ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೃಹತ್‌ ಮೊತ್ತ ಪೇರಿಸಿಯೂ ಸೋಲು ಕಂಡ ಆಫ್ಘಾನ್‌; ಕಿವೀಸ್‌ಗೆ 5 ವಿಕೆಟ್‌ ಜಯ

T20 World Cup 2026: ಫಿಲಿಪ್ಸ್‌ 8 ರನ್‌ ಅಂತರದಿಂದ ಅರ್ಧಶತಕ ವಂಚಿತರಾದರು. ಅವರು 25 ಎಸೆತಗಳಿಂದ 42 ರನ್‌ ಗಳಿಸಿದರು. ಅಂತಿಮವಾಗಿ ಡೇರಿಯಲ್‌ ಮಿಚೆಲ್‌(25*) ಮತ್ತು ಮಿಚೆಲ್‌ ಸ್ಯಾಂಟ್ನರ್‌ 17* ರನ್‌ ಬಾರಿಸಿ ತಂಡವನ್ನು ಗೆಲುವಿನ ಹಳಿ ಸೇರಿಸಿದರು. ಮುಜೀಬ್ ಉರ್ ರೆಹಮಾನ್ 2 ವಿಕೆಟ್‌ ಪಡೆದರೂ ತಂಡ ಸೋತ ಕಾರಣ ಅವರ ಶ್ರಮ ವ್ಯರ್ಥವಾಯಿತು.

ಕಿವೀಸ್‌ ವಿರುದ್ಧ ಬೃಹತ್‌ ಮೊತ್ತ ಪೇರಿಸಿಯೂ ಸೋಲು ಕಂಡ ಆಫ್ಘಾನ್‌

Tim Seifert and Rashid Khan -

Abhilash BC
Abhilash BC Feb 8, 2026 4:49 PM

ಚೆನ್ನೈ, ಫೆ.8: ಭಾನುವಾರದ ಮೊದಲ ಟಿ20 ವಿಶ್ವಕಪ್(T20 World Cup 2026) ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌(AFG vs NZ) ತಂಡ ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸದ್ಯ 'ಡಿ' ಗ್ರೂಪ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಸೋಲು ಕಂಡ ಆಫ್ಘಾನ್‌ ಕೊನೆಯ ಸ್ಥಾನಿಯಾಗಿದೆ.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ, ಗುಲ್ಬದಿನ್ ನೈಬ್(63) ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ 17.5 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ನಷ್ಟಕ್ಕೆ 183 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಆಫ್ಘಾನ್‌, 50 ರನ್‌ ಕಲೆಹಾಕುವ ಮುನ್ನವೇ 2 ವಿಕೆಟ್‌ ಕಳೆದುಕೊಂಡಿತು. ರಹಮಾನುಲ್ಲಾ ಗುರ್ಬಾಜ್(27) ಮತ್ತು ಇಬ್ರಾಹಿಂ ಜದ್ರಾನ್(10) ರನ್‌ಗೆ ಆಟ ಮುಗಿಸಿದರು. ಮೂರನೇ ವಿಕೆಟ್‌ಗೆ ಜತೆಯಾದ ಗುಲ್ಬದಿನ್ ನೈಬ್ ಮತ್ತು ಸೆಡಿಕುಲ್ಲಾ ಅಟಲ್ ಉತ್ತಮ ಜತೆಯಾಟ ಸಂಘಟಿಸುವ ಮೂಲಕ ಕಿವೀಸ್‌ ಬೌಲರ್‌ಗಳನ್ನು ಕೆಲ ಕಾಲ ಕಾಡಿದರು.

ಉಭಯ ಆಟಗಾರರು ಮೂರನೇ ವಿಕೆಟ್‌ಗೆ 51 ಎಸೆತಗಳಿಂದ 79 ರನ್‌ ಒಟ್ಟುಗೂಡಿಸಿದರು. ಗುಲ್ಬದಿನ್ ನೈಬ್ 4 ಸಿಕ್ಸರ್‌ ಮತ್ತು 3 ಬೌಂಡರಿ ನೆರವಿನಿಂದ 63 ರನ್‌ ಬಾರಿಸಿದರೆ, ಸೆಡಿಕುಲ್ಲಾ 29 ರನ್‌ ಕೊಡುಗೆ ನೀಡಿದರು. ನ್ಯೂಜಿಲ್ಯಾಂಡ್‌ ಪರ ಲ್ಯಾಕಿ ಫರ್ಗುಸನ್‌ 2 ವಿಕೆಟ್‌ ಕಿತ್ತರೂ 40 ರನ್‌ ಬಿಟ್ಟುಕೊಟ್ಟರು.

ಗೆಲುವಿನ ಇನಿಂಗ್ಸ್‌ ಆಡಿ ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್‌

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ಫಿನ್‌ ಅಲೆನ್‌(1) ಮತ್ತು ರಚಿನ್‌ ರವೀಂದ್ರ(0) ವಿಕೆಟ್‌ ಕಳೆದುಕೊಂಡು ಆರಂಭದಲ್ಲೇ ಆಘಾತ ಎದುರಿಸಿದರೂ, ಟಿಮ್‌ ಸಿಫರ್ಟ್‌ ಮತ್ತು ಗ್ಲೆನ್‌ ಫಿಲಿಪ್ಸ್‌ ಆಕ್ರಮಣಕಾರಿ ಬ್ಯಾಟಿಂಗ್‌ ನೆರವಿನಿಂದ ಚೇತರಿಕೆ ಕಂಡಿತು. ಉಭಯ ಆಟಗಾರರು ಸೇರಿಕೊಂಡು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಟಿಮ್‌ ಸಿಫರ್ಟ್‌ 65 ರನ್‌ ಬಾರಿಸಿ ಅರ್ಧಶತಕ ಪೂರೈಸಿದರು. ಆದರೆ ಫಿಲಿಪ್ಸ್‌ 8 ರನ್‌ ಅಂತರದಿಂದ ಅರ್ಧಶತಕ ವಂಚಿತರಾದರು. ಅವರು 25 ಎಸೆತಗಳಿಂದ 42 ರನ್‌ ಗಳಿಸಿದರು. ಅಂತಿಮವಾಗಿ ಡೇರಿಯಲ್‌ ಮಿಚೆಲ್‌(25*) ಮತ್ತು ಮಿಚೆಲ್‌ ಸ್ಯಾಂಟ್ನರ್‌ 17* ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಜೀಬ್ ಉರ್ ರೆಹಮಾನ್ 2 ವಿಕೆಟ್‌ ಪಡೆದರೂ ತಂಡ ಸೋತ ಕಾರಣ ಅವರ ಶ್ರಮ ವ್ಯರ್ಥವಾಯಿತು.

ಆಫ್ಘಾನ್‌ಗೆ ಮೊದಲ ಸೋಲು

ಅಫ್ಘಾನಿಸ್ತಾನ ಟಿ20 ಕ್ರಿಕೆಟ್‌ನಲ್ಲಿ 180 ಪ್ಲಸ್‌ ಮೊತ್ತ ಬಾರಿಸಿ ಸೋಲು ಕಂಡ ಮೊದಲ ನಿದರ್ಶನ ಇದಾಗಿದೆ. ಈ ಹಿಂದೆ 25 ಪಂದ್ಯಗಳಲ್ಲಿ 180 ಪ್ಲಸ್‌ ಮೊತ್ತ ಬಾರಿಸಿ ಎಲ್ಲ ಪಂದ್ಯ ಗೆದ್ದಿತ್ತು. ಮತ್ತೊಂದೆಡೆ ನ್ಯೂಜಿಲ್ಯಾಂಡ್‌ ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಯಶಸ್ವಿ ರನ್ ಚೇಸ್‌ ದಾಲೆಯನ್ನು ನಿರ್ಮಿಸಿತು.