Health Tips: ಮದ್ಯಪಾನ ಬಿಟ್ಟರೂ ಈ ಅಭ್ಯಾಸಗಳು ನಿಮ್ಮನ್ನು ಬೇಗನೆ ವೃದ್ಧಾಪ್ಯದತ್ತ ತಳ್ಳಬಹುದು!
ಕೇವಲ ಮದ್ಯಪಾನ ಬಿಟ್ಟರೆ ನೀವು ಆರೋಗ್ಯಕರವಾಗಿ ಇರಲು ಸಾಧ್ಯವಿಲ್ಲ.. ನಿಮ್ಮ ಕೆಲವೊಂದು ದಿನ ನಿತ್ಯದ ಅಭ್ಯಾಸ ಗಳು ಕೂಡ ನಿಮ್ಮ ದೇಹವನ್ನು ವೃದ್ಧಾಪ್ಯದತ್ತ ತಳ್ಳುತ್ತದೆ. ಹಾಗಾಗಿ ಯಾವ ಅಭ್ಯಾಸಗಳನ್ನು ತಪ್ಪಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ...
ಸಂಗ್ರಹ ಚಿತ್ರ -
ನವದೆಹಲಿ,ಮಾ.28: ಮದ್ಯಪಾನ (Alcohol) ಎನ್ನುವುದು ದೇಹಕ್ಕೆ ಅನಾರೋಗ್ಯಕರ..ಹೀಗಾಗಿ ಹೆಚ್ಚಿನವರು ಇದರ ಸೇವನೆ ತಪ್ಪಿಸುತ್ತಾರೆ. ಆದರೆ ಕೇವಲ ಮದ್ಯಪಾನ ಬಿಟ್ಟರೆ ನೀವು ಆರೋಗ್ಯಕರವಾಗಿ ಇರಲು ಸಾಧ್ಯವಿಲ್ಲ.. ನಿಮ್ಮ ಕೆಲವೊಂದು ದಿನ ನಿತ್ಯದ ಅಭ್ಯಾಸಗಳು ಕೂಡ ನಿಮ್ಮ ದೇಹವನ್ನು ವೃದ್ಧಾಪ್ಯ ದತ್ತ ತಳ್ಳುತ್ತದೆ. ಹಾಗಾಗಿ ಯಾವ ಅಭ್ಯಾಸಗಳನ್ನು ತಪ್ಪಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.
ಅತೀಯಾಗಿ ಕುಳಿತುಕೊಳ್ಳವುದು:
ಯಾವುದೇ ವ್ಯಾಯಾಮವಿಲ್ಲದೆ ಪ್ರತಿದಿನ 8 ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವ ಜನರು ಬೊಜ್ಜು ಅಥವಾ ಧೂಮ ಪಾನಕ್ಕೆ ಹೋಲಿಸಬಹುದಾದ ಅಪಾಯಗಳನ್ನು ಎದುರಿಸುತ್ತಾರೆ. ನೀವು ದೀರ್ಘಕಾಲ ಕುಳಿತುಕೊಂಡರೆ ನಿಧಾನಗತಿಯ ಚಯಾಪಚಯ ಕ್ರಿಯೆ, ಕಳಪೆ ರಕ್ತ ಪರಿಚಲನೆ ಮತ್ತು ದೀರ್ಘ ಕಾಲದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
ಕಡಿಮೆ ನಿದ್ರೆ:
ದೇಹಕ್ಕೆ ಅಗತ್ಯವಾಗಿ ನಿದ್ದೆ ಬೇಕು. ಕಳಪೆ ನಿದ್ರೆ ನಿಮ್ಮನ್ನು ದಣಿದಂತೆ ಮಾಡುವುದಿಲ್ಲ, ಆದರೆ ಅದು ಒಳಗಿನಿಂದ ವಯಸ್ಸಾಗುವುದನ್ನು ವೇಗಗೊಳಿಸುತ್ತದೆ. ನಿದ್ರೆಯ ಸಮಯದಲ್ಲಿ, ನಿಮ್ಮ ದೇಹವು ಜೀವಕೋಶಗಳನ್ನು ಸರಿಪ ಡಿಸುತ್ತದೆ, ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ಆದರೆ ಸರಿಯಾದ ನಿದ್ದೆ ಇಲ್ಲದಾಗ ಈ ಎಲ್ಲ ಕಾರ್ಯಗಳು ಕುಂಠಿತ ಗೊಳ್ಳಬಹುದು.
Health Tips: ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ
ನಿರಂತರ ಒತ್ತಡ:
ಒತ್ತಡ ಹೆಚ್ಚಿದ್ದಾಗ ನಿಮ್ಮ ದೇಹವು ದೀರ್ಘಕಾಲದವರೆಗೆ ಕಾರ್ಟಿ ಸೋಲ್ ಅನ್ನು ಬಿಡುಗಡೆ ಮಾಡುತ್ತದೆ. ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳು ಕಾಲಜನ್ ಅನ್ನು ಒಡೆಯಬಹುದು, ಇದು ಅಕಾಲಿಕ ಸುಕ್ಕುಗಳು ಮತ್ತು ಚರ್ಮವನ್ನು ಕುಗ್ಗಿಸುವಂತೆ ಮಾಡಬಹುದು. ದೀರ್ಘಕಾಲದ ಒತ್ತಡವು ನಿಮ್ಮ ಹೃದಯ, ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಕೂಡ ಬೀರಬಹುದು.
ಅತೀಯಾದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಬಳಕೆ:
ಅತಿಯಾದ ಸ್ಕ್ರೀನ್ ಎಕ್ಸ್‌ಪೋಸರ್ ನಿಮ್ಮ ಕಣ್ಣುಗಳಿಗೆ ಹೆಚ್ಚಿ ಪರಿಣಾಮ ಬೀರುತ್ತದೆ. ಸ್ಕ್ರೀನ್‌ಗಳಿಂದ ನೀಲಿ ಬೆಳಕು ನಿಮ್ಮ ನಿದ್ರೆಯನ್ನು ಅಡ್ಡಿಪಡಿಸಬಹುದು.
ನಿರ್ಜಲೀಕರಣ:
ದೇಹಕ್ಕೆ ನೀರಿನಂಶ ಅಗತ್ಯವಾಗಿರುತ್ತದೆ. ನೀರಿನಂಶ ಕಡಿಮೆ ಯಾದರೆ ಜೀರ್ಣಕ್ರಿಯೆ ಮತ್ತು ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಸಾಕಷ್ಟು ಪ್ರಮಾಣದ ನೀರಿನ ಸೇವನೆ ಅಗತ್ಯ ವಾಗಿರುತ್ತದೆ.