ಗರ್ಭಿಣಿಯರಿಗೆ ಮಾಡುವ ಸೀಮಂತ ಶಾಸ್ತ್ರದ ಹಿಂದಿನ ವೈಜ್ಞಾನಿಕ ಕಾರಣವೇನು?
ಒಬ್ಬ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ನಾನಾ ವಿಧದ ಸಂಸ್ಕಾರಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಮಾಡಲೇಬೇಕಾದ ಹದಿನಾರು ಸಂಸ್ಕಾರಗಳಲ್ಲಿ ಸೀಮಂತ ಶಾಸ್ತ್ರ ಕೂಡ ಒಂದಾಗಿದೆ. ಈ ಶಾಸ್ತ್ರವನ್ನು ಮಾಡುವುದರ ಹಿಂದಿರುವ ವೈಜ್ಞಾನಿಕ ಕಾರಣವೇನು ಎನ್ನುವುದರ ಕುರಿತು ಖ್ಯಾತ ಆಯುರ್ವೇದ ತಜ್ಞರಾದ ಡಾ. ಸಂದೀಪ್ ಬೆಣಕಲ್ ಅವರು ಹೇಳಿರುವುದು ಹೀಗೆ..
ವಿದ್ಯಾ ಇರ್ವತ್ತೂರು
Mar 28, 2026 3:04 PM
ಬೆಂಗಳೂರು: ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಹದಿನಾರು ಬಗೆಯ ಸಂಸ್ಕಾರಗಳನ್ನು (Sacrament) ಮಾಡಲಾಗುತ್ತದೆ. ಇದರಲ್ಲಿ ಒಂದು ಸೀಮಂತ ಶಾಸ್ತ್ರ (Baby Shower). ಇದು ಸಂಭ್ರಮಾಚರಣೆಯ ಉದ್ದೇಶದಿಂದ ಮಾಡುವ ಸಂಸ್ಕಾರವಲ್ಲ. ಇದರ ಹಿನ್ನಲೆ, ವೈಜ್ಞಾನಿಕ ಕಾರಣಗಳು ಇವೆ. ಇದನ್ನು ಅರಿತು ಮಾಡಬೇಕಾದ ಅವಶ್ಯಕತೆ ಇದೆ ಎನ್ನುತ್ತಾರೆ ಖ್ಯಾತ ಆಯುರ್ವೇದ ತಜ್ಞರಾದ ಡಾ. ಸಂದೀಪ್ ಬೆಣಕಲ್. ವಿಶ್ವವಾಣಿ ಹೆಲ್ತ್ (Vishwavani Health) ನಲ್ಲಿ ಮಾತನಾಡಿರುವ ಅವರು, ಸೀಮಂತ ಶಾಸ್ತ್ರದ ಹಿಂದಿರುವ ವೈಜ್ಞಾನಿಕ ಕಾರಣವನ್ನು ವಿವರಿಸಿದರು. ಸೀಮಂತ ಎಂದರೆ ಮಗುವಿನ ಅವಶ್ಯಕತೆಯನ್ನು ಪೂರೈಸುವ ಕಾರ್ಯವಾಗಿದೆ. ಸಾಮಾನ್ಯವಾಗಿ ಇದನ್ನು ತಾಯಿ ಮನೆಯಲ್ಲಿ ನಾಲ್ಕೈದು ತಿಂಗಳಿಗೆ ಮಾಡಬೇಕು. ಈ ಸಂದರ್ಭದಲ್ಲಿ ಮಗುವಿನ ಹೃದಯ ಬೆಳವಣಿಗೆಯಾಗುತ್ತಿರುತ್ತದೆ. ಅದಕ್ಕೆ ಸಂಬಂಧಿಸಿದ ಸಂಸ್ಕಾರ ಮತ್ತು ಪ್ರೀತಿಯನ್ನು ಈ ಸಂದರ್ಭದಲ್ಲಿ ತಾಯಿಯ ಮೂಲಕ ಮಗುವಿಗೆ ನೀಡಬೇಕು ಎನ್ನುತ್ತಾರೆ ಅವರು.