IND vs ENG: ಟೆಸ್ಟ್‌ನಲ್ಲಿ ಆಂಗ್ಲರ ಬಾಝ್‌ಬಾಲ್ ಆಟ ಎಂದರೇನು?
ಭಾರತ ಲೀಡ್ಸ್‌ನಲ್ಲಿ ಇದುವರೆಗೆ ಏಳು ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ಎರಡರಲ್ಲಿ ಜಯ ಸಾಧಿಸಿವೆ. ಒಂದು ಟೆಸ್ಟ್ ಡ್ರಾಗೊಂಡಿದೆ. ಇಂಗ್ಲೆಂಡ್ ನಾಲ್ಕರಲ್ಲಿ ಗೆದ್ದಿದೆ. ಭಾರತ ಇಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದು 2021ರಲ್ಲಿ. ಆದರೆ ಈ ಪಂದ್ಯವನ್ನು ಇನಿಂಗ್ಸ್ ಹಾಗೂ 76 ರನ್ ಅಂತರದಿಂದ ಸೋಲು ಕಂಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಭಾರತ ಇಲ್ಲಿ ಪಂದ್ಯ ಆಡುತ್ತಿದೆ.


ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್(IND vs ENG 1st Test) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು(ಶುಕ್ರವಾರ) ಇಂಗ್ಲೆಂಡ್‌ನ ಅತ್ಯಂತ ಪುರಾತನ ಕ್ರಿಕೆಟ್ ಅಂಗಳ ಲೀಡ್ಸ್‌ನಲ್ಲಿ ಆರಂಭಗೊಳ್ಳಲಿದೆ. ಪಂದ್ಯಕ್ಕೂ ಮುನ್ನವೇ ಆಂಗ್ಲರ ಆಕ್ರಮಣಕಾರಿ ಬಾಝ್‌ಬಾಲ್ ಮಾದರಿ(What is Bazball) ಭಾರೀ ಸದ್ದು ಮಾಡುತ್ತಿದೆ. ಬಾಝ್‌ಬಾಲ್ ಎಂದರೇನು? ಇದರ ಪ್ರಯೋಜನವೇನು? ಹೀಗೆ ಈ ಮಾರಿಯ ಕುರಿತ ಕ್ರಿಕೆಟ್ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಬಾಝ್‌ಬಾಲ್ ಎಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಬಳಸುತ್ತಿರುವ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ. ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್ ತಂಡ ಇದನ್ನು ಅನುಸರಿಸುತ್ತಿದೆ. ಇದು ಮಾಜಿ ನ್ಯೂಜಿಲೆಂಡ್ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ಅವರ ಅಡ್ಡಹೆಸರು "ಬಾಜ್" ನಿಂದ ಬಂದಿದೆ. ಅವರು ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಈ ಆಟದ ಶೈಲಿಯನ್ನು ಜಾರಿಗೆ ತಂದದ್ದು ಕೂಡ ಅವರ ಕೋಚಿಂಗ್ ಅವಧಿಯಲ್ಲೇ. ಬಾಝ್‌ಬಾಲ್ ಆಟದ ಶೈಲಿಯು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುತ್ತದೆ. ಬ್ಯಾಟ್ಸ್‌ಮನ್‌ಗಳು ಸಾಧ್ಯವಾದಷ್ಟು ಬೇಗ ಸ್ಕೋರ್ ಮಾಡಲು ಪ್ರಯತ್ನಿಸುತ್ತಾರೆ.
ಈ ಬ್ಯಾಟಿಂಗ್ ಶೈಲಿಯಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಒಂದರ್ಥದಲ್ಲಿ ಇದು ಯಾವ ಹಿಡಿತವೂ ಇಲ್ಲದ ಕಾರ್ಯತಂತ್ರವೆಂದು ಪರಿಗಣಿಸಲಾಗುತ್ತದೆ. ಟಿ20 ಕ್ರಿಕೆಟ್‌ನಂತೆ ಬ್ಯಾಟ್ಸ್‌ಮನ್‌ಗಳಿಗೆ ಮುಕ್ತವಾಗಿ ಆಡಲು ಅವಕಾಶ ನೀಡಲಾಗುತ್ತದೆ. ಬ್ರೆಂಡನ್ ಮೆಕಲಮ್ ಪ್ರಕಾರ ಇದು ಟೆಸ್ಟ್ ಕ್ರಿಕೆಟ್ ಉತ್ತೇಜಿಸು ಒಂದು ವಿಧಾನವಾಗಿದೆ.
ಭಾರತ ಲೀಡ್ಸ್‌ನಲ್ಲಿ ಇದುವರೆಗೆ ಏಳು ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ಎರಡರಲ್ಲಿ ಜಯ ಸಾಧಿಸಿವೆ. ಒಂದು ಟೆಸ್ಟ್ ಡ್ರಾಗೊಂಡಿದೆ. ಇಂಗ್ಲೆಂಡ್ ನಾಲ್ಕರಲ್ಲಿ ಗೆದ್ದಿದೆ. ಭಾರತ ಇಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದು 2021ರಲ್ಲಿ. ಆದರೆ ಈ ಪಂದ್ಯವನ್ನು ಇನಿಂಗ್ಸ್ ಹಾಗೂ 76 ರನ್ ಅಂತರದಿಂದ ಸೋಲು ಕಂಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಭಾರತ ಇಲ್ಲಿ ಪಂದ್ಯ ಆಡುತ್ತಿದೆ.
ಇದನ್ನೂ ಓದಿ IND vs ENG: ಇಂದಿನಿಂದ ಭಾರತ-ಇಂಗ್ಲೆಂಡ್ ಟೆಸ್ಟ್; ಪ್ರತಿ ದಿನದಾಟ ಹೀಗಿರಲಿದೆ