Sunil Gavaskar gift: ಶುಭಮನ್ ಗಿಲ್‌ಗೆ ವಿಶೇಷ ಉಡುಗೊರೆ ನೀಡಿದ ದಿಗ್ಗಜ ಗವಾಸ್ಕರ್
ಭಾರತದ ಮಾಜಿ ನಾಯಕ ಮತ್ತು ದಂತಕಥೆ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರು ಗಿಲ್‌ಗೆ ತಾವು ಸಹಿ ಮಾಡಿದ ಕ್ಯಾಪ್ ಮತ್ತು ಕಸ್ಟಮ್ ಎಸ್‌ಜಿ-ಬ್ರಾಂಡ್ ಟಿ-ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದರು. ಇದೇ ವೇಳೆ ತಂಡಕ್ಕೂ ಶುಭ ಹಾರೈಸಿದರು.


ಲಂಡನ್: ತೆಂಡುಲ್ಕರ್-ಆ್ಯಂಡರ್‌ಸನ್ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳಲು ದಿಟ್ಟ ಹೋರಾಟ ನಡೆಸುತ್ತಿರುವ ಭಾರತ ತಂಡದ ನಾಯಕ ಶುಭಮನ್ ಗಿಲ್‌ಗೆ(Shubman Gill) ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್(Sunil Gavaskar) ಸ್ಮರಣೀಯ ಉಡುಗೊರೆಯನ್ನು ನೀಡಿ ಗೌರವಿಸಿದ್ದಾರೆ. ಶನಿವಾರ ಮೂರನೇ ದಿನದಾಟ ಮುಗಿದ ಬಳಿಕ ಗವಾಸ್ಕರ್(Sunil Gavaskar gift) ವಿಶೇಷ ಗಿಫ್ಟ್ ನೀಡಿದರು.
ಭಾರತದ ಮಾಜಿ ನಾಯಕ ಮತ್ತು ದಂತಕಥೆ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರು ಗಿಲ್‌ಗೆ ತಾವು ಸಹಿ ಮಾಡಿದ ಕ್ಯಾಪ್ ಮತ್ತು ಕಸ್ಟಮ್ ಎಸ್‌ಜಿ-ಬ್ರಾಂಡ್ ಟಿ-ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದರು. ಇದೇ ವೇಳೆ ತಂಡಕ್ಕೂ ಶುಭ ಹಾರೈಸಿದರು.
"ಲಕ್ಕಿ ಜಾಕೆಟ್" ಎಂದು ಕರೆಯುವ ಜಾಕೆಟ್ ಅನ್ನು ಧರಿಸಿ ನಾನು ಕಾಮೆಂಟರಿ ಬಾಕ್ಸ್‌ನಿಂದ ತಂಡವನ್ನು ಹುರಿದುಂಬಿಸುವೆ. 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಐಕಾನಿಕ್ ಗಬ್ಬಾ ಗೆಲುವಿನ ಸಮಯದಲ್ಲಿ ಈ ಜಾಕೆಟ್ ಧರಿಸಿದ್ದ ಅದೇ ಜಾಕೆಟ್ ನಾನು ನಾಲ್ಕನೇ ದಿನ ಭಾನುವಾರ ಧರಿಸಿ ನಾನು ನಿಮ್ಮನ್ನು ಬೆಂಬಲಿಸುತ್ತೇನೆ" ಎಂದು ಗವಾಸ್ಕರ್ ಗಿಲ್‌ಗೆ ಹೇಳಿದರು. ಸರಣಿ ಇನ್ನೂ ಜೀವಂತವಾಗಿದ್ದು, ಭಾರತ ತಂಡವು 2-2 ಅಂತರದಲ್ಲಿ ಸಮಬಲ ಸಾಧಿಸುವ ಬಲವಾದ ಅವಕಾಶವನ್ನು ಹೊಂದಿದ್ದು ನಾಲ್ಕನೇ ದಿನವಾದ ಭಾನುವಾರ ಭಾರತ 9 ವಿಕೆಟ್ ಕೀಳಬೇಕಿದೆ.
A wholesome moment between Shubman Gill & Sunil Gavaskar 😍#SonySportsNetwork #ENGvIND #NayaIndia #DhaakadIndia #TeamIndia #ExtraaaInnings | @ShubmanGill pic.twitter.com/2wYhLiMCAR
— Sony Sports Network (@SonySportsNetwk) August 2, 2025
2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 75 ರನ್ ಗಳಿಸಿದ್ದ ಭಾರತ, 3ನೇ ದಿನವಾದ ಶನಿವಾರ ಸ್ಫೋಟಕ ಬ್ಯಾಟಿಂಗ್ ನಡೆಸಿ 396 ರನ್‌ಗೆ ಆಲೌಟ್ ಆಯಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ಆತಿಥೇಯ ಇಂಗ್ಲೆಂಡ್ ತಂಡವು ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದ್ದು, ಇನ್ನೂ 324 ರನ್ ಗಳಿಸಬೇಕಿದೆ. ದಿನದಾಟದ ಕೊನೆಯಲ್ಲಿ ಜಾಕ್ ಕ್ರಾಲಿ ವಿಕೆಟ್ ಕಿತ್ತು ಮೊಹಮ್ಮದ್ ಸಿರಾಜ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬೆನ್ ಡಕೆಟ್ 34 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ IND vs ENG 5th Test: ಯಶಸ್ವಿ ಜೈಸ್ವಾಲ್ ಶತಕ, ಮೂರನೇ ದಿನ ಭಾರತ ತಂಡಕ್ಕೆ ಮೇಲುಗೈ!