ತೀಕ್ಷಣ, ಹಸರಂಗ ಸ್ಪಿನ್ ಜಾದೂ; ಲಂಕಾಗೆ 20 ರನ್ ಗೆಲುವು
Sri Lanka vs Ireland: ಚೇಸಿಂಗ್ ವೇಳೆ ಐರ್ಲೆಂಡ್‌ಗೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜತೆಯಾಟ ಲಭಿಸಲಿಲ್ಲ. ರಾಸ್ ಅಡೈರ್(34) ಮತ್ತು ಹ್ಯಾರಿ ಟೆಕ್ಟರ್(40) ಹೊರತುಪಡಿಸಿ ಉಳಿದವರಿಂದ ದೊಡ್ಡ ಗಳಿಕೆ ಸಾಧ್ಯವಾಗಲಿಲ್ಲ. ವಿಕೆಟ್ ಕೀಪರ್ ಲೋರ್ಕನ್ ಟಕರ್(21) ರನ್ ಕೊಡುಗೆ ನೀಡಿದರು. ಆದರೆ ಇವರ ವಿಕೆಟ್ ಪತನದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು.
Maheesh Theekshana brings out his bow and arrow -
ಕೊಲಂಬೊ, ಫೆ.8: ಟಿ20 ವಿಶ್ವಕಪ್(T20 World Cup 2026)ಗೆ ಜಂಟಿ ಆತಿಥ್ಯವಹಿಸಿರುವ ಶ್ರೀಲಂಕಾ(Sri Lanka vs Ireland) ತಂಡ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಭಾನುವಾರ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ಎದುರು 20 ರನ್‌ಗಳ ಗೆಲುವು ದಾಖಲಿಸಿತು. ಇದಕ್ಕೂ ಮುನ್ನ ನಡೆದ ದಿನದ ಇತರ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಗೆಲುವು ಸಾಧಿಸಿದವು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 163 ರನ್ ಬಾರಿಸಿತು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಐರ್ಲೆಂಡ್ 19.5 ಓವರ್‌ಗಳಲ್ಲಿ 143 ರನ್‌ಗೆ ಸರ್ವಪತನ ಕಂಡಿತು. ಲಂಕಾ ಪರ ಸ್ಪಿನ್‌ದ್ವಯರಾದ ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗ ತಲಾ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ವೇಗಿ ಮಥೀಷ ಪತಿರಾನ 2 ವಿಕೆಟ್ ಪಡೆದರು.
ಚೇಸಿಂಗ್ ವೇಳೆ ಐರ್ಲೆಂಡ್‌ಗೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜತೆಯಾಟ ಲಭಿಸಲಿಲ್ಲ. ರಾಸ್ ಅಡೈರ್(34) ಮತ್ತು ಹ್ಯಾರಿ ಟೆಕ್ಟರ್(40) ಹೊರತುಪಡಿಸಿ ಉಳಿದವರಿಂದ ದೊಡ್ಡ ಗಳಿಕೆ ಸಾಧ್ಯವಾಗಲಿಲ್ಲ. ವಿಕೆಟ್ ಕೀಪರ್ ಲೋರ್ಕನ್ ಟಕರ್(21) ರನ್ ಕೊಡುಗೆ ನೀಡಿದರು. ಆದರೆ ಇವರ ವಿಕೆಟ್ ಪತನದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು.
ರಣಜಿ ಕ್ವಾರ್ಟರ್‌ಫೈನಲ್: ಗೆಲುವಿನ ನಿರೀಕ್ಷೆಯಲ್ಲಿ ಕರ್ನಾಟಕ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಪರ ಕುಸಲ್ ಮೆಂಡಿಸ್ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. ಬೌಂಡರಿಗಷ್ಟೇ ಸೀಮಿತವಾದ ಅವರು 43 ಎಸೆತಗಳಲ್ಲಿ 5 ಬೌಂಡರಿ ಬಾರಿಸುವ ಮೂಲಕ 56 ರನ್ ಗಳಿಸಿದರು.
ಉಳಿದಂತೆ ಕಾಮಿಂಡು ಮೆಂಡಿಸ್(44) ರನ್ ಕಲೆಹಾಕಿದರು. ನಾಯಕ ದಸುನ್ ಶನಕ ಗೋಲ್ಟನ್ ಡಕ್ ಸಂಕಟಕ್ಕೆ ಸಿಲುಕಿದರು. ಆರಂಭಕಾರ ಪಾತುಂ ನಿಸ್ಸಾಂಕ(24) ರನ್ ಗಳಿಸಿದರು. ಐರ್ಲೆಂಡ್ ಪರ ಬೌಲಿಂಗ್‌ನಲ್ಲಿ ಬ್ಯಾರಿ ಮೆಕಾರ್ಥಿ ಮತ್ತು ಜಾರ್ಜ್ ಡಾಕ್ರೆಲ್ ತಲಾ ಎರಡು ವಿಕೆಟ್ ಪಡೆದರು.