ಡಾನ್ ಬ್ರಾಡ್ಮನ್ ಜತೆ ಎಲೈಟ್ ಪಟ್ಟಿ ಸೇರಿದ ಶುಭಮನ್ ಗಿಲ್
ಭಾನುವಾರ, ಗಿಲ್ 126 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಇದೇ ವೇಳೆ ನಾಯಕನಾಗಿ 82.8 ರ ಸರಾಸರಿಯಲ್ಲಿ 1076 ರನ್‌ಗಳಿಸಿದರು. ಈ ಮೂಲಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾದ ದಂತಕಥೆ ಡಾನ್ ಬ್ರಾಡ್‌ಮನ್ ಬಳಿಕ ನಾಯಕನಾಗಿ ಉತ್ತಮ ಟೆಸ್ಟ್ ಸರಾಸರಿಯನ್ನು ಹೊಂದಿದ ನಾಯಕ ಎನಿಸಿದರು. ಬ್ರಾಡ್‌ಮನ್ 101.5 ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದರು.
Shubman Gill -
ಮುಲ್ಲನ್‌ಪುರ, ಜೂ.7: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್(IND vs AFG One-off Test) ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್(Shubman Gill) ಅದ್ಭುತ ಪ್ರದರ್ಶನ ನೀಡಿದರು. ಶತಕದ ಮೂಲಕ ಸ್ಟೀವ್ ಸ್ಮಿತ್, ಕುಮಾರ್ ಸಂಗಕ್ಕಾರ ಮತ್ತು ಇತರ ಅನೇಕ ತಾರೆಯರ ಜತೆ ಎಲೈಟ್ ಪಟ್ಟಿ ಸೇರಿದರು.
ಭಾನುವಾರ, ಗಿಲ್ 126 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಇದೇ ವೇಳೆ ನಾಯಕನಾಗಿ 82.8 ರ ಸರಾಸರಿಯಲ್ಲಿ 1076 ರನ್‌ಗಳಿಸಿದರು. ಈ ಮೂಲಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾದ ದಂತಕಥೆ ಡಾನ್ ಬ್ರಾಡ್‌ಮನ್ ಬಳಿಕ ನಾಯಕನಾಗಿ ಉತ್ತಮ ಟೆಸ್ಟ್ ಸರಾಸರಿಯನ್ನು ಹೊಂದಿದ ನಾಯಕ ಎನಿಸಿದರು. ಬ್ರಾಡ್‌ಮನ್ 101.5 ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದರು.
ಗಿಲ್ ಬಳಿಕದ ನಂತರದ ಸ್ಥಾನದಲ್ಲಿ ಕುಮಾರ್ ಸಂಗಕ್ಕಾರ (69.6 ಕ್ಕೆ 1601 ರನ್), ಸ್ಟೀವನ್ ಸ್ಮಿತ್ (68.1 ಕ್ಕೆ 4425), ಮತ್ತು ಮಹೇಲ ಜಯವರ್ಧನೆ (59.1 ಕ್ಕೆ 3665). ಇದ್ದಾರೆ.
ನಾಯಕನಾಗಿ ಅತ್ಯಧಿಕ ಟೆಸ್ಟ್ ಬ್ಯಾಟಿಂಗ್ ಸರಾಸರಿ (1000+ ರನ್‌ಗಳು)
101.5 - ಡಾನ್ ಬ್ರಾಡ್ಮನ್ (3147)
82.8 - ಶುಭಮನ್ ಗಿಲ್ (1076)*
69.6 - ಕುಮಾರ್ ಸಂಗಕ್ಕಾರ (1601)
68.1 - ಸ್ಟೀವನ್ ಸ್ಮಿತ್ (4425)
59.1 - ಎಂ ಜಯವರ್ಧನೆ (3665)
ಟೀಮ್ ಇಂಡಿಯಾ ಜೊತೆ ಸೂರ್ಯವಂಶಿ ಪೋಷಕರಿಗೂ ವಿದೇಶ ಪ್ರವಾಸ ಕೈಗೊಳ್ಳುವಂತೆ ಬಿಸಿಸಿಐ ಮನವಿ
ಶನಿವಾರ 103 ರನ್ ಗಳಿಸಿದ್ದ ಶುಭಮನ್ ಗಿಲ್ 23 ರನ್ ಗಳಿಸಿ ಒಟ್ಟಾರೆ 126ರನ್ ಬಾರಿಸಿದರು. 50 ರನ್ ಗಳಿಸಿದ್ದ ರಿಷಭ್ ಪಂತ್ ತಮ್ಮ ಮೊತ್ತವನ್ನು 81ರನ್‌ಗೆ ವಿಸ್ತರಿಸಿದರು.ಈ ಜೋಡಿ 4 ವಿಕೆಟ್‌ಗೆ 169 ರನ್ ಒಟ್ಟುಗೂಡಿಸಿತು. 2ನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸುಂದರ್ 68 ಎಸೆತಗಳಿಂದ 52 ರನ್ ಬಾರಿಸಿದರು. ಅವರ ಅರ್ಧಶತಕ ಪೂರ್ತಿಗೊಳಿಸುತ್ತಿದ್ದಂತೆ ಭಾರತ ಡಿಕ್ಲೇರ್ ಘೋಷಿಸಿತು. 8 ವಿಕೆಟ್‌ಗೆ 564 ರನ್ ಬಾರಿಸಿತು.