Vastu Tips: ಹೊಸವರ್ಷ ಪ್ರಾರಂಭಕ್ಕೂ ಮೊದಲು ಮನೆಗೆ ಈ ವಸ್ತುಗಳನ್ನು ತಂದರೆ ಅದೃಷ್ಟ ನಿಮ್ಮದಾಗುತ್ತದೆ
ಸಿಹಿ–ಕಹಿ ಅನುಭವಗಳ ನಡುವೆ 2025 ಮುಗಿಯುತ್ತ ಬಂದಿದೆ. 2026 ಶಾಂತಿ, ನೆಮ್ಮದಿ ಮತ್ತು ಸಂತೋಷದಿಂದ ಸಾಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಸಂತೋಷವಾಗಿ ಜೀವನ ನಡೆಸಲು ಮನೆಗೆ ತರಬೇಕಾದ ಕೆಲವು ವಿಶೇಷ ವಸ್ತುಗಳಿವೆ. ಅವು ಯಾವುವು? ಅವುಗಳಿಂದ ಮನೆಗೆ ಏನೆಲ್ಲ ಪ್ರಯೋಜನವಾಗಲಿದೆ? ಎಂಬ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 18: ಇನ್ನೇನು ಕೆಲವೇ ದಿನಗಳಲ್ಲಿ 2026ರ ಹೊಸ ವರ್ಷಕ್ಕೆ (New Year) ಕಾಲಿಡಲಿದ್ದೇವೆ. ಹೊಸ ವರ್ಷ ಎಂದರೆ ಹೊಸ ನಿರೀಕ್ಷೆಗಳು, ಹೊಸ ಉತ್ಸಾಹ, ಹೊಸ ಗುರಿಗಳು ಮತ್ತು ಜೀವನದಲ್ಲಿ ಹೊಸ ಆರಂಭದ ಸಂಕೇತ. ಕೆಲವರು ಹಳೆಯ ವರ್ಷದ ತಪ್ಪುಗಳಿಂದ ಪಾಠ ಕಲಿತು ಹೊಸ ಗುರಿಗಳನ್ನು ಇಟ್ಟುಕೊಳ್ಳುತ್ತಿದ್ದರೆ, ಇನ್ನು ಕೆಲವರು ಹೊಸ ಉದ್ಯಮ, ಉದ್ಯೋಗ ಅಥವಾ ವೈಯಕ್ತಿಕ ಜೀವನದಲ್ಲಿ ಹೊಸ ಹೆಜ್ಜೆ ಇಡಲು ಸಿದ್ಧರಾಗಿರುತ್ತಾರೆ. ಹೊಸ ವರ್ಷದ ಆರಂಭವನ್ನು ಉತ್ತಮವಾಗಿ ಮಾಡಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದ (Astro Tips) ನಿಯಮಗಳನ್ನು ಪಾಲಿಸುವುದು ಅತ್ಯಂತ ಮಹತ್ವವೆಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಆರಂಭವಾಗುವ ಮೊದಲು ಕೆಲವು ವಿಶೇಷ ವಸ್ತುಗಳನ್ನು ಮನೆಗೆ ತರುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಮನೆಗೆ ಸಕಾರಾತ್ಮಕತೆ, ಸಮೃದ್ಧಿ ಹಾಗೂ ಶುಭಫಲಗಳು ಲಭಿಸುತ್ತವೆ ಎನ್ನುವ ನಂಬಿಕೆಯಿದೆ. ಅದರಲ್ಲಿ ಮೊದಲನೆಯದಾಗಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ಹಿಂದೂ ಧರ್ಮದಲ್ಲಿ ತುಳಸಿಯನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಮನೆಗೆ ತುಳಸಿ ಗಿಡವನ್ನು ತಂದು ಪ್ರತಿದಿನ ಭಕ್ತಿಯಿಂದ ಪೂಜಿಸುವುದರಿಂದ ಆರ್ಥಿಕ ಸ್ಥಿತಿ ಬಲವಾಗುತ್ತದೆ ಹಾಗೂ ಜೀವನದಲ್ಲಿ ಅಡೆತಡೆಗಳು ಕಡಿಮೆಯಾಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಸಂಜೆ ತುಳಸಿಯ ಮುಂದೆ ದೀಪ ಬೆಳಗಿಸುವುದು ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
Vದಿಂಬಿಗೆ ತಲೆ ಇಟ್ಟ ತಕ್ಷಣ ಸುಖ ನಿದ್ರೆ ನಿಮ್ಮದಾಗಬೇಕೇ..? ಅದಕ್ಕಾಗಿ ಈ ಟಿಪ್ಸ್ ಅನುಸರಿಸಿ
ಹೊಸ ವರ್ಷದಲ್ಲಿ ಹೊಸ ಕೆಲಸ ಅಥವಾ ಯೋಜನೆಯನ್ನು ಆರಂಭಿಸಲು ಯೋಚಿಸುತ್ತಿದ್ದರೆ, ಗಣೇಶನ ಮೂರ್ತಿಯನ್ನು ಮನೆಗೆ ತರುವುದು ಅತ್ಯಂತ ಶುಭಕರ. ಗಣೇಶನು ಅಡೆತಡೆ ಹಾಗೂ ವಿಘ್ನ ನಿವಾರಕನಾಗಿ ಪೂಜಿಸಲ್ಪಡುತ್ತಾನೆ. ದೇವರ ಕೋಣೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಹೊಸ ವರ್ಷದ ಮೊದಲ ದಿನ ಪೂಜೆ ಸಲ್ಲಿಸಿದರೆ ಕಾರ್ಯಸಿದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಇನ್ನೊಂದು ಪ್ರಮುಖ ವಸ್ತು ಎಂದರೆ ನವಿಲು ಗರಿ. ಹೊಸ ವರ್ಷದ ಮೊದಲ ದಿನ ಪೂಜೆಯ ನಂತರ ನವಿಲು ಗರಿಯನ್ನು ಹಣ ಇಡುವ ಸ್ಥಳದಲ್ಲಿ ಇಡುವುದರಿಂದ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಇದಲ್ಲದೆ ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಂಡು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.
ವಾಸ್ತು ಪ್ರಕಾರ, ಹೊಸ ವರ್ಷದ ಮುನ್ನ ಮನೆಗೆ ಕುದುರೆಯ ಲಾಳವನ್ನು ತಂದು ಮುಖ್ಯ ದ್ವಾರದಲ್ಲಿ ನೇತುಹಾಕುವುದು ಕೂಡ ಶುಭಕರ. ಇದು ದುಷ್ಟಶಕ್ತಿಗಳನ್ನು ತಡೆದು ಅದೃಷ್ಟವನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಜತೆಗೆ ಮಹಾಲಕ್ಷ್ಮೀ ಯಂತ್ರವನ್ನು ಮನೆಗೆ ತಂದು ಸರಿಯಾದ ವಿಧಾನದಲ್ಲಿ ಸ್ಥಾಪಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸಿ, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
ಹೀಗಾಗಿ 2026ರ ಹೊಸ ವರ್ಷವನ್ನು ಶುಭಾರಂಭವಾಗಿಸಲು ಈ ವಾಸ್ತು ಸಲಹೆಗಳನ್ನು ಅನುಸರಿಸಿದರೆ, ಜೀವನದಲ್ಲಿ ಸುಖ, ಶಾಂತಿ ಮತ್ತು ಧನಾಗಮನ ಸಾಧ್ಯವೆಂಬ ನಂಬಿಕೆ ಇದೆ.