ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

10 ಲಕ್ಷ ಪಾವತಿಸುವಂತೆ ಧೋನಿಗೆ ಮದ್ರಾಸ್‌ ಹೈಕೋರ್ಟ್ ಸೂಚನೆ

MS Dhoni: ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಅಕ್ರಮಗಳೊಂದಿಗೆ ಧೋನಿಗೆ ನಂಟಿದೆ ಎಂದು ಸಂಪತ್‌ ಕುಮಾರ್‌ ಆರೋಪಿಸಿದ್ದರು. ಇದೇ ಕಾರಣಕ್ಕಾಗಿ ಧೋನಿ ಅವರು, ಎರಡು ಮಾಧ್ಯಮ ಸಂಸ್ಥೆಗಳು, ಪತ್ರಕರ್ತ ಹಾಗೂ ಸಂಪತ್‌ ಕುಮಾರ್‌ ವಿರುದ್ಧ ಮೊಕದ್ದಮೆ ಹೂಡಿದ್ದರು.

10 ಲಕ್ಷ ಪಾವತಿಸುವಂತೆ ಧೋನಿಗೆ ಮದ್ರಾಸ್‌ ಹೈಕೋರ್ಟ್ ಸೂಚನೆ

MS Dhoni -

Abhilash BC
Abhilash BC Feb 13, 2026 2:41 PM

ನವದೆಹಲಿ, ಫೆ.13: 2013 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ಮಾನನಷ್ಟ ಮೊಕದ್ದಮೆಯಲ್ಲಿ, ಭಾರತದ ಮಾಜಿ ನಾಯಕ ಹಾಗೂ ಆಟಗಾರ ಎಂಎಸ್ ಧೋನಿಗೆ ಮೊಕದ್ದಮೆಯನ್ನು ಭಾಷಾಂತರಿಸುವುದಕ್ಕಾಗಿ ₹ 10 ಲಕ್ಷ ಪಾವತಿಸುವಂತೆ ಮದ್ರಾಸ್ ಹೈಕೋರ್ಟ್‌ ಆದೇಶಿಸಿದೆ.

ಧೋನಿ ಅವರು ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಜಿ. ಸಂಪತ್‌ ಕುಮಾರ್‌ ಆರೋಪಿಸಿದ್ದರು. ಇದನ್ನು ಟೀಕಿಸಿದ್ದ ಧೋನಿ, ತಮ್ಮ ವಿರುದ್ಧ ದುರುದ್ದೇಶದ ಆರೋಪ ಮಾಡಲಾಗುತ್ತಿದೆ ಎಂದು ₹ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿರುವ ನ್ಯಾ. ಆರ್‌.ಎನ್‌. ಮಂಜುಳಾ ಅವರು, ಮಧ್ಯಂತರ ಆದೇಶ ಹೊರಡಿಸಿದ್ದು, 2025ರ ಅಕ್ಟೋಬರ್‌ 28ರಂದು ನೀಡಿದ್ದ ಆದೇಶದ ಅನುಸಾರ, ಸಂಬಂಧಿತ ಸಿ.ಡಿ.ಗಳ ಅನುವಾದಕ್ಕಾಗಿ ₹ 10 ಲಕ್ಷ ಪಾವತಿಸುವಂತೆ ಧೋನಿಗೆ ಸೂಚಿಸಿದ್ದಾರೆ.

ಸಿ.ಡಿ.ಗಳ ಅನುವಾದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಒಬ್ಬ ಅನುವಾದಕ ಹಾಗೂ ಒಬ್ಬ ಬೆರಳಚ್ಚುಗಾರ ಮೂರು–ನಾಲ್ಕು ತಿಂಗಳು ಸಂಪೂರ್ಣವಾಗಿ ತೊಡಗಿಕೊಳ್ಳಬೇಕಾಗುತ್ತದೆ‌ ಎಂಬ ಕಾರಣಕ್ಕಾಗಿ ಈ ಆದೇಶ ನೀಡಿರುವುದಾಗಿ ಕೋರ್ಟ್‌ ಹೇಳಿದೆ. ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳ ಪರಿಹಾರ ನಿಧಿ ಖಾತೆಗೆ ಮಾರ್ಚ್‌ 12ರ ಒಳಗೆ ಹಣ ಪಾವತಿಸುವಂತೆ ಧೋನಿಗೆ ಸೂಚಿಸಲಾಗಿದೆ.

T20 World Cup: ಈ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ತಂಡವನ್ನು ಆರಿಸಿದ ಎಂಎಸ್‌ ಧೋನಿ!

ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಅಕ್ರಮಗಳೊಂದಿಗೆ ಧೋನಿಗೆ ನಂಟಿದೆ ಎಂದು ಸಂಪತ್‌ ಕುಮಾರ್‌ ಆರೋಪಿಸಿದ್ದರು. ಇದೇ ಕಾರಣಕ್ಕಾಗಿ ಧೋನಿ ಅವರು, ಎರಡು ಮಾಧ್ಯಮ ಸಂಸ್ಥೆಗಳು, ಪತ್ರಕರ್ತ ಹಾಗೂ ಸಂಪತ್‌ ಕುಮಾರ್‌ ವಿರುದ್ಧ ಮೊಕದ್ದಮೆ ಹೂಡಿದ್ದರು.

ಭಾರತ ಪರ 90 ಟೆಸ್ಟ್‌ ಪಂದ್ಯಗಳಲ್ಲಿ 4876 ರನ್‌, 350 ಏಕದಿನ ಪಂದ್ಯಗಳಲ್ಲಿ 10,773 ರನ್‌(10 ಶತಕ, 73 ಅರ್ಧಶತಕ) ಮತ್ತು 98 ಟಿ-20 ಪಂದ್ಯಗಳಲ್ಲಿ 1,617 ರನ್‌ಗಳನ್ನು ಕಲೆಹಾಕಿದ್ದಾರೆ. ಇನ್ನು ವಿಕೆಟ್‌ ಕೀಪರ್‌ ಆಗಿ 824 ವಿಕೆಟ್‌ ಬಲಿ ಪಡೆದಿದ್ದಾರೆ. 2007ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟರು. ಇದಾದ ಬಳಿಕ 2011ರಲ್ಲಿ ಏಕದಿನ ವಿಶ್ವಕಪ್‌, 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತಕ್ಕೆ ತಂದುಕೊಟ್ಟರು.