ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women’s ODI World Cup 2025

Women’s Cricket World Cup: ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ ಹಿನ್ನೋಟ

ಐಸಿಸಿ ಏಕದಿನ ಮಹಿಳಾ ಕ್ರಿಕೆಟ್ ವಿಶ್ವಕಪ್ ಇತಿಹಾಸ

Women’s ODI World Cup 2025: ಒಟ್ಟಾರೆಯಾಗಿ ಭಾರತ ಎರಡು ಬಾರಿ ಫೈನಲ್‌ ಪ್ರವೇಶಿಸಿದರೂ ಕಪ್‌ ಗೆಲ್ಲಲೂ ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾ ದಾಖಲೆಯ 7 ವಿಶ್ವಕಪ್‌ ಜಯಿಸಿದೆ. ಇಂಗ್ಲೆಂಡ್‌ 4, ನ್ಯೂಜಿಲ್ಯಾಂಡ್‌ ಒಂದು ಬಾರಿ ಪ್ರಶಸ್ತಿ ಗೆದ್ದಿದೆ. ಬಾರಿಯಾದರೂ ಭಾರತ ಚೊಚ್ಚಲ ವಿಶ್ವಕಪ್‌ ಗೆಲ್ಲಲಿ ಎನ್ನುವುದು ಭಾರತೀಯರ ಆಶಯ.

Grace Harris: ಮಹಿಳಾ ವಿಶ್ವಕಪ್‌ನಿಂದ ಹೊರಬಿದ್ದ ಗ್ರೇಸ್ ಹ್ಯಾರಿಸ್

ಮಹಿಳಾ ವಿಶ್ವಕಪ್‌ನಿಂದ ಹೊರಬಿದ್ದ ಗ್ರೇಸ್ ಹ್ಯಾರಿಸ್

ಹ್ಯಾರಿಸ್ 2022 ರ ಏಕದಿನ ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಕ್ಕಿರಲಿಲ್ಲ. ವಿಶ್ವಕಪ್‌ ಪಂದ್ಯಾವಳಿ ಸೆ.30 ರಿಂದ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಅ.1 ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ.

Women's World Cup: ಮಹಿಳಾ ವಿಶ್ವಕಪ್‌ಗೆ ಅಂಪೈರ್‌ಗಳ ಪಟ್ಟಿ ಪ್ರಕಟ; ಭಾರತದ ನಾಲ್ವರಿಗೆ ಅವಕಾಶ

ಮಹಿಳಾ ವಿಶ್ವಕಪ್‌ಗೆ ಅಂಪೈರ್‌ಗಳ ಪಟ್ಟಿ ಪ್ರಕಟ; ಭಾರತದ ನಾಲ್ವರಿಗೆ ಅವಕಾಶ

ಐಸಿಸಿ ಅಧ್ಯಕ್ಷ ಜಯ್ ಶಾ ಈ ಘೋಷಣೆಯನ್ನು ಮಹಿಳಾ ಕ್ರಿಕೆಟ್‌ಗೆ ಒಂದು ಹೆಗ್ಗುರುತಿನ ಕ್ಷಣ ಎಂದು ಶ್ಲಾಘಿಸಿದರು. ಇದು ಹೆಚ್ಚಿನ ಯಶಸ್ಸಿನ ಕಥೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ವಿಶ್ವಾದ್ಯಂತ ಕ್ರೀಡೆಯಾದ್ಯಂತ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

2025ರ ಮಹಿಳಾ ವಿಶ್ವಕಪ್‌ ಟೂರ್ನಿಗೆ ಶ್ರೀಲಂಕಾ ತಂಡ ಪ್ರಕಟ, ಚಮರಿ ಅಟಪಟ್ಟುಗೆ ನಾಯಕತ್ವ!

ಮಹಿಳಾ ವಿಶ್ವಕಪ್‌ ಟೂರ್ನಿಗೆ ಶ್ರೀಲಂಕಾ ತಂಡ ಪ್ರಕಟ!

ಸೆಪ್ಟಂಬರ್‌ 30 ರಿಂದ ನವೆಂಬರ್‌ 2ರವರೆಗೆ ನಡೆಯುವ 2025ರ ಮಹಿಳಾ ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಶ್ರೀಲಂಕಾ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಚಮರಿ ಅಟಪಟ್ಟುಗೆ ನಾಯಕತ್ವವನ್ನು ನೀಡಲಾಗಿದೆ. ತಂಡದ ಅತ್ಯಂತ ಹೆಚ್ಚಿನ ಅನುಭವವನ್ನು ಹೊಂದಿರುವ ಚಮರಿ ಅಟಪಟ್ಟು 3877 ರನ್‌ ಹಾಗೂ 45 ವಿಕೆಟ್‌ಗಳನ್ನು ಕಿತ್ತಿದ್ದಾರೆ.

Women’s ODI World Cup: ಮಹಿಳಾ ಏಕದಿನ ವಿಶ್ವಕಪ್‌ಗೆ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್‌

ಮಹಿಳಾ ಏಕದಿನ ವಿಶ್ವಕಪ್‌ಗೆ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್‌

ಮಹಿಳಾ ವಿಶ್ವಕಪ್‌ ಟೂರ್ನಿ ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ನ್ಯೂಜಿಲ್ಯಾಂಡ್‌ ತಂಡ ತನ್ನ ಮೊದಲ ಪಂದ್ಯವನ್ನು ಅ.1ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ನಾಯಕಿ ಡಿವೈನ್ ಮತ್ತು ಸುಜೀ ಬೇಟ್ಸ್‌ಗೆ ಇದು ಐದನೇ ಏಕದಿನ ವಿಶ್ವಕಪ್‌.

Women's World Cup: ಮಹಿಳಾ ವಿಶ್ವಕಪ್‌ ಉದ್ಘಾಟನಾ ಸಮಾರಂಭಕ್ಕೆ ಪಾಕ್‌ ಗೈರು

ಮಹಿಳಾ ವಿಶ್ವಕಪ್‌ ಉದ್ಘಾಟನಾ ಸಮಾರಂಭಕ್ಕೆ ಪಾಕ್‌ ಗೈರು

ಮುಂದಿನ ಮೂರು ವರ್ಷಗಳ ಕಾಲ ಐಸಿಸಿ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ಪಾಕಿಸ್ತಾನ ಮತ್ತು ಭಾರತ ಗಡಿ ದಾಟುವುದಿಲ್ಲ. ತನ್ನ ಪಾಲಿನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡಲಿದೆ. ಪರಿಣಾಮವಾಗಿ, ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಆಡಲಿದೆ.

ಮಹಿಳಾ ಏಕದಿನ ವಿಶ್ವಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ

ಮಹಿಳಾ ಏಕದಿನ ವಿಶ್ವಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಇಲ್ಲಿದೆ

ICC Women’s ODI World Cup: ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಪಾಲ್ಗೊಳ್ಳಲಿವೆ. ರೌಂಡ್‌ ರಾಬಿನ್‌ ಮಾದರಿಯಲ್ಲಿ ಪ್ರತಿ ತಂಡಗಳು ಲೀಗ್‌ ಹಂತದಲ್ಲಿ ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಎಲ್ಲಾ ತಂಡಕ್ಕೂ ತಲಾ 7 ಪಂದ್ಯ. ಲೀಗ್‌ ಹಂತದಲ್ಲಿ ಅಗ್ರ-4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

ಮಹಿಳಾ ವಿಶ್ವಕಪ್‌: ತರಬೇತಿ ಶಿಬಿರಕ್ಕಾಗಿ 20 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ

ವಿಶ್ವಕಪ್‌ ತಯಾರಿಗೆ 20 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ

20 ಆಟಗಾರರ ತರಬೇತಿ ಶಿಬಿರದ ತಂಡದಲ್ಲಿ ಇತ್ತೀಚಿನ ವೆಸ್ಟ್ ಇಂಡೀಸ್ ಪ್ರವಾಸದ ಆಟಗಾರ್ತಿಯರೂ ಸೇರಿದ್ದಾರೆ. ನಾಯಕಿ ಲಾರಾ ವೋಲ್ವಾರ್ಡ್ ಮತ್ತು ಆಲ್‌ರೌಂಡರ್‌ಗಳಾದ ಕ್ಲೋಯ್ ಟ್ರಯಾನ್ ಮತ್ತು ಮರಿಜಾನ್ನೆ ಕಪ್ ಈ ಶಿಬಿರದ ಭಾಗವಾಗಿಲ್ಲ. ಅವರು ಪ್ರಸ್ತುತ ದಿ ಹಂಡ್ರೆಡ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

Women's World Cup: ಮಹಿಳಾ ವಿಶ್ವಕಪ್‌ಗೆ ಪಾಕ್‌ ತಂಡ ಪ್ರಕಟ; 7 ಅನ್‌ಕ್ಯಾಪ್ಡ್ ಆಟಗಾರ್ತಿಯರಿಗೆ ಅವಕಾಶ

ಪಾಕ್‌ ವಿಶ್ವಕಪ್‌ ತಂಡದಲ್ಲಿ 7 ಅನ್‌ಕ್ಯಾಪ್ಡ್ ಆಟಗಾರ್ತಿಯರಿಗೆ ಅವಕಾಶ

ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿರುವ ಪಾಕಿಸ್ತಾನ, ಅಕ್ಟೋಬರ್ 2 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಫೈನಲ್ ತಲುಪಿದರೆ, ಟೂರ್ನಿಯ ಅಂತಿಮ ಪಂದ್ಯವೂ ಕೊಲಂಬೊದಲ್ಲಿ ನಡೆಯಲಿದೆ. ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಕ್ವಾಲಿಫೈಯರ್ ಮೂಲಕ ಪಾಕಿಸ್ತಾನ ತಂಡವು ಟೂರ್ನಮೆಂಟ್‌ಗೆ ಅರ್ಹತೆ ಪಡೆದಿತ್ತು.

Women's World Cup: ಮಹಿಳಾ ವಿಶ್ವಕಪ್ ಪಂದ್ಯ ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿದ ಐಸಿಸಿ

ಮಹಿಳಾ ವಿಶ್ವಕಪ್ ಪಂದ್ಯ ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರ

ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯುತ್ತಿರುವ ಕಾರಣ ಪಾಕಿಸ್ತಾನ ಫೈನಲ್ ತಲುಪದಿದ್ದರೆ, ನವಿ ಮುಂಬೈನಲ್ಲಿ ಫೈನಲ್ ನಡೆಯಲಿದೆ. ಪಾಕಿಸ್ತಾನ ಅರ್ಹತೆ ಪಡೆದರೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣ ಫೈನಲ್ ಅನ್ನು ಆಯೋಜಿಸುತ್ತದೆ. ಪಂದ್ಯದ ತಾಣ ಬದಲಾವಣೆ ಮಾಡಲಾಗಿದ್ದರೂ, ಮೂಲ ವೇಳಾಪಟ್ಟಿಯಂತೆ ಪಂದ್ಯಗಳು ನಡೆಯಲಿದೆ. ಪಂದ್ಯಗಳ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಮಹಿಳಾ ವಿಶ್ವಕಪ್‌ಗೂ ಮುನ್ನ ಕೌರ್‌ ಪಡೆಗೆ ವಿಶಾಖಪಟ್ಟಣದಲ್ಲಿ ಪೂರ್ವಸಿದ್ಧತಾ ಶಿಬಿರ

ಮಹಿಳಾ ವಿಶ್ವಕಪ್‌; ಕೌರ್‌ ಪಡೆಗೆ ಒಂದು ವಾರ ಪೂರ್ವಸಿದ್ಧತಾ ಶಿಬಿರ

ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗೆ ಆಲ್ರೌಂಡರ್ ಅಮನ್‌ಜೋತ್ ಕೌರ್ ಆಯ್ಕೆಯಾಗಿಲ್ಲ, ಆದರೆ ಏಕದಿನ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ಚಿನ್ನಸ್ವಾಮಿಯಿಂದ ಮಹಿಳಾ ವಿಶ್ವಕಪ್‌ ಟೂರ್ನಿ ಶಿಫ್ಟ್; ಈ ವಾರ ಅಂತಿಮ ನಿರ್ಧಾರ

ಬೆಂಗಳೂರಿನಿಂದ ಮಹಿಳಾ ವಿಶ್ವಕಪ್‌ ಟೂರ್ನಿ ಶಿಫ್ಟ್; ಈ ವಾರ ನಿರ್ಧಾರ ಪ್ರಕಟ

ಈ ವರ್ಷದ ಜೂನ್‌ನಲ್ಲಿ ಐಪಿಎಲ್ ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಮೆರವಣಿಗೆಯಲ್ಲಿ ಸಂಭವಿಸಿದ ಕಾಲ್ತುಳಿತದ ನಂತರ ನ್ಯಾ.ಮೈಕೆಲ್‌ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿದೆ

Women ODI World Cup 2025: ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ವನಿತೆಯರ ತಂಡ ಪ್ರಕಟ!

ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ವನಿತೆಯರ ತಂಡ ಪ್ರಕಟ!

ಮುಂಬರುವ 2025ರ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ಮಹಿಳಾ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಗಸ್ಟ್‌ 19 ರಂದು ಪ್ರಕಟಿಸಿದೆ. ಎಂದಿನಂದ ಭಾರತ ವನಿತೆಯರ ತಂಡವನ್ನು ಹರ್ಮನ್‌ಪ್ರೀತ್‌ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧಾನಾ ಅವರು ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಮಹಿಳಾ ಏಕದಿನ ವಿಶ್ವಕಪ್‌ಗೆ ಸಿದ್ಧತಾ ಶಿಬಿರ ಪೂರೈಸಿದ ಭಾರತ ತಂಡ

ಮಹಿಳಾ ಏಕದಿನ ವಿಶ್ವಕಪ್‌ಗೆ ಸಿದ್ಧತಾ ಶಿಬಿರ ಪೂರೈಸಿದ ಭಾರತ

ಭಾರತ ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 14ರಂದು ಶುರುವಾಗಲಿದೆ. ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿ ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಜಂಟಿ ಆತಿಥ್ಯ ಹೊಂದಿರುವ ಭಾರತ ತಂಡವು ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.