ಮಹಿಳಾ ಟಿ20 ವಿಶ್ವಕಪ್; ಸೆಮಿ ಪಂದ್ಯದಲ್ಲಿ ವಿಂಡೀಸ್-ಆಸೀಸ್ ಕಾದಾಟ
AUS W vs WI W: ಎಲಿಸ್ ಪೆರ್ರಿ ಐದು ಪಂದ್ಯಗಳಲ್ಲಿ 183 ರನ್‌ಗಳನ್ನು ಗಳಿಸಿದ್ದಾರೆ. ಆಕ್ರಮಣಕಾರಿಯಾಗಿ ಬೌಲಿಂಗ್ ದಾಳಿಯನ್ನು ಮಾಡುವ ಅವರ ಸಾಮರ್ಥ್ಯವು ಎದುರಾಳಿ ತಂಡದ ಯೋಜನೆಗಳನ್ನು ಸಂಪೂರ್ಣವಾಗಿ ಅಡ್ಡಿಪಡಿಸಬಹುದು. ಅತ್ತ ವಿಂಡೀಸ್ ಪರ ನಾಯಕಿ ಹೇಲಿ ಮ್ಯಾಥ್ಯೂಸ್ ಚೆಂಡಿನ ಮೇಲೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳೊಂದಿಗೆ ತಂಡವನ್ನು ಮುನ್ನಡೆಸಲಿದ್ದಾರೆ.
AUS W vs WI W -
ಲಂಡನ್, ಜೂ.29: ಮಂಗಳವಾರ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ 2026 ರ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದ್ದಾರೆ. ಆಸ್ಟ್ರೇಲಿಯಾ ತಮ್ಮ ಐದು ಗುಂಪು ಹಂತದ ಪಂದ್ಯಗಳಲ್ಲಿ ಗೆದ್ದು ಅಜೇಯ ತಂಡವಾಗಿದೆ.
ಬಿ ಗುಂಪಿನಲ್ಲಿ ವಿಂಡೀಸ್ ಎರಡು ಸೋಲು ಮತ್ತು 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಉಭಯ ತಂಡಗಳಲ್ಲಿಯೂ ಬಲಿಷ್ಠ ಆಟಗಾರ್ತಿಯರು ಇರುವ ಕಾರಣ ಪಂದ್ಯ ಅತ್ಯಂತ ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ. ಹೇಲಿ ಮ್ಯಾಥ್ಯೂಸ್ ಕಿಯಾನಾ ಜೋಸೆಫ್, ಶೆಮೈನ್ ಕ್ಯಾಂಪ್ಬೆಲ್ಲೆ, ಸ್ಟಾಫನಿ ಟೇಲರ್, ಡಿಯಾಂಡ್ರಾ ಡಾಟಿನ್ ವಿಂಡೀಸ್‌ನ ಅಪಾಯಕಾರಿ ಬ್ಯಾಟರ್‌ಗಳಾದರೆ, ಆಸೀಸ್ ಪರ ಬೆತ್ ಮೂನಿ, ಎಲಿಸ್ ಪೆರ್ರಿ, ಆಶ್ಲೀ ಗಾರ್ಡ್ನರ್ ನಂಬಿಕಸ್ಥ ಆಟಗಾರರಾಗಿದ್ದಾರೆ. ಅದರಲ್ಲೂ ಎಲಿಸ್ ಪೆರ್ರಿ, ಆಶ್ಲೀ ಗಾರ್ಡ್ನರ್ ಆಲ್‌ರೌಂಡರ್ ಆಟದ ಮೂಲಕ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಎಲಿಸ್ ಪೆರ್ರಿ ಐದು ಪಂದ್ಯಗಳಲ್ಲಿ 183 ರನ್‌ಗಳನ್ನು ಗಳಿಸಿದ್ದಾರೆ. ಆಕ್ರಮಣಕಾರಿಯಾಗಿ ಬೌಲಿಂಗ್ ದಾಳಿಯನ್ನು ಮಾಡುವ ಅವರ ಸಾಮರ್ಥ್ಯವು ಎದುರಾಳಿ ತಂಡದ ಯೋಜನೆಗಳನ್ನು ಸಂಪೂರ್ಣವಾಗಿ ಅಡ್ಡಿಪಡಿಸಬಹುದು. ಅತ್ತ ವಿಂಡೀಸ್ ಪರ ನಾಯಕಿ ಹೇಲಿ ಮ್ಯಾಥ್ಯೂಸ್ ಚೆಂಡಿನ ಮೇಲೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳೊಂದಿಗೆ ತಂಡವನ್ನು ಮುನ್ನಡೆಸಲಿದ್ದಾರೆ.
ಅರ್ಜೆಂಟೀನಾ ಘರ್ಷಣೆಗೆ ಮುನ್ನ ಕೇಪ್ ವರ್ಡೆ ನಾಯಕನ ಮೇಲೆ ಅತ್ಯಾಚಾರ ಆರೋಪ
ಪಿಚ್ ರಿಪೋರ್ಟ್
ಕೆನ್ನಿಂಗ್ಟನ್ ಓವಲ್ ಅತ್ಯಂತ ಸಮತೋಲಿತ, ಬೌನ್ಸ್ ಪಿಚ್ ಅನ್ನು ಹೊಂದಿದ್ದು, ಬ್ಯಾಟ್ ಮತ್ತು ಚೆಂಡಿನ ನಡುವೆ ಸಮಾನ ಸ್ಪರ್ಧೆಯನ್ನು ಒದಗಿಸುತ್ತದೆ. ಆದರೂ ಈ ಹಗಲು-ರಾತ್ರಿ ಪಂದ್ಯವಾದ ಕಾರಣ ವಾತಾವರಣ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ಆರಂಭದಲ್ಲಿ, ವೇಗದ ಬೌಲರ್‌ಗಳು ಸಾಂಪ್ರದಾಯಿಕ ಸ್ವಿಂಗ್ ಮತ್ತು ಹೆಚ್ಚುವರಿ ಕ್ಯಾರಿಯನ್ನು ಕಂಡುಕೊಳ್ಳಲು ಹೊಸ ಮೇಲ್ಮೈಯನ್ನು ಬಳಸಿಕೊಳ್ಳಬಹುದು.
ಮುಖಾಮುಖಿ
ಆಡಿದ ಪಂದ್ಯಗಳು- 19
ಆಸ್ಟ್ರೇಲಿಯಾ ಗೆಲಲುವು- 17
ವೆಸ್ಟ್ ಇಂಡೀಸ್ ಗೆಲುವು- 02
ಸಂಭಾವ್ಯ ಆಡುವ ಬಳಗ
ಆಸ್ಟ್ರೇಲಿಯಾ; ಬೆತ್ ಮೂನಿ (ವಿ.ಕೀ.), ಜಾರ್ಜಿಯಾ ವೋಲ್, ಫೋಬೆ ಲಿಚ್‌ಫೀಲ್ಡ್, ಎಲ್ಲಿಸ್ ಪೆರ್ರಿ, ಆಶ್ಲೀ ಗಾರ್ಡ್ನರ್, ಜಾರ್ಜಿಯಾ ವೇರ್‌ಹ್ಯಾಮ್, ಅನ್ನಾಬೆಲ್ ಸದರ್ಲ್ಯಾಂಡ್, ನಿಕೋಲಾ ಕ್ಯಾರಿ, ಸೋಫಿ ಮೊಲಿನೆಕ್ಸ್ (ನಾಯಕಿ), ಕಿಮ್ ಗಾರ್ತ್, ಲೂಸಿ ಹ್ಯಾಮಿಲ್ಟನ್.
ವೆಸ್ಟ್ ಇಂಡೀಸ್: ಹೇಲಿ ಮ್ಯಾಥ್ಯೂಸ್ (ನಾಯಕಿ), ಕಿಯಾನಾ ಜೋಸೆಫ್, ಶೆಮೈನ್ ಕ್ಯಾಂಪ್ಬೆಲ್ಲೆ (ವಾಕ್), ಸ್ಟಾಫನಿ ಟೇಲರ್, ಡಿಯಾಂಡ್ರಾ ಡಾಟಿನ್, ಚಿನೆಲ್ಲೆ ಹೆನ್ರಿ, ಜಹಜಾರಾ ಕ್ಲಾಕ್ಸ್ಟನ್, ಜನ್ನಿಲಿಯಾ ಗ್ಲಾಸ್ಗೋ, ಆಲಿಯಾ ಅಲೀನ್, ಅಫಿ ಫ್ಲೆಚರ್, ಅಶ್ಮಿನಿ ಮುನಿಸರ್.