ಬೆಂಗಳೂರು: ಎಲ್ಲರಿಗೂ ಹಣ ಮಾಡಬೇಕೆಂಬ ಹಂಬಲವಿರುತ್ತದೆ. ನಾವೆಲ್ಲರೂ ಕೆಲಸ ಮಾಡುವುದೇ ಉತ್ತಮವಾಗಿ ಸಂಪಾದನೆಗಾಗಿಯೇ. ಆದರೆ ಇಂದಿನ ಕ್ವಾಸ್ಟ್ಲೀ ದುನಿಯಾದಲ್ಲಿ ಸಂಪಾದನೆಗಿಂತ ಖರ್ಚೇ ಜಾಸ್ತಿಯಾಗುತ್ತಿರುತ್ತದೆ. ಇದು ನಮ್ಮೆಲ್ಲರ ಆತಂಕ ಮತ್ತು ಭಯಕ್ಕೆ ಕಾರಣವಾದ ವಿಷಯವೇ ಹೌದು. ಹಣದ ಯಾವಾಗ ಬರುತ್ತದೆ ಯಾವಾಗ ಹೋಗುತ್ತದೆ ಗೊತ್ತಾಗುವುದಿಲ್ಲ. ಕೆಲವರು ಎಷ್ಟೇ ದುಡಿದರೂ ಹಣ ಮಾತ್ರ ನಿಲ್ಲುವುದಿಲ್ಲ. ಅದಕ್ಕೆ ಏನು ಕಾರಣ ಅಂತ ಬಹುತೇಕರು ಚಿಂತೆ ಮಾಡುತ್ತಿರುತ್ತಾರೆ. ಇದಕ್ಕೆ (Vastu Tips) ವಾಸ್ತುವೂ ಒಂದು ಕಾರಣ. ಬಹುತೇಕರು ಪರ್ಸು, ಬ್ಯಾಗುಗಳ ವಾಸ್ತು ಬಗ್ಗೆ ಆಲೋಚನೆ ಮಾಡುವುದಿಲ್ಲ. ಅದರಿಂದಲೇ ನಿಮ್ಮ ಹಣ ನಿಮ್ಮಲ್ಲಿ ಉಳಿಯುತ್ತಿಲ್ಲ ಎಂಬ ಬಗ್ಗೆ ಐಡಿಯಾ ಇಲ್ಲ.
ಆದರೆ ನಿಮ್ಮ ಸಮಸ್ಯೆಗೆ ವಾಸ್ತು ಶಾಸ್ತ್ರದಲ್ಲಿ(Vastu Shastra) ಪರಿಹಾರವಿದೆ. ನಿಮ್ಮ ಪರ್ಸಿನಲ್ಲಿ, ಬ್ಯಾಗಿನಲ್ಲಿ ಹಣ ಹೆಚ್ಚು ಮಾಡುವಂತಹ, ಹಣ ಆಕರ್ಷಿಸುವಂತಹ, ಹಣವನ್ನು ಪರ್ಸಿನಲ್ಲಿಯೇ ಉಳಿಸುವಂತಹ ಕೆಲವು ವಾಸ್ತು ಟಿಪ್ಸ್ಗಳಿವೆ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಕಾಪಾಡಿಕೊಳ್ಳಲು ಮತ್ತು ಎಂದಿಗೂ ಹಣದ ಕೊರತೆಯಾಗದಂತೆ ನೋಡಿಕೊಳ್ಳಲು ಯಾವ ಐದು ವಸ್ತುಗಳನ್ನು ಪರ್ಸ್ನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಕುಬೇರನನ್ನು ಸಂಪತ್ತು ಮತ್ತು ಸಮೃದ್ಧಿಯ ದೇವರು ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಪರ್ಸ್ನಲ್ಲಿ ಕುಬೇರ ಯಂತ್ರವನ್ನು ಚಿಕ್ಕ ಹಳದಿ ಅಥವಾ ಕೆಂಪು ಬಟ್ಟೆಯಲ್ಲಿ ಸುತ್ತಿ ಇಟ್ಟುಕೊಳ್ಳಿ. ಇದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಇನ್ನು, ಬಹುತೇಕರು ನಾಣ್ಯ ಮತ್ತು ನೋಟುಗಳನ್ನು ಜೊತೆಯಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ನಾಣ್ಯ, ನೋಟುಗಳನ್ನು ಜೊತೆಯಲ್ಲಿಟ್ಟುಕೊಂಡರೆ ಜೊತೆಯಾಗಿಯೇ ಖಾಲಿಯಾಗುತ್ತದೆ. ಹಾಗಾಗಿ, ಅವುಗಳನ್ನು ಪರ್ಸಿನಲ್ಲಿ ಪ್ರತ್ಯೇಕವಾಗಿ ಇಟ್ಟುಕೊಳ್ಳಿ.
Vastu Tips: ಮನೆಯಲ್ಲಿ ಬಾಲ್ಕನಿ ನಿರ್ಮಿಸುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ
ಅಕ್ಕಿಯನ್ನು ಸಮೃದ್ಧಿ ಮತ್ತು ಯೋಗಕ್ಷೇಮದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಪರ್ಸ್ನಲ್ಲಿ ಕೆಲವು ಅರಿಶಿನ ಲೇಪಿತ ಅಕ್ಕಿ ಕಾಳುಗಳನ್ನು ಇಟ್ಟುಕೊಳ್ಳುವುದು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗುರುವಾರದಂದು, ಅರಿಶಿನ ಲೇಪಿತ ಅಕ್ಕಿ ಕಾಳುಗಳನ್ನು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಿ, ಮತ್ತು ಶುಕ್ರವಾರದಂದು, ಈ ಧಾನ್ಯಗಳನ್ನು ನಿಮ್ಮ ಪರ್ಸ್ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ.
ಲಕ್ಷ್ಮೀದೇವಿಯ ಕೃಪಾಕಟಾಕ್ಷ ಇದ್ದರೆ ಹಣ ಹುಡುಕಿಕೊಂಡು ಬರುತ್ತದೆ. ಹಾಗಾಗಿ ನಿಮ್ಮ ಪರ್ಸಿನಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮೀಯ ಫೋಟೋ ಮತ್ತು ಬೆಳ್ಳಿ ನಾಣ್ಯವನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ. ಬೆಳ್ಳಿ ನಾಣ್ಯವು ಧನಾತ್ಮಕ ಬದಲಾವಣೆಯನ್ನು ಉಂಟು ಮಾಡುತ್ತದೆ. ಬೆಳ್ಳಿಯನ್ನು ಶುದ್ಧತೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಅನೇಕರಿಗೆ ಪರ್ಸ್ ನಲ್ಲಿ ಹಳೆಯ ಬಿಲ್ ಗಳನ್ನಿಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಕೆಲವರ ಪರ್ಸ್ ನಲ್ಲಿ ವರ್ಷಾನುಗಟ್ಟಲೆ ಹಳೆಯ ಬಿಲ್ ಇರುತ್ತದೆ. ಆದರೆ ಇದು ಒಳ್ಳೆಯದಲ್ಲ. ನಿಮ್ಮ ಪರ್ಸ್ ಅನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇರಿಸಿಕೊಳ್ಳಿ. ಕೆಂಪು ಅಥವಾ ಹಳದಿ ಬಣ್ಣದ ಪರ್ಸ್ ಬಳಸಿ, ಏಕೆಂದರೆ ಈ ಬಣ್ಣಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುತ್ತವೆ. ನಿಮ್ಮ ಪರ್ಸ್ನಲ್ಲಿ ಯಾವುದೇ ಅಶುದ್ಧ ವಸ್ತುಗಳನ್ನು ಎಂದಿಗೂ ಇಟ್ಟುಕೊಳ್ಳಬೇಡಿ, ಏಕೆಂದರೆ ಇದು ಸಂಪತ್ತಿನ ನಷ್ಟಕ್ಕೆ ಕಾರಣವಾಗಬಹುದು. ಇನ್ನು, ಮುಖ್ಯವಾಗಿ ನಿಮ್ಮ ಪರ್ಸ್ ಅನ್ನು ಎಂದಿಗೂ ನೆಲದ ಮೇಲೆ ಇಡಬೇಡಿ, ಏಕೆಂದರೆ ಇದನ್ನು ಆರ್ಥಿಕ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.