ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

U19 ಏಷ್ಯಾ ಕಪ್‌ನಲ್ಲಿ ದಾಖಲೆಯ ಶತಕ ಬಾರಿಸಿದ ವೈಭವ್ ಸೂರ್ಯವಂಶಿ

Vaibhav Suryavanshi: 171 ರನ್‌ಗೆ ಔಟಾಗುವ ಮೂಲಕ ದ್ವಿಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಇತ್ತೀಚೆಗೆ ಮಹಾರಾಷ್ಟ್ರ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯವಂಶಿ ತಮ್ಮ ಚೊಚ್ಚಲ ಶತಕವನ್ನು ಬಾರಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಗಳಿಸಿದರು. ಏಳು ಸಿಕ್ಸರ್‌ಗಳು ಮತ್ತು ಅಷ್ಟೇ ಸಂಖ್ಯೆಯ ಬೌಂಡರಿಗಳನ್ನು ಬಾರಿಸಿದ್ದರು.

U19 ಏಷ್ಯಾ ಕಪ್‌ನಲ್ಲಿ ದಾಖಲೆಯ ಶತಕ ಬಾರಿಸಿದ ವೈಭವ್ ಸೂರ್ಯವಂಶಿ

Vaibhav Suryavanshi -

Abhilash BC
Abhilash BC Dec 12, 2025 3:01 PM

ದುಬೈ: ಡಿ.12: ಸ್ಫೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಲೋಕದಲ್ಲಿ ಬೆರಗು ಮೂಡಿಸುತ್ತಿರುವ 14 ರ ಹರೆಯದ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Suryavanshi), ಶುಕ್ರವಾರ ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಯುಎಇ ವಿರುದ್ಧದ ಅಂಡರ್-19 ಏಷ್ಯಾಕಪ್‌(U19 Asia Cup 2025)ನ ಉದ್ಘಾಟನಾ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ಮೂಲಕ ಶತಕ ಬಾರಿಸಿ ಮಿಂಚಿದ್ದಾರೆ.

ಸೂರ್ಯವಂಶಿ ಅವರ ಶತಕ ನೆರವಿನಿಂದ ಭಾರತ ತಂಡ 6 ವಿಕೆಟ್‌ಗೆ ದಾಖಲೆಯ 433ರನ್‌ ಬಾರಿಸಿತು. ಇದು U-19 ಏಕದಿನಗಳಲ್ಲಿ ಭಾರತದ ಇದುವರೆಗಿನ ಅತ್ಯಧಿಕ ಸ್ಕೋರ್ ಆಗಿದೆ. U-19 ODIಗಳಲ್ಲಿ ಮೂರು 400 ಕ್ಕೂ ಹೆಚ್ಚು ಮೊತ್ತಗಳನ್ನು ದಾಖಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಯಿತು. ಇದುವರೆಗೂ ಭಾರತದ ಗರಿಷ್ಠ ಮೊತ್ತ 425/3 ಆಗಿತ್ತು. 2004 ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ದಾಖಲಾಗಿತ್ತು.

ಸೂರ್ಯವಂಶಿ ಕೇವಲ 95 ಎಸೆತಗಳಲ್ಲಿ 171 ರನ್ ಗಳಿಸಿದರು. ಇದು ಅಂಡರ್‌-19 ಟೂರ್ನಿಯಲ್ಲಿ ಭಾರತೀಯರೊಬ್ಬರ ಎರಡನೇ ಅತ್ಯಧಿಕ ಸ್ಕೋರ್. ಅವರ ಇನ್ನಿಂಗ್ಸ್‌ನಲ್ಲಿ 14 ಸಿಕ್ಸರ್‌ಗಳು ಮತ್ತು ಒಂಬತ್ತು ಬೌಂಡರಿಗಳು ಸೇರಿದ್ದವು. U-19 ಏಷ್ಯಾ ಕಪ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್ ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ ಇದಾಗಿದೆ.

ಇದನ್ನೂ ಓದಿ ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ: ಸೂರ್ಯವಂಶಿ ಸ್ಫೋಟಕ ಶತಕ

171 ರನ್‌ಗೆ ಔಟಾಗುವ ಮೂಲಕ ದ್ವಿಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಇತ್ತೀಚೆಗೆ ಮಹಾರಾಷ್ಟ್ರ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯವಂಶಿ ತಮ್ಮ ಚೊಚ್ಚಲ ಶತಕವನ್ನು ಬಾರಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಗಳಿಸಿದರು. ಏಳು ಸಿಕ್ಸರ್‌ಗಳು ಮತ್ತು ಅಷ್ಟೇ ಸಂಖ್ಯೆಯ ಬೌಂಡರಿಗಳನ್ನು ಬಾರಿಸಿದ್ದರು.

ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಯುಎಇ ವಿರುದ್ಧವೇ ಕೇವಲ 32 ಎಸೆತಗಳಲ್ಲಿ ಸಿಕ್ಸರ್‌ಗಳ ಸುರಿಮಳೆಯೊಂದಿಗೆ ಶತಕವನ್ನು ಪೂರ್ಣಗೊಳಿಸಿದ್ದರು. 42 ಎಸೆತಗಳ ಇನಿಂಗ್ಸ್‌ 15 ಸಿಕ್ಸರ್‌ಗಳು ಮತ್ತು 13 ಬೌಂಡರಿಗಳನ್ನು ಒಳಗೊಂಡಂತೆ 144 ರನ್‌ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಕಿರಿಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಬರೆದಿದ್ದರು.