ಸೂರ್ಯವಂಶಿ ಪದಾರ್ಪಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಬ್ಯಾಟಿಂಗ್ ಕೋಚ್
IND vs IRE 1st T20I: ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟಕ್, ತಂಡವು ಫಾರ್ಮ್‌ನಲ್ಲಿರುವ ಆಟಗಾರನನ್ನು ಕೈಬಿಡುವುದಿಲ್ಲ. ಸರಿಯಾದ ಸಮಯ ಬಂದಾಗ ಸೂರ್ಯವಂಶಿಗೆ ಅವಕಾಶ ಸಿಗುತ್ತದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹೊಸದಾಗಿ ನೇಮಕಗೊಂಡ ನಾಯಕ ಶ್ರೇಯಸ್ ಅಯ್ಯರ್ ಅವರು ಪ್ಲೇಯಿಂಗ್ XI ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
Vaibhav Sooryavanshi -
ಬೆಲ್‌ಫಾಸ್ಟ್, ಜೂ.26: ವೈಭವ್ ಸೂರ್ಯವಂಶಿ ಅವರ ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ನಿರೀಕ್ಷೆ ಹೆಚ್ಚುತ್ತಲೇ ಇದೆ. ಆದರೆ ಭಾರತೀಯ(IND vs IRE 1st T20I) ತಂಡದ ಆಡಳಿತವು 15 ವರ್ಷದ ಯುವಕನನ್ನು ಪ್ಲೇಯಿಂಗ್ XI ಗೆ ಸೇರಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಇಂದು ನಡೆಯುವ ಮೊದಲ T20 ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್, ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳುವ ಬದಲು ಸಾಧ್ಯವಾದಷ್ಟು ಉತ್ತಮವಾದ XI ಅನ್ನು ಆಯ್ಕೆ ಮಾಡುವುದು ನಿರ್ವಹಣೆಯ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು.
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟಕ್, ತಂಡವು ಫಾರ್ಮ್‌ನಲ್ಲಿರುವ ಆಟಗಾರನನ್ನು ಕೈಬಿಡುವುದಿಲ್ಲ. ಸರಿಯಾದ ಸಮಯ ಬಂದಾಗ ಸೂರ್ಯವಂಶಿಗೆ ಅವಕಾಶ ಸಿಗುತ್ತದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹೊಸದಾಗಿ ನೇಮಕಗೊಂಡ ನಾಯಕ ಶ್ರೇಯಸ್ ಅಯ್ಯರ್ ಅವರು ಪ್ಲೇಯಿಂಗ್ XI ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
"ವೈಭವ್ ತುಂಬಾ ಪ್ರತಿಭಾನ್ವಿತ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಮತ್ತು ಅವರು ಐಪಿಎಲ್ ಮತ್ತು ಇತರ ಎಲ್ಲಾ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರುವ ರೀತಿಯನ್ನು ನೋಡಿದರೆ, ಅವರು ಸಾಕಷ್ಟು ನೈಸರ್ಗಿಕ ಸಾಮರ್ಥ್ಯಗಳನ್ನು ಹೊಂದಿದ್ದಾರೆಂದು ಹೇಳಬೇಕಾಗಿಲ್ಲ. ಐಪಿಎಲ್‌ನಲ್ಲಿ, ಅವರು ಬುಮ್ರಾ, ಕಮಿನ್ಸ್, ಸ್ಟಾರ್ಕ್ ಸೇರಿ ಹಲವಾರು ವೇಗದ, ಅನುಭವಿ ಬೌಲರ್‌ಗಳನ್ನು ಎದುರಿಸಿದ್ದಾರೆ. ಸಮಯ ಬಂದಾಗ ಅವರಿಗೆ ಅವಕಾಶ ಸಿಗಲಿದೆ" ಎಂದು ಕೋಟಕ್ ಹೇಳಿದರು.
ಇಂದಿನ ಭಾರತ-ಐರ್ಲೆಂಡ್ ಮೊದಲ ಟಿ20 ನಡೆಯುವುದು ಅನುಮಾನ; ಪಂದ್ಯಕ್ಕೆ ಭಾರೀ ಮಳೆ ಭೀತಿ
ತಂಡದ ಅವಶ್ಯಕತೆಗಳ ಆಧಾರದ ಮೇಲೆ ನಾಯಕ ಮತ್ತು ಮುಖ್ಯ ತರಬೇತುದಾರರು ಆಡುವ ಬಳಗನ್ನು ನಿರ್ಧರಿಸುತ್ತಾರೆ. ಬ್ಯಾಟಿಂಗ್ ಕೋಚ್, ಮ್ಯಾನೇಜ್‌ಮೆಂಟ್ ತಂಡದಲ್ಲಿ ತನ್ನ ಸ್ಥಾನವನ್ನು ಈಗಾಗಲೇ ಭದ್ರಪಡಿಸಿದ ಆಟಗಾರನಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಬಯಸಿದೆ ಎಂದು ಕೋಟಕ್ ಪುನರುಚ್ಚರಿಸಿದರು.
ವೈಭವ್‌ಗೆ ಅವಕಾಶ ನೀಡಬೇಕಾದರೆ ಸ್ಯಾಮ್ಸನ್– ಅಭಿಷೇಕ್ ಇವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಇಲ್ಲವೇ ಸ್ಯಾಮ್ಸನ್ ಅವರನ್ನು ಕೆಳಕ್ರಮಾಂಕದಲ್ಲಿ ಆಡಿಸಬೇಕಾಗುತ್ತದೆ. ಆದರೆ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಈಗ ಕ್ರಮವಾಗಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ಉಪನಾಯಕ ತಿಲಕ್ ವರ್ಮಾ ಅವರು ಆಡುವ ಸಾಧ್ಯತೆಯಿದೆ. ಒಂದೊಮ್ಮೆ ಆರನೇ ಕ್ರಮಾಂಕದಲ್ಲಿ ಸಂಜು ಅವರನ್ನು ಆಡಿಸಿದರೆ ಆಗ ಒಬ್ಬ ಬೌಲರ್‌ನನ್ನು ಕೈಬಿಡಬೇಕಾಗುತ್ತದೆ. ಆದರೆ ಸದ್ಯ ಗಂಭೀರ್ ಈ ಬದಲಾವಣೆಗೆ ಮುಂದಾಗುವುದು ಅನುಮಾನ ಎನಿಸಿದೆ.