Women’s Cricket World Cup: ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಹಿನ್ನೋಟ
Women’s ODI World Cup 2025: ಒಟ್ಟಾರೆಯಾಗಿ ಭಾರತ ಎರಡು ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲಲೂ ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾ ದಾಖಲೆಯ 7 ವಿಶ್ವಕಪ್ ಜಯಿಸಿದೆ. ಇಂಗ್ಲೆಂಡ್ 4, ನ್ಯೂಜಿಲ್ಯಾಂಡ್ ಒಂದು ಬಾರಿ ಪ್ರಶಸ್ತಿ ಗೆದ್ದಿದೆ. ಬಾರಿಯಾದರೂ ಭಾರತ ಚೊಚ್ಚಲ ವಿಶ್ವಕಪ್ ಗೆಲ್ಲಲಿ ಎನ್ನುವುದು ಭಾರತೀಯರ ಆಶಯ.

-

ಬೆಂಗಳೂರು: 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ(Women’s ODI World Cup 2025) ಆರಂಭಕ್ಕೆ ಇನ್ನು ಕೇವಲ 6 ದಿನಗಳು ಬಾಕಿ ಉಳಿದಿವೆ. ಸೆ.30ರಿಂದ ಪಂದ್ಯಾವಳಿ ಆರಂಭವಾಗಲಿದೆ. ಈ ಬಾರಿ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಕೂಟ ನಡೆಯುತ್ತಿದೆ. ಇದಕ್ಕೂ ಮುನ್ನ ಮಹಿಳಾ ವಿಶ್ವಕಪ್‌ನ(Women’s ODI World Cup History) ಹಿನ್ನೋಟವೊಂದು ಇಲ್ಲಿದೆ.
ಮೊದಲು ಆರಂಭವಾದದ್ದೇ ಮಹಿಳಾ ವಿಶ್ವಕಪ್
ಇಂದು ಪುರುಷರ ಏಕದಿನ ವಿಶ್ವಕಪ್‌ಗೆ ಭಾರೀ ಮನ್ನಣೆ ಇದ್ದರೂ, ಪುರುಷರ ವಿಶ್ವಕಪ್ ಪಂದ್ಯಾವಳಿಗೂ ಎರಡು ವರ್ಷಗಳ ಮೊದಲೇ 1973 ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಮಹಿಳಾ ವಿಶ್ವಕಪ್ ನಡೆದಿತ್ತು. ಇಂಗ್ಲೆಂಡ್ ತಂಡ ಸೇರಿದಂತೆ ಏಳು ತಂಡಗಳು ಸ್ಪರ್ಧಿಸಿದ್ದವು. ನಾಕೌಟ್ ಸ್ಪರ್ಧೆಯ ಬದಲು ವಿಜೇತರನ್ನು ನಿರ್ಧರಿಸುವ ಲೀಗ್ ಟೇಬಲ್ ಇತ್ತು. ಆಸ್ಟ್ರೇಲಿಯಾವನ್ನು 92 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಮೂರು ಅಂಕಗಳಿಂದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಭಾರತ ಚೊಚ್ಚಲ ವಿಶ್ವಕಪ್ ಪ್ರವೇಶ
ಭಾರತವು 1978 ರ ಪಂದ್ಯಾವಳಿಯನ್ನು ಆಯೋಜಿಸಿ ಅದರಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿತು. ಇಲ್ಲೂ ಕೂಡ ಪಾಯಿಂಟ್ ಆಧಾರದಲ್ಲಿ ವಿಜೇತರನ್ನು ನಿರ್ಧರಿಸಲಾಯಿತು. ಅಂತಿಮವಾಗಿ 6 ಅಂಕಗಳಿಸಿದ ಆಸ್ಟ್ರೇಲಿಯಾ ವಿಶ್ವಕಪ್ ಜಯಿಸಿತ್ತು.
1982 ರ ಆವೃತ್ತಿಯಲ್ಲಿ ಫೈನಲ್ ಪಂದ್ಯವನ್ನು ಪರಿಚಯಿಸಲಾಯಿತು. ನ್ಯೂಜಿಲೆಂಡ್ ಆತಿಥ್ಯದಲ್ಲಿ ನಡೆದ ಈ ಟೂರ್ನಿಯಲ್ಲಿ 5 ತಂಡಗಳು ಭಾಗವಹಿಸಿದ್ದವು. ಫೈನಲ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮತ್ತೆ ಮುಖಾಮುಖಿಯಾಯಿತು. ಇಲ್ಲಿ ಆಸೀಸ್ ಗೆದ್ದು ಟ್ರೋಫಿ ಉಳಿಸಿಕೊಂಡಿತು.
ಭಾರತದ ಮೊದಲ ಫೈನಲ್
2005ನೇ ವರ್ಷವು ಮಹಿಳಾ ವಿಶ್ವಕಪ್‌ನ ಒಂದು ಮೈಲಿಗಲ್ಲು ವರ್ಷವಾಗಿತ್ತು. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಆತಿಥ್ಯ ವಹಿಸುವ ಗೌರವವನ್ನು ಹೊಂದಿತ್ತು. ಮತ್ತು ಭಾರತ ತನ್ನ ಮೊದಲ ಫೈನಲ್ ತಲುಪಿತು. ಆದರೆ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್ ಅಪ್ ಸ್ಥಾನ ಪಡೆದಿತ್ತು.
ಇದನ್ನೂ ಓದಿ Grace Harris: ಮಹಿಳಾ ವಿಶ್ವಕಪ್‌ನಿಂದ ಹೊರಬಿದ್ದ ಗ್ರೇಸ್ ಹ್ಯಾರಿಸ್
ಒಟ್ಟಾರೆಯಾಗಿ ಭಾರತ ಎರಡು ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲಲೂ ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾ ದಾಖಲೆಯ 7 ವಿಶ್ವಕಪ್ ಜಯಿಸಿದೆ. ಇಂಗ್ಲೆಂಡ್ 4, ನ್ಯೂಜಿಲ್ಯಾಂಡ್ ಒಂದು ಬಾರಿ ಪ್ರಶಸ್ತಿ ಗೆದ್ದಿದೆ. ಬಾರಿಯಾದರೂ ಭಾರತ ಚೊಚ್ಚಲ ವಿಶ್ವಕಪ್ ಗೆಲ್ಲಲಿ ಎನ್ನುವುದು ಭಾರತೀಯರ ಆಶಯ.