'ನಾವು ನಿಮಗಾಗಿ ಬರುತ್ತಿದ್ದೇವೆ': ಫೈನಲ್‌ಗೂ ಮುನ್ನ ಆರ್‌ಸಿಬಿ ನಾಯಕನ ಎಚ್ಚರಿಕೆ
IPL 2026: ಸತತ ಎರಡು ಐಪಿಎಲ್ ಫೈನಲ್‌ಗಳಿಗೆ ಫ್ರಾಂಚೈಸಿಯನ್ನು ಮುನ್ನಡೆಸಿದ ಐದನೇ ನಾಯಕ ಎಂಬ ಹೆಗ್ಗಳಿಕೆಯನ್ನೂ ಪಾಟೀದಾರ್ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಸೇರಿದ್ದಾರೆ.
Rajat Patidar -
ಧರ್ಮಶಾಲಾ, ಮೇ 27: "ನಾವು ನಿಮಗಾಗಿ ಬರುತ್ತಿದ್ದೇವೆ". ಐಪಿಎಲ್ 2026(IPL 2026)ರ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಆರ್‌ಸಿಬಿ ಫೈನಲ್ ಪ್ರವೇಶಿಸುತ್ತಿದ್ದಂತೆ ನಾಯಕ ರಜತ್ ಪಾಟೀದಾರ್(Rajat Patidar) ಅವರ ಮಾತು. ಅವರ ಈ ಹೇಳಿಕೆ ಎರಡನೇ ಟ್ರೋಫಿಯ ಕನಸು ಕಾಣುತ್ತಿರುವ ಆರ್‌ಸಿಬಿ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ.
ಪಂದ್ಯದಲ್ಲಿ 33 ಎಸೆತಗಳಲ್ಲಿ ಅಜೇಯ 93* ರನ್ ಗಳಿಸಿದ ಪಾಟೀದಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ವೇಳೆ ಮಾತನಾಡಿದ ಅವರು, "ಇದು ನಮಗೆ ಸೂಪರ್ ಪಂದ್ಯವಾಗಿತ್ತು. ಮತ್ತು ವಿಶೇಷವಾಗಿ ಬ್ಯಾಟ್ಸ್‌ಮನ್‌ಗಳು ಉದ್ದೇಶದಿಂದ ಹೊಡೆಯುತ್ತಿದ್ದ ರೀತಿ ನಮಗೆ ಒಳ್ಳೆಯದಾಯಿತು" ಎಂದು ತಿಳಿಸಿದರು.
ಸತತ ಎರಡು ಐಪಿಎಲ್ ಫೈನಲ್‌ಗಳಿಗೆ ಫ್ರಾಂಚೈಸಿಯನ್ನು ಮುನ್ನಡೆಸಿದ ಐದನೇ ನಾಯಕ ಎಂಬ ಹೆಗ್ಗಳಿಕೆಯನ್ನೂ ಪಾಟೀದಾರ್ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಸೇರಿದ್ದಾರೆ.
It's all about the mindset 😎👊
— IndianPremierLeague (@IPL) May 26, 2026
🎥 Captain Rajat Patidar on the secret behind @RCBTweets' record-breaking batting show 🙇#TATAIPL | #Qualifier1 | #TheFinalLeap | #RCBvGT pic.twitter.com/hljvHqxpxc
ಪಾಟೀದಾರ್ (ಅಜೇಯ 93) ಅವರ ಸಿಡಿಲಬ್ಬರದ ಬ್ಯಾಟಿಂಗ್ ಬಲದಿಂದ ಆರ್‌ಸಿಬಿಯು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಗುಜರಾತ್, ಜೇಕಬ್ ಡಫಿ (39ಕ್ಕೆ3) ಹಾಗೂ ರಸಿಕ್ ಸಲಾಮ್ ದಾರ್ (11ಕ್ಕೆ2) ಅವರ ಅಮೋಘ ಬೌಲಿಂಗ್ ದಾಳಿಗೆ ತತ್ತರಿಸಿ 19.3 ಓವರ್‌ಗಳಲ್ಲಿ 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ತಂಡದ ಪರ ರಾಹುಲ್ ತೆವಾಟಿಯಾ (68) ಅವರೊಬ್ಬರೇ ಒಂದಿಷ್ಟು ದಿಟ್ಟತನ ತೋರಿದರು.
ರಜತ್ ಪಾಟೀದಾರ್ ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್; ಬದಲಿ ಆಟಗಾರನಾಗಿ ಬಂದು ತಂಡದ ದಿಸೆಯನ್ನೇ ಬದಲಿಸಿದ ನಾಯಕ
ರಜತ್ ಪಾಟೀದಾರ್ ಅವರ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ ಟೈಟನ್ಸ್ ತಂಡದ ಫೀಲ್ಡರ್‌ಗಳು ಪಂದ್ಯದ ಸೋಲಿಗೆ ಪ್ರಮುಖ ಕಾರಣರಾದರು. ಆರ್‌ಸಿಬಿ ತಂಡಕ್ಕೆ ಇನಿಂಗ್ಸ್‌ನ ಕೊನೆಯ 5 ಓವರ್‌ಗಳಲ್ಲಿ 86 ರನ್‌ಗಳು ಹರಿದುಬಂದವು.
ಸೋತರೂ ಇನ್ನೊಂದು ಅವಕಾಶ
ಆರ್‌ಸಿಬಿ ವಿರುದ್ಧ ಸೋತರೂ ಗುಜರಾತ್ ತಂಡಕ್ಕೆ ತನ್ನ ತವರು ಅಹಮದಾಬಾದಿನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆಡಲು ಇನ್ನೂ ಒಂದು ಅವಕಾಶ ಬಾಕಿ ಇದೆ. ಇದೇ 29ರಂದು ಮುಲ್ಲನಪುರದಲ್ಲಿ ನಡೆಯುವ ಎರಡನೇ ಕ್ವಾಲಿಫಯರ್‌ನಲ್ಲಿ ಆಡಲಿರುವ ತಂಡವು ಗೆದ್ದರೆ ಫೈನಲ್ ಪ್ರವೇಶಿಸಬಹುದು.