ಯುಗಾದಿ ವರ್ಷ ಭವಿಷ್ಯ: ಮೀನ ರಾಶಿಗೆ ಅದೃಷ್ಟ ಹೇಗಿರಲಿದೆ?
ಯುಗಾದಿಯ ಮೂಲಕ ಪರಾಭವ ನಾಮ ಸಂವತ್ಸರ ಆರಂಭವಾಗಿದೆ. ಈ ವರ್ಷವು ತಾಳ್ಮೆ ಮತ್ತು ವಿವೇಕದಿಂದ ವರ್ತಿಸಿದರೆ ಶುಭ ಫಲಗಳ ನಿರೀಕ್ಷೆ ಮಾಡಬಹುದು. ಮೀನ ರಾಶಿಗೆ ಈ ಸಂವತ್ಸರ ಹೇಗಿರಲಿದೆ? ಯಾವ ರೀತಿಯ ಬದಲಾವಣೆಗಳು ಕಂಡುಬರಲಿವೆ? ಈ ವರ್ಷ ಆರ್ಥಿಕವಾಗಿ ಪ್ರಗತಿ ಕಾಣಲಿದೆಯೇ? ಎನ್ನುವುದರ ಬಗ್ಗೆ ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.
Pushpa Kumari
Mar 29, 2026 7:02 PM
ಬೆಂಗಳೂರು, ಮಾ. 29: ಮೀನ ರಾಶಿಗೆ ಈ ವರ್ಷ ಗ್ರಹಗತಿಗಳ ಬದಲಾವಣೆಯಿಂದ ಮಿಶ್ರ ಫಲ ಇರಲಿದೆ. ಈ ವರ್ಷ ಶನಿಯ ಪ್ರಭಾವ ಇರಲಿದ್ದು, ಸುಖ ಹಾಗೂ ದುಃಖ ಎರಡರ ಅನುಭವವೂ ಆಗಲಿದೆ. ಆದರೆ ಗುರುವಿನ ಪ್ರಭಾವದಿಂದ ಇದ್ದ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಭೂ ಖರೀದಿ, ನೂತನ ಮನೆ ಕಟ್ಟುವ ಭಾಗ್ಯ ಇರಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸರ್ಕಾರಾತ್ಮಕ ಬದಲಾವಣೆ ಸಂಭವಿಸಲಿದೆ. ಜೂನ್ ನಂತರ ಜೀವನದಲ್ಲಿ ಅನೇಕ ಯಶಸ್ಸು ದೊರೆಯಲಿದೆ ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.