PBKS vs RR: "ಕ್ಷಮಿಸಿ ಭಾಯ್": ಸಲ್ಮಾನ್ ಖಾನ್‌ಗೆ ಕ್ಷಮೆಯಾಚಿಸಿದ ರಾಜಸ್ಥಾನ್ ರಾಯಲ್ಸ್
Rajasthan Royals Apologise To Salman Khan: ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್‌ಗೆ ಮಧ್ಯಮ ಕ್ರಮಾಂಕದಲ್ಲಿ ಡೊನೊವನ್ ಫೆರಿಯೆರಾ ಹಾಗೂ ಶುಭಮ್ ದುಬೆ ಆಸರೆಯಾದರು. ಗೆಲುವಿಗೆ ಕೊನೆಯ ಆರು ಓವರ್‌ಗಳಲ್ಲಿ 72 ರನ್ ಬೇಕಿತ್ತು. ವೇಳೆ ಬಿರುಸಿನ ಬ್ಯಾಟಿಂಗ್ ನಡೆಸಿದ ಡೊನೊವನ್-ಶುಭಂ ಜೋಡಿ 32 ಎಸೆತಗಳಲ್ಲಿ 77 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
Rajasthan Royals Apologise To Salman Khan -
ಮುಲ್ಲಾನ್‌ಪುರ, ಎ.29: ಈ ಬಾರಿ ಐಪಿಎಲ್(IPL 2026)ನಲ್ಲಿ ಅಜೇಯವಾಗಿದ್ದ ಪಂಜಾಬ್ ಕಿಂಗ್ಸ್(PBKS vs RR) ತಂಡ ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್‌ನಿಂದ ಪರಾಭವಗೊಂಡಿತು. ರಾಜಸ್ಥಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಡೊನೊವನ್ ಫೆರಿಯೆರಾ ಅವರು"ಕ್ಷಮಿಸಿ ಭಾಯ್, ಆಜ್ ನಹಿ" ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕ್ಷಮೆಯಾಚಿಸಿದ ವಿಡಿಯೊವೊಂದನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೊ ಭಾರೀ ವೈರಲ್ ಆಗಿದೆ.
ಪ್ರೀತಿ ಜಿಂಟಾ ಸಹ-ಮಾಲೀಕತ್ವದ ಪಿಬಿಕೆಎಸ್ ಬಗ್ಗೆ ಸಲ್ಮಾನ್ ಅವರ 12 ವರ್ಷಗಳ ಹಿಂದಿನ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, ಫೆರಿಯೆರಾ, "ಕ್ಷಮಿಸಿ ಭಾಯ್, ಆಜ್ ನಹಿ (ಕ್ಷಮಿಸಿ ಸಹೋದರ, ಇವತ್ತು ಬೇಡ!)" ಎಂದು ಹೇಳುವುದನ್ನು ಕಾಣಬಹುದು. 12 ವರ್ಷಗಳ ಹಿಂದೆ ಸಲ್ಮಾನ್ ಅವರು ಪ್ರೀತಿ ಜಿಂಟಾ ಅವರ ತಂಡ ಗೆದ್ದೀತೇ? ಎಂದು ಟ್ವೀಟ್ ಮಾಡಿದ್ದರು. ಇದೇ ಟ್ವೀಟ್‌ಗೆ ರಾಜಸ್ಥಾನ್ ಟಕ್ಕರ್ ನೀಡಿದೆ.
ವೈರಲ್ ವಿಡಿಯೊ ಇಲ್ಲಿದೆ
https://t.co/U2s15XO2hS pic.twitter.com/YMhtLXRbsG
— Rajasthan Royals (@rajasthanroyals) April 28, 2026
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 4 ವಿಕೆಟ್ ನಷ್ಟದಲ್ಲಿ 222 ರನ್ ಕಲೆಹಾಕಿತು. ಎಂದಿನಂತೆ ಪಂಜಾಬ್ ಈ ಪಂದ್ಯದಲ್ಲೂ ಸ್ಫೋಟಕ ಆರಂಭ ಪಡೆಯಿತು. ಪ್ರಿಯಾನ್ಶ್ ಆರ್ಯ 11 ಎಸೆತಕ್ಕೆ 29 ರನ್ ಗಳಿಸಿದರೆ, ಕೂಪರ್ ಕೊನೊಲಿ 14 ಎಸೆತಕ್ಕೆ 30 ರನ್ ಬಾರಿಸಿದರು. ಪ್ರಭ್‌ಸಿಮ್ರನ್ 44 ಎಸೆತಕ್ಕೆ 59, ಶ್ರೇಯಸ್ ಅಯ್ಯರ್ 27 ಎಸೆತಕ್ಕೆ 30 ರನ್ ಗಳಿಸಿದರು. ಮಧ್ಯಮ ಓವರ್‌ಗಳಲ್ಲಿ ತಂಡದ ರನ್ ವೇಗಕ್ಕೆ ಕಡಿವಾಣ ಬಿದ್ದರೂ ಕೊನೆಯಲ್ಲಿ ಆರ್ಭಟಿಸಿದ ಸ್ಟೋಯ್ನಿಸ್, ಕೇವಲ 22 ಎಸೆತಗಳಲ್ಲಿ ಔಟಾಗದೆ 62 ರನ್ ಸಿಡಿಸಿದರು.
IPL 2026: ಸ್ಫೋಟಕ ಬ್ಯಾಟಿಂಗ್ ಮೂಲಕವೇ ಐಪಿಎಲ್‌ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಸೂರ್ಯವಂಶಿ
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್‌ಗೆ ಮಧ್ಯಮ ಕ್ರಮಾಂಕದಲ್ಲಿ ಡೊನೊವನ್ ಫೆರಿಯೆರಾ ಹಾಗೂ ಶುಭಮ್ ದುಬೆ ಆಸರೆಯಾದರು. ಗೆಲುವಿಗೆ ಕೊನೆಯ ಆರು ಓವರ್‌ಗಳಲ್ಲಿ 72 ರನ್ ಬೇಕಿತ್ತು. ವೇಳೆ ಬಿರುಸಿನ ಬ್ಯಾಟಿಂಗ್ ನಡೆಸಿದ ಡೊನೊವನ್-ಶುಭಂ ಜೋಡಿ 32 ಎಸೆತಗಳಲ್ಲಿ 77 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿನ ಸಿಕ್ಸರ್ ಹೊಡೆದ ಡೊನೊವನ್, ಅರ್ಧಶತಕವನ್ನೂ ಪೂರ್ಣಗೊಳಿಸಿಕೊಂಡರು. ಶುಭಂ 12 ಎಸೆತಕ್ಕೆ ಔಟಾಗದೆ 31 ರನ್ ಗಳಿಸಿದರೆ, ಡೊನೊವನ್ 25 ಎಸೆತಕ್ಕೆ ಔಟಾಗದೆ 52 ರನ್ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್: ಪಂಜಾಬ್ 20 ಓವರಲ್ಲಿ 222/4 (ಸ್ಟೋಯ್ನಿಸ್ 62, ಪ್ರಭ್‌ಸಿಮ್ರನ್ 59, ಯಶ್‌ರಾಜ್ 2-41), ರಾಜಸ್ಥಾನ 19.2 ಓವರಲ್ಲಿ 228/4 (ಫೆರಿಯೆರಾ ಔಟಾಗದೆ 52, ಜೈಸ್ವಾಲ್ 51, ವೈಭವ್ 43, ಚಹಲ್ 3-36).