U19 Asia Cup final: ಭಾರತದ ಯುವ ಪಡೆಗೆ ಬೃಹತ್ ಮೊತ್ತದ ಗುರಿಯೊಡ್ಡಿದ ಪಾಕಿಸ್ತಾನ
India U19 vs Pakistan U19: ಪಾಕಿಸ್ತಾನ ನಾಲ್ಕು ವಿಕೆಟ್‌ಗೆ 302 ರನ್ ಗಳಿಸಿದಾಗ ಮಿನ್ಹಾಸ್ ನಿರ್ಗಮಿಸಿದರು. ಭಾರತದ ಪರ ದೀಪೇಶ್ ದೇವೇಂದ್ರನ್ 3 ವಿಕೆಟ್ ಪಡೆದರೆ, ಹೆನಿಲ್ ಪಟೇಲ್ ಮತ್ತು ಖಿಲಾನ್ ಪಟೇಲ್ ತಲಾ ಎರಡು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಕನಿಷ್ಕ್ ಚೌಹಾಣ್ ಪಾಲಾಯಿತು.
Sameer Minhas -
ದುಬೈ, ಡಿ.21: ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್(U19 Asia Cup final)ನಲ್ಲಿ ಪಾಕಿಸ್ತಾನ(India U19 vs Pakistan U19) ತಂಡ 347 ರನ್‌ಗಳ ಬೃಹತ್ ಮೊತ್ತ ಪೇರಿಸಿ ಭಾರತಕ್ಕೆ ಸವಾಲೊಡ್ಡಿದೆ. ಭಾರತ ಗೆಲುವಿಗೆ 348ರನ್ ಬಾರಿಸಬೇಕಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಪಾಕ್ ಪಡೆ, ಆರಂಭಿಕ ಬ್ಯಾಟರ್ ಸಮೀರ್ ಮಿನ್ಹಾಸ್ ಬಾರಿಸಿದ ಅಮೋಘ ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 347 ರನ್ ಕಲೆಹಾಕಿತು.113 ಎಸೆತಗಳನ್ನು ಎದುರಿಸಿದ ಮಿನ್ಹಾಸ್, 9 ಸಿಕ್ಸರ್ ಮತ್ತು 17 ಬೌಂಡರಿ ಸಹಿತ 172 ರನ್ ಬಾರಿಸಿದರು. ಅವರನ್ನು ಹೊರತುಪಡಿಸಿ, ಉಸ್ಮಾನ್ ಖಾನ್ (35), ಅಹ್ಮದ್ ಹುಸೈನ್ (56) ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.
ಪಾಕಿಸ್ತಾನ ತಂಡ ಆರಂಭಿಕ ಹಂತದಲ್ಲಿ ಹಮ್ಜಾ ಜಹೂರ್ ವಿಕೆಟ್ ಕಳೆದುಕೊಂಡಿತು, ನಂತರ ಮಿನ್ಹಾಸ್ ಮತ್ತು ಉಸ್ಮಾನ್ ಖಾನ್ ಜೋಡಿ ಎರಡನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟವಾಡಿದರು. ಈ ಪಾಲುದಾರಿಕೆಯ ಸಮಯದಲ್ಲಿ, ಮಿನ್ಹಾಸ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅವರ ಆಕ್ರಮಣದ ಬ್ಯಾಟಿಂಗ್‌ನಿಂದ ಪಾಕಿಸ್ತಾನ ತಂಡವು ಕೇವಲ 12.3 ಓವರ್‌ಗಳಲ್ಲಿ 100 ರನ್ ಗಳಿಸಿತು.
2ND FASTEST CENTURY IN THIS EDITION OF THE ASIA CUP U-19.. 🤯
— PCT Replays 2.0 (@ReplaysPCT) December 21, 2025
SAMEER MINHAS REACHES HIS 100 IN JUST 71 BALLS, AGAINST INDIA IN THE FINAL!! pic.twitter.com/eSMRzhOyCK
ಉಸ್ಮಾನ್ ಔಟಾದ ನಂತರ, ಮಿನ್ಹಾಸ್, ಅಹ್ಮದ್ ಹುಸೇನ್ ಜೊತೆಗೆ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದರು. ಈ ಜೋಡಿ ಮೂರನೇ ವಿಕೆಟ್‌ಗೆ 137 ರನ್‌ಗಳನ್ನು ಸೇರಿಸುವ ಮೂಲಕ ತಂಡಕ್ಕೆ ನೆರವಾದರು. ಮಿನ್ಹಾಸ್ ಅಂಡರ್-19 ಏಷ್ಯಾ ಕಪ್ ಫೈನಲ್‌ಗಳ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಅನ್ನು ದಾಖಲಿಸಿದರು. 2012 ರಲ್ಲಿ ಕೌಲಾಲಂಪುರದಲ್ಲಿ ಭಾರತ ವಿರುದ್ಧ ಸಮಿ ಅಸ್ಲಾಮ್ ಅವರ 134 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಇದನ್ನೂ ಓದಿ ಟಿ20 ವಿಶ್ವಕಪ್ ತಂಡದಿಂದ ಗಿಲ್ ಹೊರಗಿಟ್ಟ ಬಗ್ಗೆ ಮಾತನಾಡಲು ನಿರಾಕರಿಸಿದ ಗೌತಮ್ ಗಂಭೀರ್
ಅಂತಿಮವಾಗಿ ಅವರು 113 ಎಸೆತಗಳಲ್ಲಿ 17 ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳೊಂದಿಗೆ ಅದ್ಭುತ 172 ರನ್ ಗಳಿಸಿದರು. 43 ನೇ ಓವರ್‌ನಲ್ಲಿ ದೇವೇಂದ್ರನ್ ಅವರನ್ನು ಔಟ್ ಮಾಡಿದರು. ಪಾಕಿಸ್ತಾನ ನಾಲ್ಕು ವಿಕೆಟ್‌ಗೆ 302 ರನ್ ಗಳಿಸಿದಾಗ ಮಿನ್ಹಾಸ್ ನಿರ್ಗಮಿಸಿದರು. ಭಾರತದ ಪರ ದೀಪೇಶ್ ದೇವೇಂದ್ರನ್ 3 ವಿಕೆಟ್ ಪಡೆದರೆ, ಹೆನಿಲ್ ಪಟೇಲ್ ಮತ್ತು ಖಿಲಾನ್ ಪಟೇಲ್ ತಲಾ ಎರಡು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಕನಿಷ್ಕ್ ಚೌಹಾಣ್ ಪಾಲಾಯಿತು.