ಬೆಂಗಳೂರು: ಯಶಸ್ಸನ್ನು ಪ್ರೀತಿಸದವರು ಯಾರೂ ಇಲ್ಲ, ಈ ಆಧುನಿಕ ಯುಗದಲ್ಲಿ ಎಲ್ಲಾರೂ ವಿಜಯಲಕ್ಷ್ಮೀ ಹಿಂದೆಯೇ ಓಡುವವರೇ.. ವಿದ್ಯಾಭ್ಯಾಸದಿಂದ ಹಿಡಿದು ಕಾರ್ಯಕ್ಷೇತ್ರದವರೆಗೂ ತಾನು ಮುಂದು ಬರಬೇಕು, ಗುರುತಿಸಿಕೊಳ್ಳಬೇಕು ಹಾಗೂ (Vastu Shasthra) ನೇಮ್ - ಫೇಮ್ ಸಿಗಬೇಕು ಎನ್ನುವ ಹಂಬಲ ಇದೆ ಇರುತ್ತದೆ. ಹೀಗೆ ಪ್ರತಿಯೊಬ್ಬರೂ ಸಾಧನೆ ಎಂಬ ಕನಸಿನ ಕುದುರೆಯನ್ನೇರಿ ಸವಾರಿ ಮಾಡುವವರೇ.. ಆದರೆ ಈ ಯಶಸ್ಸಿನ ಮಾರ್ಗ ಸುಲಭವಲ್ಲ, ಹೆಸರುಗಳಿಸಲು ಹಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ಅವುಗಳನ್ನೆಲ್ಲ ಮೆಟ್ಟಿ ನಿಲ್ಲಬೇಕಾಗುತ್ತದೆ. ಇಲ್ಲಿ ಪರಿಶ್ರಮದ ಜೊತೆ ಅದೃಷ್ಟ ಮುಖ್ಯವಾಗಲಿದ್ದು, ನೀವು ಕೆಲಸ ಮಾಡುವ ಸ್ಥಳದ ವಾಸ್ತು(Vastu) ಸರಿಯಾಗಿದ್ದರೆ ಅದೃಷ್ಟ ಲಕ್ಷ್ಮೀ ಒಲಿದು ಗೆಲುವನ್ನು ಕರುಣಿಸುತ್ತಾಳೆ. ನಿಮ್ಮ ಆಫೀಸ್ ಅಥವಾ ಕಚೇರಿಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ನಾನಾ ಸದುಪಯೋಗಗಳಿದ್ದು, ಯಶಸ್ಸಿನ ದಾರಿಯನ್ನು ಸುಗಮಗೊಳಿಸುತ್ತದೆ.
ಹೌದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯುವುದು ಸುಲಭವಲ್ಲ. ಕೆಲವು ಬಾರಿ ಹೆಚ್ಚಿನ ಪರಿಶ್ರಮ, ಅರ್ಹತೆ ಗಳಿದ್ದರೂ ಕೆಲಸ ಸಿಗುವುದಿಲ್ಲ. ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು. ವಾಸ್ತು ಶಾಸ್ತ್ರದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಬೇಕೇ..?; ಹಾಗಾದ್ರೆ ತಪ್ಪದೇ ಈ ವಾಸ್ತು ನಿಯಮ ಪಾಲಿಸಿ ಪ್ರಕಾರ ಕೆಲಸ ಮಾಡುವ ಜಾಗವು ಅಸ್ತವ್ಯಸ್ತ ಹಾಗೂ ಅಸ್ವಚ್ಚತೆಯಿಂದ ಕೂಡಿದ್ದರೆ ಸಕಾರಾತ್ಮಕ ಶಕ್ತಿಯನ್ನು ಮತ್ತು ಬೆಳವಣಿಗೆಯನ್ನು ತಡೆಯುತ್ತದೆ. ಹಾಗಾಗಿ ಉದ್ಯೋಗ ಕ್ಷೇತ್ರದ ಜೊತೆ ಜೀವನದಲ್ಲಿ ಯಶಸ್ಸು ಸಿಗಬೇಕಾದ್ದರೆ ಏನು ಮಾಡಬೇಕು..? ಈ ಬಗ್ಗೆ ವಾಸ್ತು ಶಾಸ್ತ್ರ ಏನೇಳುತ್ತದೆ...? ಇಲ್ಲಿದೆ ಮಾಹಿತಿ
ಈ ದಿಕ್ಕು ಒಳ್ಳೆಯದು
ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕೂತು ಕೆಲಸ ಮಾಡುವುದರಿಂದ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ದಿನವಿಡೀ ಉಲ್ಲಸಿತವಾಗಿರುವಂತೆ ಮಾಡುತ್ತದೆ. ಉತ್ತರ ದಿಕ್ಕಿನ ಅಧಿಪತಿ ಕುಬೇರ. ಕುಬೇರ ಎಂದರೆ ಹಣದ ಒಡೆಯ. ಕಚೇರಿಯ ವ್ಯವಹಾರ, ವ್ಯಾಪಾರದಲ್ಲಿ ಉತ್ತಮ ಫಲ ಕಾಣಲು ಕುಬೇರನ ಅನುಗ್ರಹ ಬೇಕೇಬೇಕು. ವೃತ್ತಿ ನಿರತರು ನೀವಾಗಿದ್ದರೆ, ಕಾರ್ಯಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ್ದವರು ನೀವಾಗಿದ್ದರೆ ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುವುದು ಒಳ್ಳೆಯದು. ಪೂರ್ವ ದಿಕ್ಕು ಸೂರ್ಯನನ್ನು ಪ್ರತಿನಿಧಿಸುತ್ತದೆ. ಜೀವನದಲ್ಲಿ ಉನ್ನತಿಯನ್ನು ಸೂಚಿಸುತ್ತದೆ. ಬೆಳವಣಿಗೆಯ ಸಂಕೇತವಾಗಿದೆ.
Vastu Tips: ಮನೆಯಲ್ಲಿ ದೇವರ ಮೂರ್ತಿ ಹೇಗಿರಬೇಕು? ವಾಸ್ತು ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ?
ಅದೃಷ್ಟ ಹೆಚ್ಚಿಸುವ ಗಿಡಗಳು
ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಮನಿ ಪ್ಲಾಂಟ್, ಲಕ್ಕಿ ಪ್ಲಾಂಟ್ ಹಾಗೂ ಬಿದಿರು ಗಿಡಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಂತೆ ಮಾಡುವುದು. ಕೆಲಸದಲ್ಲಿ ಯಶಸ್ಸು ಸಾಧಿಸಲು ನಿಮ್ಮ ಕೊಠಡಿಯ ಉತ್ತರ ದಿಕ್ಕಿನಲ್ಲಿ ಹಸಿರು ಗಿಡಗಳನ್ನು ಇರಿಸಿ. ಹಸಿರಾದ ವಾತಾವರಣವು ಹೊಸ ಪ್ರಾರಂಭದ ಸಂಕೇತವಾಗಿದೆ ಮತ್ತು ಉತ್ತಮ ಅವಕಾಶಗಳನ್ನು ಆಕರ್ಷಿಸುತ್ತದೆ. ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಒಳಾಂಗಣ ಗಿಡಗಳನ್ನು ಇಡಿ. ಇದರಿಂದ ನಿಮ್ಮ ಅದೃಷ್ಟ ಹೆಚ್ಚಾಗಬಹುದು.
ತಪ್ಪಿಯೂ ಹೀಗೆ ಮಾಡಬೇಡಿ
ನಿಮ್ಮ ಮೇಜಿನ ಮೇಲೆ ಯಾವುದೇ ದೇವರ ವಿಗ್ರಹ ಅಥವಾ ಭಾವಚಿತ್ರಗಳನ್ನು ಇಟ್ಟುಕೊಳ್ಳಬೇಡಿ. ಹಾಗೆ ಇಟ್ಟುಕೊಳ್ಳುವುದು ವಾಸ್ತು ಶಾಸ್ತ್ರಕ್ಕೆ ವಿರುದ್ಧವಾಗಿದೆ. ಇನ್ನು ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಲು ವೃದ್ಧಿ ಯಂತ್ರವನ್ನು ಪೂಜಿಸಬಹುದು. ಆದರೆ, ಶುಭ ಮಹೂರ್ತ ನೋಡಿದ ನಂತರವೇ ಅದನ್ನು ಸ್ಥಾಪಿಸಬೇಕು. ಮನೆಯಲ್ಲಿ ವೃದ್ಧಿ ಯಂತ್ರ ಸ್ಥಾಪಿಸಿದ ನಂತರ ನಿಯಮಿತವಾಗಿ ಅದನ್ನು ಪೂಜಿಸಬೇಕು, ಹಾಗಿದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.