ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೊಹ್ಲಿ ನೋ ಲುಕ್‌ ಸಿಕ್ಸರ್‌ಗೆ ಮೈದಾನದಲ್ಲೇ ಭೇಷ್ ಎಂದ ಕಾರ್ಬಿನ್ ಬಾಷ್

Virat Kohli smashes no-look six: ಸರಣಿ ಶ್ರೇಷ್ಠ ಪಡೆಯವ ಮೂಲಕ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20ನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ 19 ಬಾರಿ ಸರಣಿ ಶ್ರೇಷ್ಠಪಡೆದಿದ್ದ ಸಿನ್‌ ತೆಂಡೂಲ್ಕರ್‌ ದಾಖಲೆ ಪತನಗೊಂಡಿತು.

ಕೊಹ್ಲಿ ನೋ ಲುಕ್‌ ಸಿಕ್ಸರ್‌ ಕಂಡ ದಂಗಾದ ಡಿ ಕಾಕ್‌, ಕಾರ್ಬಿನ್ ಬಾಷ್

Virat Kohli smashes no-look six -

Abhilash BC
Abhilash BC Dec 7, 2025 1:02 PM

ವಿಶಾಖಪಟ್ಟಣಂ, ಡಿ.7: ನಿವೃತ್ತಿ ಅಂಚಿನಲ್ಲಿರುವ ವಿರಾಟ್‌ ಕೊಹ್ಲಿ(Virat Kohli) ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಮತ್ತೆ ಸದ್ದು ಮಾಡಲಾರಂಭಿಸಿದ್ದಾರೆ. ದಕ್ಷಿಣ ಆಫ್ರಿಕಾ(IND vs SA) ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿಯೂ ಅಬ್ಬರಿಸಿದ ಕೊಹ್ಲಿ, ಶನಿವಾರ ನಡೆದಿದ್ದ ಅಂತಿಮ ಪಂದ್ಯದಲ್ಲಿ ಬಾರಿಸಿದ ನೋ ಲುಕ್‌ ಸಿಕ್ಸರ್‌(Virat Kohli smashes no-look six) ಕಂಡು ಎದುರಾಳಿ ತಂಡದ ಆಟಗಾರರೇ ದಂಗಾಗಿ ಹೋಗಿದ್ದಾರೆ. ಕೊಹ್ಲಿಯ ಈ ಸೊಗಸಾದ ಸಿಕ್ಸರ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಾರ್ಬಿನ್ ಬಾಷ್ ಎಸೆತದ 34 ನೇ ಓವರ್‌ನ ಕೊನೆಯ ಎಸೆತದಲ್ಲಿ, 37 ವರ್ಷದ ಕೊಹ್ಲಿ ಮುಂಭಾಗದ ಪಾದದ ಮೇಲೆ ನಿಂತು ವೈಡ್-ಆನ್‌ನಲ್ಲಿ ಸಿಕ್ಸ್ ಹೊಡೆದರು. ಚೆಂಡನ್ನು ನೋಡದೆಯೇ ಬ್ಯಾಟ್‌ ಮೇಲಕ್ಕೆತ್ತಿ ಲೀಲಾಜಾಲವಾಗಿ ಸಿಕ್ಸರ್‌ ಬಾರಿಸಿದರು. ಕೊಹ್ಲಿಯ ಈ ಸಿಕ್ಸರ್‌ ಕಂಡು ಕಾರ್ಬಿನ್ ಬಾಷ್ ಮತ್ತು ಕ್ವಿಂಟನ್‌ ಡಿ ಕಾಕ್‌ ಒಂದು ಕ್ಷಣ ದಂಗಾಗಿ ವಾಹ್! ಎಂದರು.



ಸರಣಿಯಲ್ಲಿ ಕೊಹ್ಲಿ ಎರಡು ಶತಕ((135, 102), ವಿಶಾಖಪಟ್ಟಣದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಅಜೇಯ 65 ರನ್ ಗಳಿಸಿದ್ದರು. ಅವರ ಈ ಬ್ಯಾಟಿಂಗ್‌ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 'ಕಳೆದ ಎರಡು ಮೂರು ವರ್ಷಗಳಲ್ಲಿ ಈ ತರ ಆಡಲೇ ಎಲ್ಲ. ನಿಜವಾಗಿಯೂ ಮಾನಸಿಕವಾಗಿ ನಿರಾಳವಾಗಿದ್ದೇನೆ' ಎಂದು ಹೇಳಿದರು.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಬಯಸಿದ ರೀತಿಯಲ್ಲಿ ಆಡಲು ಸಾಧ್ಯವಾಗಿರುವುದು ತುಂಬಾನೇ ತೃಪ್ತಿದಾಯಕವಾಗಿದೆ. ನನಗೆ ಮುಕ್ತವಾಗಿ ಆಡಲು ಸಾಧ್ಯವಾಗಿದೆ. ಬಹುಶಃ ಕಳೆದ ಎರಡು-ಮೂರು ವರ್ಷಗಳಿಂದ ಈ ರೀತಿ ಆಡಿರಲಿಲ್ಲ" ಎಂದು ಹೇಳಿದರು.

ಇದನ್ನೂ ಓದಿ IND vs SA: ಸಚಿನ್‌-ದ್ರಾವಿಡ್‌ ದಾಖಲೆ ಮುರಿದ ಕೊಹ್ಲಿ-ರೋಹಿತ್‌

'15, 16 ವರ್ಷ ಕ್ರಿಕೆಟ್ ಆಡಿದಾಗ ಕೆಲವೊಮ್ಮೆ ನಿಮ್ಮ ಬಗ್ಗೆ ಅನುಮಾನ ಮೂಡುವುದು ಸಹಜ. ಆದರೆ ಓರ್ವ ಆಟಗಾರನಾಗಿ ಉತ್ತಮವಾಗಿ ಆಡಲು ಗಮನ ಹರಿಸಿದ್ದೆ. ಇದು ತಾಳ್ಮೆಯ ಪರೀಕ್ಷೆಯು ಆಗಿದೆ. ಈಗಲೂ ತಂಡಕ್ಕಾಗಿ ಕೊಡುಗೆ ನೀಡಲು ಸಾಧ್ಯವಾಗಿರುವುದು ಸಂತಸ ತಂದಿದೆ' ಎಂದು ಕೊಹ್ಲಿ ಹೇಳಿದರು.

ಸರಣಿ ಶ್ರೇಷ್ಠ ಪಡೆಯವ ಮೂಲಕ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20ನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ 19 ಬಾರಿ ಸರಣಿ ಶ್ರೇಷ್ಠಪಡೆದಿದ್ದ ಸಿನ್‌ ತೆಂಡೂಲ್ಕರ್‌ ದಾಖಲೆ ಪತನಗೊಂಡಿತು.