ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Ashes: 3-0 ಮುನ್ನಡೆ ಸಾಧಿಸಿ ಆಶಸ್ ಸರಣಿ ಗೆದ್ದ ಆಸ್ಟ್ರೇಲಿಯಾ

Australia vs England: ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ನಾಯಕ ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌ ಮತ್ತು ಸ್ಪಿನ್ನರ್‌ ನಥಾನ್‌ ಲಿಯೋನ್‌ ತಲಾ ಮೂರು ವಿಕೆಟ್‌ ಕಿತ್ತರು. ಸರಣಿ ಸೋಲಿನ ಬೆನ್ನಲ್ಲೇ ನಾಯಕ ಬೆನ್‌ ಸ್ಟೋಕ್ಸ್‌ ಮತ್ತು ಕೋಚ್‌ ಬ್ರೆಂಡನ್‌ ಮೆಕಲಮ್‌ ತಲೆದಂಡ ಸಾಧ್ಯತೆ ಇದೆ.

3-0 ಮುನ್ನಡೆ ಸಾಧಿಸಿ ಆಶಸ್ ಸರಣಿ ಗೆದ್ದ ಆಸ್ಟ್ರೇಲಿಯಾ

Mitchell Starc -

Abhilash BC
Abhilash BC Dec 21, 2025 1:36 PM

ಅಡಿಲೇಡ್‌, ಡಿ.21: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ(Australia vs England) ತಂಡ ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ 82 ರನ್‌ಗಳ ಗೆಲುವು ಸಾಧಿಸುವ ಮೂಲಕ, 5 ಪಂದ್ಯಗಳ ಆ್ಯಷಸ್ ಟೆಸ್ಟ್(The Ashes) ಸರಣಿಯನ್ನು ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ 3-0 ಮುನ್ನಡೆಯೊಂದಿಗೆ ಕೈವಶ ಮಾಡಿಕೊಂಡಿದೆ.

435 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 63 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 207 ರನ್ ಗಳಿಸಿತ್ತು. ಪಂದ್ಯದ ಕೊನೆಯ ದಿನವಾದ ಇಂದು(ಭಾನುವಾರ) 228 ರನ್‌ಗಳ ಅವಶ್ಯಕತೆಯೊಂದಿಗೆ ಆಡಲಿಳಿದ ಇಂಗ್ಲೆಂಡ್‌ 352 ರನ್‌ಗೆ ಆಲೌಟ್‌ ಆಯಿತು.

ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಜೆಮಿ ಸ್ಮಿತ್ ಮತ್ತು ವಿಲ್ ಜ್ಯಾಕ್ಸ್‌ ಅಂತಿಮ ದಿನದಾಟದಲ್ಲಿ ಕೆಲ ಕಾಲ ಬೇರೂರಿ ನಿಂತು ಆಸೀಸ್‌ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೂ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ ಬೇರ್ಪಡಿಸಿದರು. ಜೆಮಿ ಸ್ಮಿತ್ 60 ರನ್‌ ಬಾರಿಸಿದರೆ, ವಿಲ್ ಜ್ಯಾಕ್ಸ್‌ 47 ರನ್‌ ಗಳಿಸಿದರು. ಬ್ರೈಡನ್ ಕಾರ್ಸೆ 39 ರನ್‌ ಬಾರಿಸಿ ಅಜೇಯರಾಗಿ ಉಳಿದರು.

2023ರಲ್ಲಿ ಕೊನೆಯ ಪಂದ್ಯವಾಡಿದ್ದ ಇಶಾನ್‌ ಕಿಶನ್‌ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದೇಗೆ?

ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ನಾಯಕ ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌ ಮತ್ತು ಸ್ಪಿನ್ನರ್‌ ನಥಾನ್‌ ಲಿಯೋನ್‌ ತಲಾ ಮೂರು ವಿಕೆಟ್‌ ಕಿತ್ತರು. ಸರಣಿ ಸೋಲಿನ ಬೆನ್ನಲ್ಲೇ ನಾಯಕ ಬೆನ್‌ ಸ್ಟೋಕ್ಸ್‌ ಮತ್ತು ಕೋಚ್‌ ಬ್ರೆಂಡನ್‌ ಮೆಕಲಮ್‌ ತಲೆದಂಡ ಸಾಧ್ಯತೆ ಇದೆ.



ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 91.2 ಓವರ್‌ಗಳಲ್ಲಿ 371. ಇಂಗ್ಲೆಂಡ್: 87.2 ಓವರ್‌ಗಳಲ್ಲಿ 286. ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ 84.4 ಓವರ್‌ಗಳಲ್ಲಿ 349 (ಅಲೆಕ್ಸ್ ಕ್ಯಾರಿ 72, ಬ್ರೈಡನ್ ಕಾರ್ಸ್ 80ಕ್ಕೆ3, ಜೋಶ್ ಇಂಗ್ಲಿಸ್ 70ಕ್ಕೆ4) ಇಂಗ್ಲೆಂಡ್: 102.5 ಓವರ್‌ಗಳಲ್ಲಿ 352 (ಜಾಕ್ ಕ್ರಾಲಿ 85, ಜೋ ರೂಟ್ 39, ಹ್ಯಾರಿ ಬ್ರೂಕ್ 30, ವಿಲ್ ಜ್ಯಾಕ್ಸ್ 60, ಜೆಮಿ ಸ್ಮಿತ್ 47, ಪ್ಯಾಟ್ ಕಮಿನ್ಸ್ 48ಕ್ಕೆ3, ನೇಥನ್ ಲಯನ್ 77ಕ್ಕೆ3, ಮಿಚೆಲ್‌ ಮಾರ್ಷ್‌ 62ಕ್ಕೆ 3.