ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

On This Day: ಭಾರತ ತಂಡದ ಮೂರನೇ ವಿಶ್ವಕಪ್‌ ಪ್ರಶಸ್ತಿ ಕನಸು ನುಚ್ಚುನೂರಾದ ದಿನಕ್ಕೆ 2 ವರ್ಷ

odi world cup final ind vs aus: 120 ಎಸೆತಗಳನ್ನು ಎದುರಿಸಿದ ಹೆಡ್‌, 15 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 137 ರನ್‌ ಚಚ್ಚಿ, ಗೆಲುವಿಗೆ ಎರಡು ರನ್ ಬೇಕಿದ್ದಾಗ ಔಟಾದರು. ಲಾಬುಷೇನ್‌ 110 ಎಸೆತಗಳಲ್ಲಿ 4 ಬೌಂಡರಿ ಸಹಿತ 58 ರನ್‌ ಗಳಿಸಿ ಅಜೇಯವಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಆಸೀಸ್‌ ವಿರುದ್ಧ ಭಾರತ ಏಕದಿನ ವಿಶ್ವಕಪ್‌ ಸೋಲಿಗೆ 2 ವರ್ಷ

ಭಾರತ ತಂಡದ 3ನೇ ವಿಶ್ವಕಪ್‌ ಪ್ರಶಸ್ತಿ ಕನಸು ನುಚ್ಚುನೂರಾದ ದಿನಕ್ಕೆ 2 ವರ್ಷ -

Abhilash BC
Abhilash BC Nov 19, 2025 10:41 AM

ಅಹಮದಾಬಾದ್‌: ನ.19(On This Day) ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರದ ದಿನ. ಹೌದು, ರೋಹಿತ್‌ ಶರ್ಮ ನೇತೃತ್ವದ ಭಾರತ ತಂಡದ ಮೂರನೇ ಏಕದಿನ ವಿಶ್ವಕಪ್‌ ಪ್ರಶಸ್ತಿ ಕನಸು ನುಚ್ಚುನೂರಾದ ದಿನವಿದು. ಫೈನಲ್‌ ತನಕ ಸೋಲಿಲ್ಲದೆ ಸಾಗಿ ಬಂದಿದ್ದ ಭಾರತ( odi world cup final ind vs aus) ತಂಡಕ್ಕೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ ಅಂತರದ ಸೋಲು ಎದುರಾಗಿತ್ತು. ಗೆಲುವು ಸಾಧಿಸಿದ ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿತ್ತು. ಭಾರತದ ಈ ಸೋಲಿನ ಕಹಿ ನೆನಪಿಗೆ ಇಂದಿಗೆ 2 ವರ್ಷ ತುಂಬಿದೆ.

ನವೆಂಬರ್‌ 19, 2023ರಲ್ಲಿ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 240 ರನ್‌ ಗಳಿಸಿ ಆಲೌಟ್‌ ಆಯಿತು. ಟ್ರಾವಿಸ್‌ ಹೆಡ್‌ ಗಳಿಸಿದ ಅಮೋಘ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಈ ಗುರಿಯನ್ನು ಇನ್ನೂ 7 ಓವರ್‌ಗಳು ಬಾಕಿ ಇರುವಂತೆಯೇ 4 ವಿಕೆಟ್‌ ಕಳೆದುಕೊಂಡು ತಲುಪಿತು.

ಮೊದಲು ಬ್ಯಾಟ್‌ ಮಾಡಿದ ಭಾರತ ಪರ ನಾಯಕ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌.ರಾಹುಲ್‌ ಹೊರತುಪಡಿಸಿ ಉಳಿದವರ ಬ್ಯಾಟ್‌ನಿಂದ ರನ್‌ ಬರಲಿಲ್ಲ. ರೋಹಿತ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಶುಭಮನ್‌ ಗಿಲ್‌ (4) ಐದನೇ ಓವರ್‌ನಲ್ಲೇ ಔಟಾದರು. ಆದರೂ, ಬಿರುಸಿನ ಬ್ಯಾಟಿಂಗ್‌ ನಡೆಸಿದ ರೋಹಿತ್‌ ಕೇವಲ 31 ಎಸೆತಗಳಲ್ಲಿ 47 ರನ್‌ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾಗ ವಿಕೆಟ್‌ ಕೈಚೆಲ್ಲಿದರು.

ಇದನ್ನೂ ಓದಿ IND vs SA: ಈಡನ್ ಗಾರ್ಡನ್ಸ್ ತಂತ್ರ ವಿಫಲ; ಗುವಾಹಟಿ ಟೆಸ್ಟ್‌ಗೆ ಸ್ಪಿನ್ ಪಿಚ್‌ ಇಲ್ಲ!

ಶ್ರೇಯಸ್‌ ಅಯ್ಯರ್‌ಗೆ (4) ಪ್ಯಾಟ್‌ ಕಮಿನ್ಸ್‌ ಪೆವಿಲಿಯನ್‌ ದಾರಿ ತೋರಿದರು. ತಂಡದ ಮೊತ್ತ 3 ವಿಕೆಟ್‌ಗೆ 81 ರನ್‌ ಆಗಿದ್ದಾ‌ಗ ಜೊತೆಯಾದ ಕೊಹ್ಲಿ ಮತ್ತು ರಾಹುಲ್‌, ನಾಲ್ಕನೇ ವಿಕೆಟ್‌ಗೆ 67 ರನ್‌ ಕೂಡಿಸಿದರು. ಉತ್ತಮವಾಗಿ ಬ್ಯಾಟ್‌ ಬೀಸುತ್ತಿದ್ದ ಕೊಹ್ಲಿಗೆ 29ನೇ ಓವರ್‌ನಲ್ಲಿ ಅದೃಷ್ಟ ಕೈಕೊಟ್ಟಿತು. ಪ್ಯಾಟ್‌ ಕಮಿನ್ಸ್‌ ಎಸೆದ ಈ ಓವರ್‌ನ ಮೂರನೇ ಎಸೆತನಲ್ಲಿ ಚೆಂಡು ಬ್ಯಾಟ್‌ಗೆ ತಾಗಿ, ವಿಕೆಟ್‌ಗೆ ಬಡಿಯಿತು. 63 ಎಸೆತಗಳಲ್ಲಿ 54 ರನ್‌ ಗಳಿಸಿದ್ದ ಕೊಹ್ಲಿ ಇನಿಂಗ್ಸ್‌ಗೆ ಇದರೊಂದಿಗೆ ತೆರೆ ಬಿದ್ದಿತು. 107 ಎಸೆತಗಳಲ್ಲಿ 66 ರನ್‌ ಗಳಿಸಿ ಇನಿಂಗ್ಸ್‌ ಬೆಳೆಸುವ ಹೊಣೆ ಹೊತ್ತಿದ್ದ ರಾಹುಲ್‌, ಸ್ಟಾರ್ಕ್‌ ಬೌಲಿಂಗ್‌ನಲ್ಲೇ ವಿಕೆಟ್‌ ಕೀಪರ್‌ ಜೋಶ್‌ ಇಂಗ್ಲಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಕಾಡಿದ ಟ್ರಾವಿಸ್‌ ಹೆಡ್‌

ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ವೇಗಿಗಳಾದ ಬೂಮ್ರಾ ಮತ್ತು ಮೊಹಮ್ಮದ್‌ ಶಮಿ ಆರಂಭಿಕ ಆಘಾತ ನೀಡಿದರು. ಹೀಗಾಗಿ ತಂಡದ ಮೊತ್ತ 47 ರನ್‌ ಆಗುವಷ್ಟರಲ್ಲಿ ಡೇವಿಡ್‌ ವಾರ್ನರ್‌ (7), ಮಿಚೇಲ್‌ ಮಾರ್ಷ್‌ (15) ಹಾಗೂ ಸ್ಟೀವ್‌ ಸ್ಮಿತ್‌ (4) ವಿಕೆಟ್‌ ಕಳೆದುಕೊಂಡಿತು. ಆದರೆ ಈ ಹಂತದಲ್ಲಿ ಜೊತೆಯಾದ ಟ್ರಾವಿಸ್‌ ಹೆಡ್‌ ಮತ್ತು ಮಾರ್ನಸ್‌ ಲಾಬುಷೇನ್‌, ಭಾರತದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಲಾಬುಷೇನ್‌ ರಕ್ಷಣಾತ್ಮಕವಾಗಿ ಆಡಿದರೆ ಟ್ರಾವಿಸ್‌ ಎಂದಿನಂತೆ ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು. ಈ ಇಬ್ಬರು ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 192 ರನ್‌ ಗಳಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.

120 ಎಸೆತಗಳನ್ನು ಎದುರಿಸಿದ ಹೆಡ್‌, 15 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 137 ರನ್‌ ಚಚ್ಚಿ, ಗೆಲುವಿಗೆ ಎರಡು ರನ್ ಬೇಕಿದ್ದಾಗ ಔಟಾದರು. ಲಾಬುಷೇನ್‌ 110 ಎಸೆತಗಳಲ್ಲಿ 4 ಬೌಂಡರಿ ಸಹಿತ 58 ರನ್‌ ಗಳಿಸಿ ಅಜೇಯವಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.