ಯುಎಸ್ ಓಪನ್; 4ನೇ ಸುತ್ತಿಗೇರಿದ ಜೊಕೋವಿಕ್, ಸಬಲೆಂಕಾ
ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ ಅರಿನಾ ಸಬಲೆಂಕಾ ಅವರು ಲೇಲಾ ಫೆರ್ನಾಂಡಿಸ್ ವಿರುದ್ಧ 6-3, 7-6(2) ಅಂತರದಿಂದ ಗೆದ್ದು ಬೀಗಿದರು. 2021 ರ ಯುಎಸ್ ಓಪನ್ ಸೆಮಿಫೈನಲ್‌ನಲ್ಲಿ ಸಬಲೆಂಕಾ ಅವರು ಫೆರ್ನಾಂಡಿಸ್ ವಿರುದ್ಧ ಆಘಾತಕಾರಿ ಸೋಲನ್ನು ಅನುಭವಿಸಿದ್ದರು. ಅಂದಿನ ಸೋಲಿಗೆ ಈ ಬಾರಿ ಸಬಲೆಂಕಾ ಸೇಡು ತೀರಿಸಿಕೊಂಡರು.

-

ನ್ಯೂಯಾರ್ಕ್: ನೊವಾಕ್ ಜೊಕೋವಿಕ್(Novak Djokovic), ಅರಿನಾ ಸಬಲೆಂಕಾ(Aryna Sabalenka) ಮತ್ತು ಬಾರ್ಬೊರಾ ಕ್ರೆಜಿಕೋವಾ ಯುಎಸ್ ಓಪನ್ ಟೆನಿಸ್(US Open) ಟೂರ್ನಿಯ 4ನೇ ಸುತ್ತಿಗೇರಿದರು. 2ನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಕೂಡ 4ನೇ ಸುತ್ತಿಗೇರಿರುವ ಕಾರಣ ಜೊಕೊವಿಚ್ ಮತ್ತು ಅಲ್ಕರಾಜ್ ಈ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುವ ನಿರೀಕ್ಷೆ ಮೂಡಿದೆ.
ದಾಖಲೆಯ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೋ, ಮೂರನೇ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ಬ್ರಿಟನ್ ಆಟಗಾರ ಕ್ಯಾಮರೂನ್ ನಾರ್ರಿ ವಿರುದ್ಧ 6-4, 6-7(4), 6-2, 6-3 ಸೆಟ್‌ಗಳಿಂದ ಗೆದು ನಾಲ್ಕನೇ ಸುತ್ತು ತಲುಪಿದರು. ಗಾಯಗಳಿಂದಾಗಿ ಈಗಾಗಲೇ ಬಳಲುತ್ತಿರುವ 38 ವರ್ಷದ ಸೆರ್ಬಿಯನ್ ಆಟಗಾರ, ಪಂದ್ಯದ ವೇಳೆ ಬೆನ್ನಿನ ಕೆಳಭಾಗದ ಸಮಸ್ಯೆಯಿಂದ ಸ್ವಲ್ಪ ಸಮಯ ತೊಂದರೆಗೀಡಾದರು. ಆದರೂ ಸವಾಲು ಮುಂದುವರಿಸಿ ಪಂದ್ಯವನ್ನು ಜಯಿಸಿದರು. ನಾಲ್ಕನೇ ಸುತ್ತಿನಲ್ಲಿ ಜಾನ್-ಲೆನ್ನಾರ್ಡ್ ಸ್ಟ್ರಫ್ ವಿರುದ್ಧ ಸೆಣಸಾಡಲಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ ಅರಿನಾ ಸಬಲೆಂಕಾ ಅವರು ಲೇಲಾ ಫೆರ್ನಾಂಡಿಸ್ ವಿರುದ್ಧ 6-3, 7-6(2) ಅಂತರದಿಂದ ಗೆದ್ದು ಬೀಗಿದರು. 2021 ರ ಯುಎಸ್ ಓಪನ್ ಸೆಮಿಫೈನಲ್‌ನಲ್ಲಿ ಸಬಲೆಂಕಾ ಅವರು ಫೆರ್ನಾಂಡಿಸ್ ವಿರುದ್ಧ ಆಘಾತಕಾರಿ ಸೋಲನ್ನು ಅನುಭವಿಸಿದ್ದರು. ಅಂದಿನ ಸೋಲಿಗೆ ಈ ಬಾರಿ ಸಬಲೆಂಕಾ ಸೇಡು ತೀರಿಸಿಕೊಂಡರು.
Celebrating a trip to week 2 for @DjokerNole 😤 pic.twitter.com/0suObYfrTM
— US Open Tennis (@usopen) August 30, 2025
ನವರೊಗೆ ಸೋಲಿನ ಆಘಾತ
ಅತ್ಯಂತ ರೋಚವಾಗಿ ನಡೆದ ಮಹಿಳಾ ಸಿಂಗಲ್ಸ್‌ನ ಸ್ಪರ್ಧೆಯಲ್ಲಿ, ಬಾರ್ಬೊರಾ ಕ್ರೆಜಿಕೋವಾ ಮೊದಲ ಸೆಟ್‌ನ ಸೋಲಿನ ಬಳಿಕವೂ ಪುಟಿದೇಳುವ ಮೂಲಕ ಒಂಬತ್ತನೇ ಶ್ರೇಯಾಂಕದ ಎಮ್ಮಾ ನವರೊ ಅವರನ್ನು 4-6, 6-4, 6-4 ಸೆಟ್‌ಗಳಿಂದ ಸೋಲಿಸಿ ನಾಲ್ಕನೇ ಸುತ್ತಿನಲ್ಲಿ ಸ್ಥಾನ ಪಡೆದರು. ಎರಡನೇ ಸುತ್ತಿನಲ್ಲಿ ಕ್ಯಾಟಿ ಮೆಕ್‌ನಾಲಿ ವಿರುದ್ಧದ ಆರಾಮದಾಯಕ ಗೆಲುವಿನೊಂದಿಗೆ ಪ್ರಭಾವ ಬೀರಿದ ನವರೊ, ಮೂರನೇ ಸುತ್ತಿನಲ್ಲಿ ಆಘಾತಕಾರಿ ಸೋಲು ಕಂಡರು.
ಇದನ್ನೂ ಓದಿ US Open: ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಕ್