ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ತಪ್ಪಿಯೂ ಮನೆಯಲ್ಲಿ ಈ ಬಣ್ಣದ ಗಡಿಯಾರ ಇಡಬೇಡಿ; ವಾಸ್ತು ಎದುರಾಗಬಹುದು..!

Vastu Tips: ವಾಸ್ತು ಶಾಸ್ತ್ರದ ದೃಷ್ಟಿಯಿಂದ ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಮಹತ್ವವಿದೆ. ಅದರಲ್ಲೂ ಮನೆಯ ಗಡಿಯಾರವು ಕೇವಲ ಸಮಯವನ್ನು ತೋರಿಸುವ ವಸ್ತುವಲ್ಲ, ಅದು ಮನೆಯ ಶಕ್ತಿಯ ಹರಿವಿನ ಮೇಲೂ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇರಿಸದೇ ಹೋದರೆ, ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುವ ಸಾಧ್ಯತೆ ಇದೆ.

ಗಡಿಯಾರ

ಬೆಂಗಳೂರು: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವಿನ ಸ್ಥಾನವೂ ಮಹತ್ವದ್ದಾಗಿದೆ. ಅದರಲ್ಲೂ ಗಡಿಯಾರಕ್ಕೆ (Wall Clock) ವಿಶೇಷ ಸ್ಥಾನ ನೀಡಲಾಗಿದೆ. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ(Right Direction) ಇರಿಸದೇ ಹೋದರೆ, ಅದು ಮನೆಯಲ್ಲಿನ ವಾಸ್ತು ದೋಷಗಳಿಗೆ ಕಾರಣವಾಗಬಹುದು. ಇದರಿಂದ ಕುಟುಂಬದ ಶಾಂತಿ, ಆರ್ಥಿಕ ಸ್ಥಿತಿ ಹಾಗೂ ಮನಸ್ಸಿನ ಸಮತೋಲನಕ್ಕೂ ಹಾನಿ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಗಡಿಯಾರವನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

ಇಂತಹ ಗಡಿಯಾರಗಳನ್ನು ಇಡಬೇಡಿ

ಮೊದಲು ಗಮನಿಸಬೇಕಾದ ವಿಷಯ ಎಂದರೆ, ಮನೆಯಲ್ಲಿ ಎಂದಿಗೂ ನಿಂತುಹೋಗಿರುವ ಅಥವಾ ಕೆಟ್ಟುಹೋದ ಗಡಿಯಾರವನ್ನು ಇಡಬಾರದು. ಇಂತಹ ಗಡಿಯಾರಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎನ್ನಲಾಗುತ್ತದೆ. ಹಾಳಾದ ಗಡಿಯಾರವನ್ನು ಸಾಧ್ಯವಾದರೆ ಸರಿಪಡಿಸಿ ಬಳಸಬೇಕು ಅಥವಾ ತಕ್ಷಣವೇ ಮನೆಯಿಂದ ತೆಗೆದುಹಾಕಬೇಕು. ಒಡೆದ ಅಥವಾ ಗಡಿಯಾರವನ್ನೂ ಸಹ ದುರದೃಷ್ಟದ ಸಂಕೇತವಾಗಿದ್ದು, ಇವು ಮನೆಯಲ್ಲಿ ಇದ್ದರೆ ಅನಗತ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಈ ದಿಕ್ಕು ಶುಭವಲ್ಲ

ವಾಸ್ತು ನಿಯಮಗಳ ಪ್ರಕಾರ, ಗಡಿಯಾರವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಶುಭವಲ್ಲ. ಈ ದಿಕ್ಕುಗಳಲ್ಲಿ ಗಡಿಯಾರ ಇದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇದು ಆರ್ಥಿಕ ತೊಂದರೆ, ಮನಸ್ತಾಪ ಹಾಗೂ ಕೆಲಸಗಳಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಆದ್ದರಿಂದ ದಕ್ಷಿಣ ಅಥವಾ ಪಶ್ಚಿಮ ಗೋಡೆಯಲ್ಲಿ ಗಡಿಯಾರ ಇದ್ದರೆ, ಅದನ್ನು ಕೂಡಲೇ ಸ್ಥಳಾಂತರಿಸುವುದು ಒಳಿತು.

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಹೀಗೆ ಇಡಲೇಬಾರದು! ಲಕ್ಷ್ಮೀ ದೇವಿ ಮುನಿಯುತ್ತಾಳೆ!

ಬಣ್ಣ ಹೇಗಿರಬೇಕು?

ಗಡಿಯಾರದ ಬಣ್ಣವೂ ವಾಸ್ತು ದೃಷ್ಟಿಯಿಂದ ಪ್ರಮುಖವಾಗಿದೆ. ಗಾಢ ಬಣ್ಣದ ಗಡಿಯಾರಗಳು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎನ್ನಲಾಗುತ್ತದೆ. ವಿಶೇಷವಾಗಿ ಕಪ್ಪು, ನೀಲಿ ಹಾಗೂ ಕೆಂಪು ಬಣ್ಣದ ಗಡಿಯಾರಗಳನ್ನು ಮನೆಯಲ್ಲಿ ಇಡುವುದನ್ನು ತಪ್ಪಿಸಬೇಕು. ಬದಲಾಗಿ ಹಳದಿ, ಕಂದು ಅಥವಾ ಇತರೆ ತಿಳಿ ಬಣ್ಣದ ಗಡಿಯಾರಗಳನ್ನು ಬಳಸುವುದು ಶುಭಕರವಾಗಿದೆ. ಇವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಈ ದಿಕ್ಕು ಸೂಕ್ತ

ವಾಸ್ತು ಶಾಸ್ತ್ರದ ಪ್ರಕಾರ, ಗಡಿಯಾರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದು ಅತ್ಯಂತ ಮಂಗಳಕರ. ಈ ದಿಕ್ಕುಗಳಲ್ಲಿ ಗಡಿಯಾರ ಇದ್ದರೆ ಮನೆಯಲ್ಲಿ ಸಂತೋಷ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ. ಪೂರ್ವ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ ಎನ್ನುವ ನಂಬಿಕೆಯೂ ಇದೆ. ಅಲ್ಲದೆ ಮನೆಯ ಸದಸ್ಯರು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವ ಗುಣವೂ ಬೆಳೆಯುತ್ತದೆ.

ಇನ್ನೊಂದು ಮುಖ್ಯವಾದ ವಿಚಾರ ಎಂದರೆ, ಗಡಿಯಾರವನ್ನು ಬಾಗಿಲಿನ ಮೇಲೆ ಅಥವಾ ಬಾಗಿಲಿನ ನೇರ ಮೇಲ್ಭಾಗದಲ್ಲಿ ಇಡಬಾರದು. ಇದು ವಾಸ್ತು ಶಾಸ್ತ್ರಕ್ಕೆ ವಿರುದ್ಧವಾಗಿದ್ದು, ಇದರೊಂದಿಗೆ ಗಡಿಯಾರದ ಸಮಯವನ್ನು ಉದ್ದೇಶಪೂರ್ವಕವಾಗಿ ಮುಂದಕ್ಕೆ ಅಥವಾ ಹಿಂದೆ ಇಡುವ ಅಭ್ಯಾಸವೂ ಶುಭವಲ್ಲ. ಸಮಯ ಸರಿಯಾಗಿ ಸಾಗುತ್ತಿದ್ದರೆ ಮಾತ್ರ ಜೀವನದಲ್ಲೂ ಸಮತೋಲನ ಮತ್ತು ಪ್ರಗತಿ ಸಾಧ್ಯವೆಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಒಟ್ಟಾರೆ, ಗಡಿಯಾರವನ್ನು ಸರಿಯಾದ ದಿಕ್ಕು, ಬಣ್ಣ ಮತ್ತು ಸ್ಥಿತಿಯಲ್ಲಿ ಇಡುವುದರಿಂದ ವಾಸ್ತು ದೋಷಗಳನ್ನು ತಪ್ಪಿಸಬಹುದು. ಇದು ಮನೆಯಲ್ಲಿ ಧನಾತ್ಮಕ ಶಕ್ತಿ, ಶಾಂತಿ ಹಾಗೂ ಸಮೃದ್ಧಿಯನ್ನು ಕಾಪಾಡಲು ಸಹಕಾರಿಯಾಗುತ್ತದೆ.