SRH vs MI: ವಿವಾದಕ್ಕೆ ಕಾರಣವಾದ ಇಶಾನ್ ಕಿಶನ್ ಔಟ್ ತೀರ್ಪು
ಘಟನೆಯ ವಿಡಿಯೊ ವೈರಲ್ ಆಗಿದ್ದು. ಕೆಲವರು ಅಂಪೈರ್ ಅವರದ್ದು ತಪ್ಪು ಎಂದರೆ, ಇನ್ನು ಕೆಲವರು ಇಶಾನ್ ಕಿಶನ್‌ರದ್ದೇ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲ ನೆಟ್ಟಿಗರು ಇಶಾನ್ ಕಿಶನ್ ಮತ್ತು ಅಂಪೈರ್ ಮುಂಬೈ ಇಂಡಿಯನ್ಸ್ ಜತೆ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಕಾಲೆಳೆದಿದ್ದಾರೆ.


ಹೈದರಾಬಾದ್: ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್(SRH vs MI) ವಿರುದ್ಧದ ಪಂದ್ಯದಲ್ಲಿ(IPL 2025) ಎದುರಾಳಿ ತಂಡದ ಆಟಗಾರರು ಔಟ್‌ಗೆ ಮನವಿ ಮಾಡದಿದ್ದರೂ ಇಶಾನ್ ಕಿಶನ್(Ishan Kishan)ಗೆ ಅಂಪೈರ್ ಔಟ್ ನೀಡಿದ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ದೀಪಕ್ ಚಹರ್ ಎಸೆದ ದ್ವಿತೀಯ ಓವರ್‌ನ ದ್ವಿತೀಯ ಎಸೆತ ಲೆಗ್‌ಸೈಡ್‌ನತ್ತ ಸಾಗಿ ಕೀಪರ್ ಕೈ ಸೇರಿತು. ದೀಪಕ್ ಚಹರ್ ಮತ್ತು ಮುಂಬೈ ಆಟಗಾರರು ವೈಡ್ ಎಸೆತ ಎಂದು ಸುಮ್ಮನಾದರು. ಆದರೆ ಫೀಲ್ಡ್ ಅಂಪೈರ್ ವಿನೋದ್, ಎದುರಾಳಿ ತಂಡದ ಆಟಗಾರರು ಔಪಚಾರಿಕ ಮೇಲ್ಮನವಿ ಸಲ್ಲಿಸದಿದ್ದರೂ ಬೆರಳು ಮೇಲೆತ್ತಿ ಔಟ್ ನೀಡಿದರು. ಇದನ್ನು ಕಂಡ ಮುಂಬೈ ಆಟಗಾರರು ಆಶ್ಚರ್ಯಚಕಿತರಾದರು.
Sad to say but today's match is fixed 🥲
— Aditya Raut (@AdityaR40857803) April 23, 2025
Not a great acting by ishan kishan, umpire & Mumbai Indian players 🤨#SRHvsMI #fixing #IPL pic.twitter.com/hPxyRnGt2J
ಕ್ರೀಸ್‌ನಲ್ಲಿದ್ದ ಇಶಾನ್ ಔಟ್ ಎಂದು ಪೆವಿಯನ್ ಸೇರಿದರು. ಆದರೆ ಮೂರನೇ ಅಂಪೈರ್ ಟಿವಿ ರಿಪ್ಲೇಯಲ್ಲಿ ಪರೀಕ್ಷಿಸುವಾಗ ಚೆಂಡು ಬ್ಯಾಟ್‌ಗೆ ತಗುಲಿಯೇ ಇಲ್ಲ ಎಂಬುದು ಕಂಡು ಬಂತು. ಇದನ್ನು ಕಂಡ ಇಶಾನ್ ಬೇಸರದಿಂದ ಡಗೌಟ್‌ನಲ್ಲಿ ಕಣ್ಣೀರು ಸುರಿದರು. ರಿವ್ಯೂ ಪಡೆಯುವ ಅವಕಾಶವಿದ್ದರೂ ಆತುರದಿಂದ ಮಾಡಿದ ತಮ್ಮ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟರು. ಅವರ ಈ ಒಂದು ತಪ್ಪಿನಿಂದ ತಂಡಕ್ಕೂ ಭಾರೀ ಹಿನ್ನಡೆಯಾಯಿತು.
ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು. ಕೆಲವರು ಅಂಪೈರ್ ಅವರದ್ದು ತಪ್ಪು ಎಂದರೆ, ಇನ್ನು ಕೆಲವರು ಇಶಾನ್ ಕಿಶನ್‌ರದ್ದೇ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲ ನೆಟ್ಟಿಗರು ಇಶಾನ್ ಕಿಶನ್ ಮತ್ತು ಅಂಪೈರ್ ಮುಂಬೈ ಇಂಡಿಯನ್ಸ್ ಜತೆ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ IPL 2025 Points Table: ದ್ವಿತೀಯ ಸ್ಥಾನದಲ್ಲೇ ಮುಂದುವರಿದ ಡೆಲ್ಲಿ ಕ್ಯಾಪಿಟಲ್ಸ್
ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ತೋರಿದ ಹೈದರಾಬಾದ್ ಪವರ್ ಪ್ಲೇ ಮುಕ್ತಾಯದಲ್ಲಿ ಕೇವಲ 24 ರನ್ ಗಳಿಸಿ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಇನ್ನೇನು 50 ರನ್‌ಗೆ ಗಂಟು ಮೂಟೆ ಕಟ್ಟುತ್ತದೆ ಎನ್ನುವಾಗ ಹೆನ್ರಿಚ್ ಕ್ಲಾಸೆನ್ ಬಾರಿಸಿದ ಅರ್ಧಶತಕ ಮತ್ತು ಕನ್ನಡಿಗ ಅಭಿನವ್ ಮನೋಹರ್ ಅವರ ಬ್ಯಾಟಿಂಗ್ ಹೋರಾಟದ ನೆರವಿನಿಂದ 100 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. 44 ಎಸೆತ ಎದುರಿಸಿದ ಕ್ಲಾಸೆನ್ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 71 ರನ್ ಬಾರಿಸಿ ಜಸ್‌ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು.