Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಹೀಗೆ ಇಡಲೇಬಾರದು! ಲಕ್ಷ್ಮೀ ದೇವಿ ಮುನಿಯುತ್ತಾಳೆ!
ಮನೆಯಲ್ಲಿ ಹಿರಿಯರು ಚಪ್ಪಲಿಯನ್ನು ಅಲ್ಲಿ ಬಿಡಬೇಡ, ಇಲ್ಲಿ ಬಿಡಬೇಡ, ಮನೆಯ ಎದುರು ಇಡಬೇಡ ಎನ್ನುವುದನ್ನು ಕೇಳಿರುತ್ತೇವೆ. ಇವೆಲ್ಲಾ ಯಾಕೆ ಮಾಡಬಾರದು ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ವಾಸ್ತು ಶಾಸ್ತ್ರದಲ್ಲಿದ್ದು, ಚಪ್ಪಲಿಯನ್ನು ಎಲ್ಲಿ ಹೇಗೆ ಇಡಬೇಕು ಎಂಬ ಕುರಿತು ಕೆಲ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ.
ಚಪ್ಪಲಿ -
ಬೆಂಗಳೂರು: ಮನೆಯ ಮುಂದೆ ಚಪ್ಪಲಿಗಳನ್ನು (Slippers) ಬಿಡಬೇಡ, ಮನೆಯೊಳಗೆ ಚಪ್ಪಲಿಗಳನ್ನು ಬಳಸಬೇಡ, ಮನೆಯ ದ್ವಾರದ ಮುಂದೆ ಪಾದರಕ್ಷೆಗಳನ್ನು ಹೀಗೆ ಇಡಬೇಡ ಎಂದು ಅಮ್ಮನೋ ಅಥವಾ ಅಜ್ಜಿ ಯೋ ಅಥವಾ ಮನೆಯ ಹಿರಿಯರೋ ಉಪದೇಶ ನೀಡುತ್ತಲೇ ಇರುತ್ತಾರೆ. ಅವರ ಹೀಗೆ ಹೇಳುವುದಕ್ಕೂ ಕಾರಣವಿದ್ದು, ಚಪ್ಪಲಿಗಳನ್ನು ಹೇಗೆ ಬೇಕೆಂದರೆ ಹಾಗೇ ಇಡುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ನಂಬಿಕೆಗಳಿದ್ದು ಇದರ ಬಗ್ಗೆ ವಾಸ್ತುಶಾಸ್ತ್ರದಲ್ಲಿಯೂ(Vastu Shastra) ವಿವರಿಸಲಾಗಿದೆ. ಇದರಂತೆ ಮನೆಯ ವಾಸ್ತುಮೇಲೆ ಪ್ರಭಾವ ಬೀರುವ ಅನೇಕ ಇತರ ವಿಷಯಗಳ ಪೈಕಿ, ಚಪ್ಪಲಿ ಕೂಡಾ ಅತ್ಯಂತ ಪ್ರಮುಖವಾದದ್ದು.
ಚಪ್ಪಲಿಗಳನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಲಿದ್ದು, ವಾಸ ಸ್ಥಳದಲ್ಲಿ ವಾಸ್ತು ದೋಷ ಇದ್ದಾಗ, ಅದು ಸಂಪತ್ತು, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆಗಳು ಮತ್ತು ಜೀವನದಲ್ಲಿ ಏರಿಳಿತಕ್ಕೆ ಕಾರಣವಾಗಬಹುದು.
ಆದ್ದರಿಂದ ಯಾವುದೇ ವಸ್ತುವನ್ನು ಮನೆಯಲ್ಲಿ ಇಡುವಾಗ ಅದರ ಸರಿಯಾದ ಸ್ಥಳ ಮತ್ತು ವಾಸ್ತು ನಿಯಮವನ್ನು ಪಾಲಿಸುವುದು ಅತ್ಯಂತ ಅಗತ್ಯ. ವಾಸ್ತು ನಿಯಮಗಳನ್ನು ಕಡೆಗಣಿಸಿದರೆ ಅದು ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.
ಹಾಗಾದ್ರೆ ಬನ್ನಿ ಮನೆಯಲ್ಲಿ ಚಪ್ಪಲಿಗಳನ್ನು ಹೇಗೆ ಇಡಬೇಕು..? ಪಾದರಕ್ಷೆ ಕುರಿತು ಏನೆಲ್ಲಾ ವಾಸ್ತು ಸಲಹೆಗಳು(Vastu Tips) ಇವೆ..? ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳೋಣ...
ಚಪ್ಪಲಿ–ಬೂಟುಗಳನ್ನು ಹೀಗೆ ಇಟ್ಟರೆ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ
ವಾಸ್ತು ಶಾಸ್ತ್ರದಂತೆ, ಬೂಟುಗಳು ಮತ್ತು ಚಪ್ಪಲಿಗಳನ್ನು ಸರಿಯಾದ ಸ್ಥಳದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ಇಡಬೇಕು. ಅವುಗಳನ್ನು ಅಸ್ತವ್ಯಸ್ತವಾಗಿ, ಪಕ್ಕಕ್ಕೆ ಅಥವಾ ತಲೆಕೆಳಗಾಗಿ ಇಡುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.
ಲಕ್ಷ್ಮಿ ದೇವಿಯ ಕೃಪೆ ದೂರವಾಗುತ್ತದೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಪಾದರಕ್ಷೆಗಳನ್ನು ತಲೆಕೆಳಗಾಗಿ ಇಟ್ಟರೆ ಮಾತಾ ಲಕ್ಷ್ಮಿ ಅಸಮಾಧಾನಗೊಳ್ಳುತ್ತಾಳೆ. ಇದರಿಂದ ಆ ಮನೆಯಲ್ಲಿ ಐಶ್ವರ್ಯ ನೆಲೆಸುವುದಿಲ್ಲ. ಹೀಗಾಗಿ ಬಡತನ ಮತ್ತು ಹಣಕಾಸಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಚಪ್ಪಲಿ ಮತ್ತು ಬೂಟುಗಳನ್ನು ಮನೆಯ ಒಳಭಾಗದಲ್ಲಿ ಇಡಬಾರದು ಎಂಬ ಸಲಹೆ ನೀಡಲಾಗುತ್ತದೆ.
Astro Tips: ಮಕ್ಕಳು ಇಲ್ಲ ಎಂಬ ಕೊರಗು ಕಾಡುತ್ತಿದೆಯೇ? ಹಾಗಾದ್ರೆ ಮಂಗಳವಾರ ಹೀಗೆ ಉಪವಾಸ ವ್ರತ ಮಾಡಿ
ಗ್ರಹದೋಷಕ್ಕೆ ಕಾರಣವಾಗುತ್ತದೆ
ಮನೆಯಲ್ಲಿ ಚಪ್ಪಲಿ ಅಥವಾ ಬೂಟುಗಳನ್ನು ತಲೆಕೆಳಗಾಗಿ(ಮಕ್ಕಡೆ) ಇಡುವುದರಿಂದ ಗ್ರಹದೋಷದ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ವಾಸ್ತು ಶಾಸ್ತ್ರ ಎಚ್ಚರಿಕೆ ನೀಡುತ್ತದೆ. ಇದರಿಂದ ಕುಟುಂಬದ ಸದಸ್ಯರ ಜೀವನದಲ್ಲಿ ಅಡೆತಡೆಗಳು, ಅಶಾಂತಿ ಮತ್ತು ಮಾನಸಿಕ ಒತ್ತಡ ಹೆಚ್ಚಾಗಬಹುದು.
ಮನೆಯ ಬಾಗಿಲ ಬಳಿ ಚಪ್ಪಲಿ ಇಡುವುದರಿಂದ ಏನು ಆಗುತ್ತದೆ?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲ ಬಳಿ ಚಪ್ಪಲಿಗಳನ್ನು ತಲೆಕೆಳಗಾಗಿ ಇಟ್ಟರೆ ಅದು ಕುಟುಂಬ ಸದಸ್ಯರ ಆಲೋಚನೆ ಮತ್ತು ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲಿ ಅನಾರೋಗ್ಯ, ಕಲಹ ಮತ್ತು ಅನೇಕ ಕಷ್ಟ ಕಾರ್ಪಣ್ಯಗಳು ಆರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಚಪ್ಪಲಿ ಬೂಟುಗಳು ರಿವರ್ಸ್ ಆಗಿ ಕಂಡುಬಂದರೆ ತಕ್ಷಣವೇ ಅವುಗಳನ್ನು ಸರಿಯಾಗಿ ಇಡಬೇಕು.
ಪಾಸಿಟಿವ್ ಎನರ್ಜಿ ಕಡಿಮೆಯಾಗುತ್ತದೆ
ಜ್ಯೋತಿಷ್ಯ ಶಾಸ್ತ್ರದಂತೆ, ಚಪ್ಪಲಿ ಮತ್ತು ಬೂಟುಗಳನ್ನು ತಲೆಕೆಳಗಾಗಿ ಇಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ದೂರವಾಗಿ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ. ಇದು ಕುಟುಂಬದ ಸಂತೋಷ, ಶಾಂತಿ ಮತ್ತು ಸಮೃದ್ಧಿಗೆ ದೊಡ್ಡ ಅಡ್ಡಿಯಾಗುತ್ತದೆ.
ಉತ್ತರ–ಪೂರ್ವ ದಿಕ್ಕಿನಲ್ಲಿ ಇಡಬಾರದು
ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ಮತ್ತು ಪೂರ್ವ ದಿಕ್ಕುಗಳು ಮಾತಾ ಲಕ್ಷ್ಮಿಗೆ ಸಂಬಂಧಿಸಿದ ದಿಕ್ಕುಗಳಾಗಿವೆ. ಈ ದಿಕ್ಕಿನಲ್ಲಿ ಚಪ್ಪಲಿ ಅಥವಾ ಬೂಟುಗಳನ್ನು ಇಟ್ಟರೆ ಮನೆಯಿಂದ ಧನಾತ್ಮಕ ಶಕ್ತಿ ಹೊರಹೋಗುತ್ತದೆ. ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
ವಾಸ್ತು ಪಾಲನೆ ಹೇಗೆ?
ಚಪ್ಪಲಿ–ಬೂಟುಗಳನ್ನು ಸದಾ ನೇರವಾಗಿ ಇಡಿ
ಮನೆಯ ಒಳಭಾಗದಲ್ಲಿ ಇಡುವುದನ್ನು ತಪ್ಪಿಸಿ
ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ
ಚಪ್ಪಲಿ ಸ್ಟ್ಯಾಂಡ್ ಬಳಸುವುದು ವಾಸ್ತು ದೃಷ್ಟಿಯಿಂದ ಶುಭ