ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aiden Markram: 7 ವರ್ಷಗಳ ಹಿಂದೆ ಮಾರ್ಕ್ರಮ್‌ ಬಗ್ಗೆ ಕೊಹ್ಲಿ ಮಾಡಿದ್ದ ಟ್ವೀಟ್‌ ವೈರಲ್‌

Virat Kohli's Old Tweet: ಆಸೀಸ್‌ ದಾಳಿಗೆ ಸಡ್ಡು ಹೊಡೆದು ನಿಂತ ಮಾರ್ಕ್ರಮ್‌ 11 ಬೌಂಡರಿ ನೆರವಿನಿಂದ ಅಜೇಯ 102 ರನ್‌ ಬಾರಿಸಿದರು. ಇದೇ ವೇಳೆ ಮಾರ್ಕ್ರಮ್‌ ಟೆಸ್ಟ್‌ ಚಾಂಪಿಯನ್‌ ಫೈನಲ್‌ನಲ್ಲಿ ಶತಕ ಬಾರಿಸಿದ ಮೂರನೇ ಬ್ಯಾಟರ್‌ ಎನಿಸಿದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಆಟಗಾರರಾದ ಟ್ರಾವಿಸ್‌ ಹೆಡ್‌(163) ಮತ್ತು ಸ್ವೀವನ್‌ ಸ್ಮಿತ್‌(121) ಶತಕ ಬಾರಿಸಿದ್ದರು.

7 ವರ್ಷಗಳ ಹಿಂದೆ ಮಾರ್ಕ್ರಮ್‌ ಬಗ್ಗೆ ಕೊಹ್ಲಿ ಮಾಡಿದ್ದ ಟ್ವೀಟ್‌ ವೈರಲ್‌

Profile Abhilash BC Jun 14, 2025 9:20 AM

ಲಂಡನ್‌: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌(WTC Final 2025) ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್‌ ಐಡೆನ್‌ ಮಾರ್ಕ್ರಮ್‌(Aiden Markram) ಈ ಶತಕದ ಮೂಲಕ ಹಲವು ದಾಖಲೆ ಬರೆದಿದ್ದಾರೆ. ಜತೆಗೆ ಮಾರ್ಕ್ರಮ್‌ ಬಗ್ಗೆ ವಿರಾಟ್‌ ಕೊಹ್ಲಿ 7 ವರ್ಷಗಳ ಹಿಂದೆ ಮೆಚ್ಚುಗೆ ಸೂಚಿಸಿದ್ದ ಟ್ವೀಟ್‌ ಕೂಡ ವೈರಲ್‌ ಆಗಿದೆ.

ಆಸೀಸ್‌ ದಾಳಿಗೆ ಸಡ್ಡು ಹೊಡೆದು ನಿಂತ ಮಾರ್ಕ್ರಮ್‌ 11 ಬೌಂಡರಿ ನೆರವಿನಿಂದ ಅಜೇಯ 102 ರನ್‌ ಬಾರಿಸಿದರು. ಇದೇ ವೇಳೆ ಮಾರ್ಕ್ರಮ್‌ ಟೆಸ್ಟ್‌ ಚಾಂಪಿಯನ್‌ ಫೈನಲ್‌ನಲ್ಲಿ ಶತಕ ಬಾರಿಸಿದ ಮೂರನೇ ಬ್ಯಾಟರ್‌ ಎನಿಸಿದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಆಟಗಾರರಾದ ಟ್ರಾವಿಸ್‌ ಹೆಡ್‌(163) ಮತ್ತು ಸ್ವೀವನ್‌ ಸ್ಮಿತ್‌(121) ಶತಕ ಬಾರಿಸಿದ್ದರು. ಉಭಯ ಆಟಗಾರರು ಈ ಶತಕವನ್ನು ಭಾರತ ವಿರುದ್ಧದ ದ್ವಿತೀಯ ಆವೃತ್ತಿಯಲ್ಲಿ ಬಾರಿಸಿದ್ದರು.

ಈ ದಾಖಲೆ ಮಾತ್ರವಲ್ಲದೆ ಲಾರ್ಡ್ಸ್‌ ಮೈದಾನದಲ್ಲಿ ಶತಕ ಬಾರಿಸಿದ ನಾಲ್ಕನೇ ಪ್ರವಾಸಿ ಆಟಗಾರ ಎನಿಸಿಕೊಂಡರು. ಅತ್ಯಧಿಕ ಶತಕ ದಾಖಲೆ ಭಾರತದ ದಿಗ್ಗಜ ಆಟಗಾರ ಸುನೀಲ್‌ ಗವಾಸ್ಕರ್‌(4) ಹೆಸರಿನಲ್ಲಿದೆ.

ಇದನ್ನೂ ಓದಿ WTC final: 50 ವರ್ಷದ ವಿಶ್ವಕಪ್‌ ಫೈನಲ್‌ ದಾಖಲೆ ಮುರಿದ ಸ್ಟಾರ್ಕ್‌-ಹ್ಯಾಜಲ್‌ವುಡ್‌

7 ವರ್ಷಗಳ ಹಿಂದಿನ ಕೊಹ್ಲಿ ಟ್ವೀಟ್‌ ವೈರಲ್‌

ಮಾರ್ಕ್ರಮ್‌ ಸೊಗಸಾದ ಶತಕ ಬಾರಿಸುತ್ತಿದ್ದಂತೆ ಭಾರತ ತಂಡದ ಸ್ಟಾರ್‌ ಆಟಾರ ವಿರಾಟ್‌ ಕೊಹ್ಲಿ ಅವರು 7 ವರ್ಷಗಳ ಹಿಂದೆ ಅಂದರೆ, 2018ರಲ್ಲಿ ಮಾಡಿದ್ದ ಹಳೆಯ ಟ್ವೀಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇಪ್ ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ಕ್ರಮ್ 84 ರನ್‌ ಬಾರಿಸಿ ಆಸೀಸ್‌ಗೆ ತಿರುಗೇಟು ನೀಡಿದ್ದರು. ಈ ವೇಳೆ ಕೊಹ್ಲಿ ಮಾರ್ಕ್ರಮ್‌ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. "ಐಡೆನ್ ಮಾರ್ಕ್ರಮ್ ನೋಡಲು ಸಂತೋಷವಾಗುತ್ತಿದೆ!" ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದರು.