ಫೆಂಗ್ ಶೂಯಿ ವಾಸ್ತು ಪ್ರಕಾರ ವಿಂಡ್ ಚೈಮ್ ಈ ಜಾಗದಲ್ಲಿ ಇದ್ದರೆ ಮಾತ್ರ ಅದೃಷ್ಟ!
ವಿಂಡ್ ಚೈಮ್‌ಗಳು ಕೇವಲ ಅಲಂಕಾರವಲ್ಲ; ಮನೆಯಲ್ಲಿ ಧನಾತ್ಮಕ ಶಕ್ತಿ, ಶಾಂತಿ ಮತ್ತು ಅದೃಷ್ಟವನ್ನು ತರಲು ಸಹಾಯ ಮಾಡುತ್ತವೆ. ಫೆಂಗ್ ಶೂಯಿ ಪ್ರಕಾರ ಸರಿಯಾದ ಸ್ಥಳ, ದಿಕ್ಕು ಮತ್ತು ತಂತಿಗಳ ಸಂಖ್ಯೆಯನ್ನು ಗಮನದಲ್ಲಿ ಇರಿಸಿ ಅಳವಡಿಸಿದರೆ, ಇದು ನಕಾರಾತ್ಮಕ ಶಕ್ತಿಯನ್ನು ನಿವಾರಣೆ ಮಾಡಿ, ಕುಟುಂಬ ಸಂಬಂಧಗಳು ಮತ್ತು ವಾತಾವರಣವನ್ನು ಸುಧಾರಿಸುತ್ತದೆ.
ವಿಂಡ್ ಚೈಮ್ -
ಬೆಂಗಳೂರು: ಮನೆಯ ಸೌಂದರ್ಯವನ್ನು ಹೆಚ್ಚಿಸಲು ಹಲವಾರು ಅಲಂಕಾರ ವಸ್ತುಗಳಿವೆ. ಅವುಗಳಲ್ಲಿ ವಿಂಡ್ ಚೈಮ್ ಒಂದು ಪ್ರಮುಖವಾದದ್ದು. ಇದು ಕೇವಲ ಅಲಂಕಾರಕ್ಕಷ್ಟೇ ಸೀಮಿತವಾಗಿಲ್ಲ, ಮನೆಯಲ್ಲಿ ಧನಾತ್ಮಕ ಶಕ್ತಿ, ಶಾಂತಿ ಮತ್ತು ಅದೃಷ್ಟವನ್ನು ತರಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದಲ್ಲಿಯೂ ವಿಂಡ್ ಚೈಮ್‌ಗೆ ವಿಶೇಷ ಮಹತ್ವವಿದೆ.
ಗಾಳಿ ಬೀಸುವಾಗ ವಿಂಡ್ ಚೈಮ್‌ನಿಂದ ಹೊರಬರುವ ಮಧುರ ಧ್ವನಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಈ ಧ್ವನಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ ಹಾಗೂ ಅಡೆತಡೆಗಳನ್ನು ನಿವಾರಿಸಲು ಸಹಾಯಕವಾಗುತ್ತದೆ.
ಆದರೆ ವಿಂಡ್ ಚೈಮ್ ಅನ್ನು ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿ ಹಾಕುವುದು ಬಹಳ ಮುಖ್ಯ. ಜೊತೆಗೆ, ಅದರಲ್ಲಿ ಇರುವ ತಂತಿಗಳ (ಕಂಬಿಗಳ) ಸಂಖ್ಯೆಯೂ ಮಹತ್ವದ್ದಾಗಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಹಾಗಾದ್ರೆ ಬನ್ನಿ ವಾಸ್ತು ಶಾಸ್ತ್ರದ (Vastu Tips) ಸಲಹೆಯಂತೆ ವಿಂಡ್ ಚೈಮ್ ಹಾಕಲು ಸೂಕ್ತವಾದ ಸ್ಥಳ ಯಾವುದು..? ಏನೆಲ್ಲಾ ನಿಯಮ ಪಾಲಿಸಬೇಕು..? ಎಂಬುದನ್ನು ತಿಳಿಯೋಣ..
ವಿಂಡ್ ಚೈಮ್ ಹಾಕಬೇಕಾದ ಸ್ಥಳ
ಸಾಮಾನ್ಯವಾಗಿ ವಿಂಡ್ ಚೈಮ್ ಅನ್ನು ಮನೆಯ ಹಾಲ್‌ನಲ್ಲಿ ಅಥವಾ ಮುಖ್ಯ ಬಾಗಿಲಿನ ಸಮೀಪದಲ್ಲಿ ನೇತುಹಾಕುವುದು ಉತ್ತಮ. ಆದರೆ ನೇರವಾಗಿ ಬಾಗಿಲಿನ ಮೇಲ್ಭಾಗದಲ್ಲಿ ಹಾಕಬಾರದು. ಮನೆಯ ಮಧ್ಯಭಾಗದಲ್ಲೂ ಇದನ್ನು ಹಾಕಬಹುದು. ಇದರಿಂದ ಅದರ ಧ್ವನಿ ಎಲ್ಲೆಡೆ ಹರಡುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕುಳಿತುಕೊಳ್ಳುವ, ಊಟ ಮಾಡುವ ಅಥವಾ ಕೆಲಸ ಮಾಡುವ ಸ್ಥಳಗಳ ಹತ್ತಿರ ವಿಂಡ್ ಚೈಮ್ ಹಾಕುವುದನ್ನು ತಪ್ಪಿಸುವುದು ಉತ್ತಮ. ಜೊತೆಗೆ, ಇದು ಗೋಡೆಗಳು ಅಥವಾ ಇತರೆ ವಸ್ತುಗಳಿಂದ ಕನಿಷ್ಠ 2 ಅಡಿ ದೂರದಲ್ಲಿರಬೇಕು.
ಮಲಗುವ ಕೋಣೆಯಲ್ಲಿ
ಮಲಗುವ ಕೋಣೆಯಲ್ಲಿ ವಿಂಡ್ ಚೈಮ್ ಅನ್ನು ಕಿಟಕಿ ಅಥವಾ ಬಾಲ್ಕನಿ ಹತ್ತಿರ ಹಾಕಬಹುದು. ಇದು ಉತ್ತಮ ನಿದ್ರೆಗೆ ಸಹಕಾರಿ. ಆದರೆ ಹಾಸಿಗೆಯ ಮೇಲ್ಭಾಗದಲ್ಲಿ ಹಾಕಬಾರದು. ದಾಂಪತ್ಯ ಜೀವನ ಸುಧಾರಣೆಗೆ ಸೆರಾಮಿಕ್ ವಿಂಡ್ ಚೈಮ್‌ಗಳನ್ನು ಪಶ್ಚಿಮ, ವಾಯುವ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ಹಾಕುವುದು ಉತ್ತಮ.
Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!
ಮನೆಯ ಹೊರಭಾಗದಲ್ಲಿ
ಬಾಲ್ಕನಿಯಲ್ಲಿ ವಿಂಡ್ ಚೈಮ್ ಹಾಕುವಾಗ ಲೋಹದ ಚೈಮ್‌ಗಳನ್ನು ಬಳಸಬಾರದು. ಬದಲಾಗಿ ಮರ ಅಥವಾ ಬಿದಿರು ಚೈಮ್‌ಗಳನ್ನು ಬಳಸುವುದು ಉತ್ತಮ.
ತಂತಿಗಳ ಸಂಖ್ಯೆಯ ಮಹತ್ವ
ವಿಂಡ್ ಚೈಮ್ ಖರೀದಿಸುವಾಗ ಅದರ ತಂತಿಗಳ ಸಂಖ್ಯೆಯನ್ನು ಗಮನಿಸುವುದು ಮುಖ್ಯ. ಪ್ರತಿಯೊಂದು ಸಂಖ್ಯೆ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ:
2 ಅಥವಾ 3 ತಂತಿಗಳು – ಕುಟುಂಬದಲ್ಲಿ ಶಾಂತಿ ಮತ್ತು ಸಮಸ್ಯೆಗಳ ನಿವಾರಣೆ ಮಾಡುತ್ತದೆ
3, 6, 9 ತಂತಿಗಳು – ಅದೃಷ್ಟ, ಯಶಸ್ಸು ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ
4 ತಂತಿಗಳು (ಲೋಹ)– ಧನಾತ್ಮಕ ಶಕ್ತಿ ಹೆಚ್ಚಿಸಿ, ಪ್ರವೇಶದ್ವಾರದಲ್ಲಿ ಹಾಕಿದರೆ ಉತ್ತಮ ಫಲ ನೀಡುತ್ತದೆ
5 ತಂತಿಗಳು– ಪಂಚಭೂತಗಳ ಪ್ರತೀಕ; ಕುಟುಂಬದಲ್ಲಿ ಸಾಮರಸ್ಯ ಹೆಚ್ಚಿಸುತ್ತದೆ (ಆಗ್ನೇಯ ದಿಕ್ಕು ಸೂಕ್ತ)
6 ತಂತಿಗಳು – ನಕಾರಾತ್ಮಕ ಶಕ್ತಿ ನಿವಾರಣೆ ಮತ್ತು ವೃತ್ತಿಯಲ್ಲಿ ಪ್ರಗತಿ
7 ತಂತಿಗಳು– ಅದೃಷ್ಟ ಮತ್ತು ಸೃಜನಾತ್ಮಕತೆ ಹೆಚ್ಚಿಸಿ ಮಕ್ಕಳ ಅಧ್ಯಯನ ಕೊಠಡಿಗೆ ಸೂಕ್ತವಾಗಿದೆ
8 ತಂತಿಗಳ – ಸಂಪತ್ತು ಮತ್ತು ಬೆಳವಣಿಗೆಗೆ ಸಹಾಯಕ ಆಗಿದೆ
9 ತಂತಿಗಳು– ಧನಾತ್ಮಕ ಶಕ್ತಿ ಹೆಚ್ಚಿಸಿ, ವಾಸ್ತು ದೋಷಗಳನ್ನು ಕಡಿಮೆ ಮಾಡುತ್ತದೆ.
ಈ ರೀತಿಯಾಗಿ, ಸರಿಯಾದ ವಿಂಡ್ ಚೈಮ್ ಆಯ್ಕೆ ಮಾಡಿ ಸರಿಯಾದ ಸ್ಥಳದಲ್ಲಿ ಹಾಕಿದರೆ, ಅದು ಮನೆಯ ವಾತಾವರಣವನ್ನು ಸುಧಾರಿಸಲು ಸಹಾಯಕವಾಗುತ್ತದೆ.