ಕೊಲಂಬೊ ಟೆಸ್ಟ್ ಪಂದ್ಯದಿಂದ ಕುಲದೀಪ್ ಯಾದವ್ ಹೊರಗುಳಿಯಲು ಕಾರಣ ತಿಳಿಸಿದ ಬಿಸಿಸಿಐ
Kuldeep Yadav: ಕುಲ್‌ದೀಪ್ ಸ್ಥಾನದಲ್ಲಿ ಭಾರತ ತಂಡವು ಸರಾಂಶ್ ಜೈನ್ ಅವರಿಗೆ ಚೊಚ್ಚಲ ಪಂದ್ಯವನ್ನು ಆಡುವ ಅವಕಾಶ ನೀಡಿತು. ಸರಣಿಯ ಎರಡನೇ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ನೋಡಲು ಆಸಕ್ತಿದಾಯಕವಾಗಿದೆ.
Kuldeep Yadav -
ಕೊಲಂಬೊ, ಆ.23: ಶ್ರೀಲಂಕಾ ವಿರುದ್ಧ ಭಾನುವಾರ ಆರಂಭಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆಯಾಯಿತು. ಪಂದ್ಯ ಆರಂಭವಾಗುತ್ತಿದ್ದಂತೆ, ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಭಾರತದ ಆಡುವ XI ನಲ್ಲಿ ಏಕೆ ಇಲ್ಲ ಎಂದು ಅನೇಕ ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದರು. ಇದಕ್ಕೆ ಬಿಸಿಸಿಐ ಉತ್ತರ ನೀಡಿದೆ.
ಕುಲದೀಪ್ ಯಾದವ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಪಂದ್ಯದ ಸಮಯಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಅದಕ್ಕಾಗಿಯೇ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಯಲ್ಲಿ ತಿಳಿಸಿದೆ.
"ಕುಲದೀಪ್ ಯಾದವ್ ತಮ್ಮ ವೈರಲ್ ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಡುವ XI ರಲ್ಲಿ ಆಯ್ಕೆಗೆ ಅವರು ಲಭ್ಯವಿರಲಿಲ್ಲ. ಆದಾಗ್ಯೂ, ಅಗತ್ಯವಿದ್ದರೆ ಅವರು ಕನ್‌ಕಷನ್ ಬದಲಿಯಾಗಿ ಮೈದಾನಕ್ಕಿಳಿಯಬಹುದು" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ; ಸಾರಾಂಶ್ ಜೈನ್ ಪದಾರ್ಪಣೆ
ಕುಲ್‌ದೀಪ್ ಸ್ಥಾನದಲ್ಲಿ ಭಾರತ ತಂಡವು ಸರಾಂಶ್ ಜೈನ್ ಅವರಿಗೆ ಚೊಚ್ಚಲ ಪಂದ್ಯವನ್ನು ಆಡುವ ಅವಕಾಶ ನೀಡಿತು. ಸರಣಿಯ ಎರಡನೇ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ನೋಡಲು ಆಸಕ್ತಿದಾಯಕವಾಗಿದೆ.
ಪಂದ್ಯದ ಬಗ್ಗೆ ಹೇಳುವುದಾದರೆ, ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಬಳಿಕ ಮಾತನಾಡಿದ ನಾಯಕ ಶುಭಮನ್ ಗಿಲ್, ಗಾಲೆಗೆ ಹೋಲಿಸಿದರೆ ಇದು ಹೆಚ್ಚು ಗಟ್ಟಿಯಾದ, ಉತ್ತಮವಾದ ಮೇಲ್ಮೈಯಂತೆ ಕಾಣುತ್ತದೆ. ಗಾಲೆ ಕೂಡ ಉತ್ತಮ ವಿಕೆಟ್ ಆಗಿತ್ತು, ಆದರೆ ಆಟ ಮುಂದುವರೆದಂತೆ, ಅದು ಸ್ವಲ್ಪ ನಿಧಾನವಾಯಿತು ಮತ್ತು ಚೆಂಡು ತಿರುಗಲು ಪ್ರಾರಂಭಿಸಿತು ಎಂದು ನಾನು ಭಾವಿಸುತ್ತೇನೆ. ನಾವು ಅದನ್ನೇ ನಿರೀಕ್ಷಿಸುತ್ತಿದ್ದೇವೆ, ಆದರೆ ಮೊದಲ ಎರಡು ಅಥವಾ ಮೂರು ದಿನಗಳವರೆಗೆ, ಇದು ಬ್ಯಾಟಿಂಗ್ ಮಾಡಲು ನಿಜವಾಗಿಯೂ ಉತ್ತಮ ವಿಕೆಟ್ ಆಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಗಿಲ್ ಹೇಳಿದರು.
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಸರನ್ಶ್ ಜೈನ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ: ಲಾಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರಿಯಬಂಡಾರ, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ(ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ(ವಿ.ಕೀ.), ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೋ.