ಮೇಷ ರಾಶಿ ಮೇಲೆ ಚಂದ್ರ ಗ್ರಹದ ಒಳಿತು ಕೆಡುಕಿನ ಪರಿಣಾಮ ಏನು?
ಬದುಕಿನಲ್ಲಿ ಸುಖವನ್ನು ಕರುಣಿಸುವ ಚಂದ್ರನು ದ್ವಾದಶ ರಾಶಿಯಲ್ಲಿ ಅದರಲ್ಲೂ ಮುಖ್ಯವಾಗಿ ಮೇಷ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಾನೆ, ಯಾವ ಸಂದರ್ಭದಲ್ಲಿ ಕಷ್ಟ, ಯಾವ ಸಂದರ್ಭದಲ್ಲಿ ದುಃಖವನ್ನು ಕರುಣಿಸುತ್ತಾನೆ ಎಂಬುದರ ಕುರಿತು ವಿಶ್ವವಾಣಿ ಟಿವಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಭಾರತೀಯ ಜ್ಯೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ.
ಬೆಂಗಳೂರು: ಮೇಷ ರಾಶಿಯವರಿಗೆ (Aries) ಚಂದ್ರ (Moon) ಸುಖ ಸ್ಥಾನದ ಯಜಮಾನ. ಆತನಿಗೆ ಕೇಂದ್ರಾಧಿಪತ್ಯ ದೋಷವಿದೆ. ಮಂಗಳನ ಜೊತೆ ಆತ್ಮೀಯ ಸಂಬಂಧ ಹೊಂದಿರುವುದರಿಂದ ಚಂದ್ರನಿಂದ ಮೇಷ ರಾಶಿಯವರಿಗೆ ಕೆಟ್ಟದ್ದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಭಾರತೀಯ ಜ್ಯೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ (Mahabala Murthy Kodlekere). ವಿಶ್ವವಾಣಿ ಟಿವಿ (Vishwavani tv) ಜೊತೆ ಮಾತನಾಡಿದ ಅವರು, ಶನಿ ಕಾಟ ಬಂದಾಗ ಸಾಕಷ್ಟು ತೊಂದರೆ ಬರುತ್ತದೆ. ಅಮಾವಾಸ್ಯೆ ಚಂದ್ರನು ಶನಿ, ರಾಹು, ಕೇತು ಜೊತೆ ಸೇರಿಕೊಂಡರೆ ಆಗ ಮೇಷ ರಾಶಿಯವರಿಗೆ ಬಹಳ ಕಷ್ಟ ಕೊಡುತ್ತದೆ. ಸಂಪೂರ್ಣ ಸುಖವೇ ನಾಶವಾಗುತ್ತದೆ. ಕಚೇರಿ, ಮನೆ, ಮಕ್ಕಳ ಜೊತೆ ಸದಾ ಕಿರಿಕಿರಿ ಉಂಟಾಗುತ್ತಿರುತ್ತದೆ. ದುಷ್ಟ ಪ್ರಭಾವಗಳು ಕಾಣಿಸಿಕೊಳ್ಳಲು ಸಾಧ್ಯವಿರುತ್ತದೆ. ಕೆಲವೊಂದು ವೃತ್ತಿಯಲ್ಲಿ ಮೇಷ ರಾಶಿಯವರಿಗೆ ಚಂದ್ರನು ಸೋಲು, ಗೆಲುವನ್ನು ಕೂಡ ಕೊಡುತ್ತಾನೆ. ಅಸಹಾಯಕತೆಯನ್ನು ಕೂಡ ತಂದುಕೊಡುತ್ತಾನೆ. ಚಂದ್ರ ಕೃಪೆ ಇದ್ದಾಗ ಕಾಮಧೇನುವಾಗಿ ಚಂದ್ರ ಇದ್ದರೆ, ಚಂದ್ರನ ಕೃಪೆ ಇಲ್ಲದೇ ಇದ್ದಾಗ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಕೂಡ ನೋಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.