ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದಿನ ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾದ ವೇಗಿ ಮಿಚೆಲ್‌ ಸ್ಟಾರ್ಕ್‌

IPL 2026: ಸ್ಟಾರ್ಕ್ ಭುಜದ ಗಾಯದಿಂದ ಚೇತರಿಸಿಕೊಂಡ ನಂತರ ಕಳೆದ ವಾರ ತಂಡವನ್ನು ಸೇರಿಕೊಂಡರು. ಇಂದಿನ ಪಂದ್ಯದ ಮೂಲಕ ಅವರು 2026ರ ಐಪಿಎಲ್‌ ಋತು ಆರಂಭಿಸಲಿದ್ದಾರೆ. ಮತ್ತು ಲೀಗ್ ಹಂತದಲ್ಲಿ ಆರು ಪಂದ್ಯಗಳು ಉಳಿದಿರುವಾಗ ತಂಡವು ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಸ್ಟಾರ್ಕ್‌ ಲಭ್ಯತೆ ತಂಡಕ್ಕೆ ಹೊಸ ಆತ್ಮವಿಶ್ವಾಸ ಮೂಡಿಸಿದೆ.

ಡೆಲ್ಲಿಗೆ ಆನೆ ಬಲ; ರಾಜಸ್ಥಾನ್‌ ವಿರುದ್ಧ ಆಡಲಿದ್ದಾರೆ ಸ್ಟಾರ್ಕ್‌

Mitchell Starc -

Abhilash BC
Abhilash BC May 1, 2026 10:16 AM

ಜೈಪುರ, ಮೇ 1: ಇಂದು(ಶುಕ್ರವಾರ) ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ನ 43 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಲಿಷ್ಠ ರಾಜಸ್ಥಾನ ರಾಯಲ್ಸ್(RR vs DC) ತಂಡವನ್ನು ಎದುರಿಸಲಿದೆ. ಕಳೆದ ಆರು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಘಾತಕ ವೇಗಿ ಮಿಚೆಲ್‌ ಸ್ಟಾರ್ಕ್‌(Mitchell Starc) ಅವರ ಸೇವೆ ಲಭ್ಯವಾಗಲಿದೆ.

ಸ್ಟಾರ್ಕ್ ಭುಜದ ಗಾಯದಿಂದ ಚೇತರಿಸಿಕೊಂಡ ನಂತರ ಕಳೆದ ವಾರ ತಂಡವನ್ನು ಸೇರಿಕೊಂಡರು. ಇಂದಿನ ಪಂದ್ಯದ ಮೂಲಕ ಅವರು 2026ರ ಐಪಿಎಲ್‌ ಋತು ಆರಂಭಿಸಲಿದ್ದಾರೆ. ಮತ್ತು ಲೀಗ್ ಹಂತದಲ್ಲಿ ಆರು ಪಂದ್ಯಗಳು ಉಳಿದಿರುವಾಗ ತಂಡವು ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಸ್ಟಾರ್ಕ್‌ ಲಭ್ಯತೆ ತಂಡಕ್ಕೆ ಹೊಸ ಆತ್ಮವಿಶ್ವಾಸ ಮೂಡಿಸಿದೆ.

ಸ್ಟಾರ್ಕ್‌ ಅವರು ರಾಜಸ್ಥಾನ್‌ ವಿರುದ್ಧ ಆಡುವ ಬಗ್ಗೆ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಸುಳಿವು ನೀಡಿದೆ. ಸ್ಟಾರ್ಕ್‌ ತಂಡದ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೊವನ್ನು ಫ್ರಾಂಚೈಸಿ ಪಂದ್ಯದ ಮುನ್ನಾದಿನದಂದು ಪೋಸ್ಟ್ ಮಾಡಿದೆ. ಎಡಗೈ ವೇಗದ ಬೌಲರ್ ಜನವರಿ 25 ರಂದು ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಸಿಡ್ನಿ ಸಿಕ್ಸರ್ಸ್‌ಗಾಗಿ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದರು.

GT vs RCB: ಬ್ಯಾಟಿಂಗ್‌ ವೈಫಲ್ಯವೇ ಸೋಲಿಗೆ ಕಾರಣ ಎಂದ ಆರ್‌ಸಿಬಿ ನಾಯಕ

ಏತನ್ಮಧ್ಯೆ, ಸ್ಟಾರ್ಕ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಡಿಸಿ ಬೌಲಿಂಗ್ ತರಬೇತುದಾರ ಮುನಾಫ್ ಪಟೇಲ್ ಮಾಹಿತಿ ನೀಡಿದ್ದು, "ಅವರು(ಸ್ಟಾರ್ಕ್‌) ಲಭ್ಯವಿರುತ್ತಾರೆ. ನಮ್ಮ ಅತ್ಯುತ್ತಮ ಬೌಲರ್ ಖಂಡಿತವಾಗಿಯೂ ಆಡುತ್ತಾರೆ. ಆದರೆ ಅಂತಿಮ ನಿರ್ಧಾರವನ್ನು ಪಂದ್ಯದ ದಿನವೇ ತೆಗೆದುಕೊಳ್ಳಲಾಗುತ್ತದೆ. ಅವರ ಮರಳುವಿಕೆ ಖಂಡಿತವಾಗಿಯೂ ತಂಡಕ್ಕೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.



ಜೈಪುರದ ಪಿಚ್‌ ರಿಪೋರ್ಟ್‌

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದ ಪಿಚ್‌ ಸಂಪೂರ್ಣ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದೆ. ಇತ್ತೀಚೆಗೆ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಆರ್ ತಂಡವು ಒಟ್ಟು 228 ರನ್ ಗಳಿಸಿತ್ತು. ಆದರೆ ಈ ಮೊತ್ತವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು 18.3 ಓವರ್‌ಗಳಲ್ಲಿ ಬೆನ್ನಟ್ಟಿತ್ತು. ಹೀಗಾಗಿ ಶುಕ್ರವಾರ ಜೈಪುರದ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಮತ್ತೊಂದು ಅತ್ಯಧಿಕ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು.

ಐಪಿಎಲ್‌ನಲ್ಲಿ ಆರ್‌ಆರ್ vs ಡಿಸಿ ಮುಖಾಮುಖಿ

ಆಡಿರುವ ಪಂದ್ಯಗಳು: 30

ರಾಜಸ್ಥಾನ್ ರಾಯಲ್ಸ್ ಗೆಲುವು: 15

ದೆಹಲಿ ಕ್ಯಾಪಿಟಲ್ಸ್ ಗೆಲುವು: 15