ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹ್ಯಾಟ್ರಿಕ್‌ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ; ಐರ್ಲೆಂಡ್‌, ಇಂಗ್ಲೆಂಡ್‌ಗೂ ಗೆಲುವಿನ ಸಿಹಿ

T20 World Cup: ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿದ ಇಂಗ್ಲೆಂಡ್‌ ಸದ್ಯ 'ಸಿ' ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿದೆ. ಇನ್ನೊಂದು ಪಂದ್ಯದಲ್ಲಿ ಗೆದ್ದರಷ್ಟೇ ತಂಡ ಸೂಪರ್‌-8 ಹಂತಕ್ಕೆ ಪ್ರವೇಶ ಪಡೆಯಲಿದೆ. ಇಂಗ್ಲೆಂಡ್‌ ಪರ ಚೇಸಿಂಗ್‌ ವೇಳೆ ಟಾಮ್ ಬ್ಯಾಂಟನ್ ತಂಡಕ್ಕೆ ನೆರವಾದರು. 41 ಎಸೆತ ಎದುರಿಸಿದ ಅವರು 3 ಸಿಕ್ಸರ್‌ ಮತ್ತು 4 ಬೌಂಡರಿ ಸಿಡಿಸಿ ಅಜೇಯ 63ರನ್‌ ಗಳಿಸಿದರು.

ಹ್ಯಾಟ್ರಿಕ್‌ ಗೆಲುವು; ದಕ್ಷಿಣ ಆಫ್ರಿಕಾದ ಸೂಪರ್‌-8 ಪ್ರವೇಶ ಬಹುತೇಕ ಖಚಿತ

Aiden Markram -

Abhilash BC
Abhilash BC Feb 14, 2026 11:06 PM

ಅಹಮಾದಾಬಾದ್‌, ಫೆ.14: ಹಾಲಿ ಟಿ20 ವಿಶ್ವಕಪ್‌(T20 World Cup)ನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ತಂಡ 'ಡಿ' ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಬಹುತೇಕ ಸೂಪರ್‌-8 ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಶನಿವಾರದ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್‌ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಸತತ ಎರಡು ಗೆಲುವು ಸಾಧಿಸಿದ್ದ ಕಿವೀಸ್‌ಗೆ ಇದು ಮೊದಲ ಸೋಲು.

ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ಆರಂಭಿಕ ಆಘಾತದ ಹೊರತಾಗಿಯೂ 7 ವಿಕೆಟ್‌ಗೆ ಸವಾಲಿನ 175 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ, ನಾಯಕ ಐಡೆನ್‌ ಮಾರ್ಕ್ರಮ್‌ ಅವರ ಸ್ಫೋಟಕ ಅರ್ಧಶತಕದ ನೆರತವಿನಿಂದ 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 178 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಐಡೆನ್‌ ಮಾರ್ಕ್ರಮ್‌ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್‌ಗೆ ಒತ್ತುಕೊಟ್ಟು 19 ಎಸೆತಗಳಲ್ಲಿ ಅರ್ಧಶತ ಪೂರೈಸಿದರು. ಒಟ್ಟು 44 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ಅಜೇಯ 86 ರನ್‌ ಗಳಿಸಿದರು. ಡೇವಿಡ್‌ ಮಿಲ್ಲರ್‌ 24* ರನ್‌ ಬಾರಿಸಿದರು. ಬೌಲಿಂಗ್‌ನಲ್ಲಿ ಮಿಂಚಿದ ಮಾರ್ಕೊ ಜಾನ್ಸೆನ್‌ 4 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನ್ಯೂಜಿಲ್ಯಾಂಡ್‌ ಪರ ಮಾರ್ಕ್‌ ಚಾಪ್‌ಮನ್‌(48) ಮತ್ತು ಜೇಮ್ಸ್‌ ನೀಶಮ್‌(23) ರನ್‌ ಬಾರಿಸಿದರು.

IND vs PAK; ಭಾರತ-ಪಾಕ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ಆಡುವ ಬಳಗ

ಇಂಗ್ಲೆಂಡ್‌ಗೆ 5 ವಿಕೆಟ್‌ ಜಯ

ಟಾಮ್ ಬ್ಯಾಂಟನ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ ತಂಡ ಶನಿವಾರ ನಡೆದ ಟಿ20 ವಿಶ್ವಕಪ್‌ನ 23ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ 5 ವಿಕೆಟ್‌ ಗೆಲುವು ಸಾಧಿಸಿದೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಸ್ಕಾಟ್ಲೆಂಡ್‌ 19.4 ಓವರ್‌ಗಳಲ್ಲಿ 152ರನ್‌ಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 18.2 ಓವರ್‌ಗಳಲ್ಲಿ 5 ವಿಕೆಟ್‌ಗೆ 155 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿದ ಇಂಗ್ಲೆಂಡ್‌ ಸದ್ಯ 'ಸಿ' ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿದೆ. ಇನ್ನೊಂದು ಪಂದ್ಯದಲ್ಲಿ ಗೆದ್ದರಷ್ಟೇ ತಂಡ ಸೂಪರ್‌-8 ಹಂತಕ್ಕೆ ಪ್ರವೇಶ ಪಡೆಯಲಿದೆ. ಇಂಗ್ಲೆಂಡ್‌ ಪರ ಚೇಸಿಂಗ್‌ ವೇಳೆ ಟಾಮ್ ಬ್ಯಾಂಟನ್ ತಂಡಕ್ಕೆ ನೆರವಾದರು. 41 ಎಸೆತ ಎದುರಿಸಿದ ಅವರು 3 ಸಿಕ್ಸರ್‌ ಮತ್ತು 4 ಬೌಂಡರಿ ಸಿಡಿಸಿ ಅಜೇಯ 63ರನ್‌ ಗಳಿಸಿದರು. ಉಳಿದಂತೆ ಜೇಬ್‌ ಬೆಥಲ್‌(32), ಸ್ಯಾಮ್‌ ಕರನ್(‌28)ರನ್‌ ಗಳಿಸಿದರು.

ಐರ್ಲೆಂಡ್‌ಗೆ ಭರ್ಜರಿ ಗೆಲುವು

ಇದಕ್ಕೂ ಮುನ್ನ ನಡೆದ ದಿನದ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ತಂಡ ಒಮಾನ್‌ ಎದುರು 96 ರನ್‌ಗಳ ಭರ್ಜರಿ ಗೆಲವು ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಐರ್ಲೆಂಡ್‌ 5 ವಿಕೆಟ್‌ಗೆ 235 ರನ್‌ ಬಾರಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ದಾಖಲಾದ ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿದೆ. 2007ರ ಆವೃತ್ತಿಯಲ್ಲಿ ಕೀನ್ಯಾ ವಿರುದ್ಧ 260 ರನ್‌ ಬಾರಿಸಿತ್ತು.

ಸವಾಲಿನ ಗುರಿ ಹಿಂಬಾಲಿಸಿದ ಒಮಾನ್‌ ತಂಡ ಸಂಪೂರ್ಣ ಬ್ಯಾಟಿಂಗ್‌ ವೈಫಲ್ಯ ಎದುರಿಸಿತು. 18 ಓವರ್‌ಗಳಲ್ಲಿ 139ರನ್‌ಗೆ ಸರ್ವಪತನ ಕಂಡಿತು. ಐರ್ಲೆಂಡ್‌ ಪರ ಬಿರುಸಿನ ಬ್ಯಾಟಿಂಗ್‌ ನಡೆಸಿದ ವಿಕೆಟ್‌ ಕೀಪರ್‌ ಲೋರ್ಕನ್ ಟಕರ್ ಅಜೇಯ 94 ರನ್‌ ಗಳಿಸಿದರು. ಅವರ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದರು.