್ಕೆ ಇಲ್ಲಿ ಉತ್ತಮ ದಾಖಲೆಯಿದೆ. ಸರಣಿ ರೋಚಕವಾಗಿರಲಿದೆ," ಎಂದು ಗಿಲ್ ಹೇಳಿದರು.

ಗಿಲ್ ಅವರ ಪ್ರಕಾರ, ರೆಡ್-ಬಾಲ್ ಪಂದ್ಯಗಳಲ್ಲಿ ಭಾರತವು ಏಳು ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿಯಲಿದೆ. ಇದರಲ್ಲಿ ಆಕಾಶ್ ದೀಪ್ ಮತ್ತು ಅಂಶುಲ್ ಕಂಬೋಜ್ ಅವರಂತಹ ಆಟಗಾರರಿದ್ದು, ಇವರು ಕ್ರಮವಾಗಿ 8 ಮತ್ತು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು.

ಇಂದು ಐಪಿಎಲ್​ ತಂಡಗಳ ರಿಟೇನ್​ ಪಟ್ಟಿ ಪ್ರಕಟ; ಧೋನಿ ನಿವೃತ್ತಿ ಭವಿಷ್ಯ ಪ್ರಕಟ ಸಾಧ್ಯತೆ

"ನಮ್ಮ ಬಳಿ ಏಳು ಬ್ಯಾಟರ್‌ಗಳಿರುತ್ತಾರೆ. 8 ಮತ್ತು 9ನೇ ಕ್ರಮಾಂಕದಲ್ಲಿ ಅನ್ಶುಲ್ ಮತ್ತು ಆಕಾಶ್ ಇದ್ದಾರೆ, ಇವರು ಸ್ವಲ್ಪ ಮಟ್ಟಿಗೆ ಬ್ಯಾಟಿಂಗ್ ಮಾಡಬಲ್ಲರು. ಹಾಗಾಗಿ ಇನ್ನೂ ನಿರ್ಧರಿಸಬೇಕಿದೆ, ನಿತೀಶ್ ಕೂಡ ಬ್ಯಾಟಿಂಗ್ ಮಾಡಬಲ್ಲರು. ಚೆಂಡು ಹಳೆಯದಾದಾಗ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ಪಿಚ್‌ಗೆ ಬಲವಾಗಿ ಚೆಂಡನ್ನು ಅಪ್ಪಳಿಸುವಂತೆ ಬೌಲ್ ಮಾಡಬಲ್ಲ ಆಟಗಾರನ ಅಗತ್ಯವಿದೆ" ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ, ಗಿಲ್ ಅವರು ರಿಷಬ್ ಪಂತ್ ಬಗ್ಗೆಯೂ ಮಾತನಾಡಿದರು. ಪಂತ್ ತಂಡದಲ್ಲಿರುವ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರು. ಅವರು ಪ್ರಪಂಚದಾದ್ಯಂತ ಶತಕಗಳನ್ನು ಸಿಡಿಸಿದ್ದಾರೆ ಎಂದು ರಿಷಬ್ ಬಗ್ಗೆ ಗಿಲ್ ಹೇಳಿದರು.

ಗಾಯದ ಸಮಸ್ಯೆಯಿಂದಾಗಿ 'ಇಂಡಿಯಾ ಎ' ಮತ್ತು 'ನ್ಯೂಜಿಲೆಂಡ್ ಎ' ನಡುವಿನ ಮೂರು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಪಂತ್, ಇದೀಗ ವೆಲ್ಲಿಂಗ್ಟನ್‌ನಲ್ಲಿ ಭಾರತದ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ.