ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಒಂದು ಆಟೋದೊಳಗೆ 14 ಮಕ್ಕಳು! ಪೊಲೀಸರಿಗೆ ಫುಲ್‌ ಶಾಕ್‌

ಉತ್ತರ ಪ್ರದೇಶದ ಝಾನ್ಸಿಯ ಜಂಕ್ಷನ್‍ನಲ್ಲಿ ಆಟೋ ರಿಕ್ಷಾವೊಂದರಲ್ಲಿ ಡ್ರೈವರ್‌ 14 ಮಂದಿ ಶಾಲಾ ಮಕ್ಕಳನ್ನು ತುಂಬಿಕೊಂಡು ಪ್ರಯಾಣ ಮಾಡಿದ್ದಾನೆ. ಪೊಲೀಸ್ ಅಧಿಕಾರಿಯೊಬ್ಬರು ಆಟೋರಿಕ್ಷಾವನ್ನು ನಿಲ್ಲಿಸಿದಾಗ ಆಟೋ ಒಳಗಡೆ ಶಾಲಾ ಮಕ್ಕಳನ್ನು ಕಂಡು ಪೊಲೀಸ್‌ ಅಧಿಕಾರಿ ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.

ಒಂದು ಆಟೋದೊಳಗೆ 14 ಮಕ್ಕಳು-ಪೊಲೀಸರಿಗೆ ಫುಲ್‌ ಶಾಕ್‌

Profile pavithra Mar 21, 2025 1:13 PM

ಲಖನೌ: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಅದರಂತೆ ವಾಹನಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಆಟೋ ರೀಕ್ಷಾದಲ್ಲಿ ಡ್ರೈವರ್‌ ಸೇರಿದಂತೆ ನಾಲ್ಕು ಮಂದಿ ಮಾತ್ರ ಪ್ರಯಾಣಿಸಬಹುದು ಎಂಬ ನಿಯಮವಿದೆ. ಹೀಗಿದ್ದರೂ ಉತ್ತರ ಪ್ರದೇಶದಲ್ಲಿ ಆಟೋ ರಿಕ್ಷಾವೊಂದರಲ್ಲಿ ಒಂದಲ್ಲ ಎರಡಲ್ಲ 14 ಮಂದಿ ಶಾಲಾ ಮಕ್ಕಳನ್ನು ತುಂಬಿಕೊಂಡು ಪ್ರಯಾಣ ಮಾಡಿರುವುದು ಬೆಳಕಿಗೆ ಬಂದಿದೆ. ಝಾನ್ಸಿಯ ಜಂಕ್ಷನ್‍ನಲ್ಲಿ ತಪಾಸಣೆಗಾಗಿ ಪೊಲೀಸ್ ಅಧಿಕಾರಿಯೊಬ್ಬರು ಆಟೋರಿಕ್ಷಾವನ್ನು ನಿಲ್ಲಿಸಿದಾಗ ಆಟೋ ಒಳಗಡೆ ತುಂಬಿದ್ದ ಮಕ್ಕಳನ್ನು ಕಂಡು ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿ ವೈರಲ್(Viral Video) ಆಗಿದೆ. ನೆಟ್ಟಿಗರು ಇದರ ವಿರುದ್ಧ ಕಿಡಿಕಾರಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು ಆಟೋದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಮಕ್ಕಳನ್ನು ನೋಡಿ ಆಟೋರಿಕ್ಷಾವನ್ನು ನಿಲ್ಲಿಸಿದ್ದಾರೆ. ಚಾಲಕನೊಂದಿಗೆ ಮೂವರು ಮಕ್ಕಳು ಮುಂಭಾಗದಲ್ಲಿ ಮತ್ತು 11 ಮಕ್ಕಳು ಹಿಂಭಾಗದಲ್ಲಿ ಕುಳಿತಿರುವುದನ್ನು ನೋಡಿ ಶಾಕ್‌ ಆಗಿದ್ದಾರೆ. ಪೊಲೀಸ್‌ ಅಧಿಕಾರಿಯೂ ಆಟೋ ಚಾಲಕನಿಗೆ ಬೈದು ಮಕ್ಕಳನ್ನು ಆಟೋದಿಂದ ಇಳಿಯುವಂತೆ ಹೇಳಿದ್ದಾರೆ.

ಆಟೋದ ವಿಡಿಯೊ ಇಲ್ಲಿದೆ ನೋಡಿ...



ಈ ಸಂದರ್ಭದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬರು ಆಟೋ ರಿಕ್ಷಾದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಸಂಖ್ಯೆಯನ್ನು ಎಣಿಸಿ ಈ ಘಟನೆಯನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಚಾಲಕನಿಗೆ ದಂಡ ವಿಧಿಸಿ ಚಲನ್ ನೀಡಿದ್ದಾರೆ.

ಅದೂ ಅಲ್ಲದೇ, ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ, ಪೊಲೀಸರು ವಾಹನಗಳಲ್ಲಿ ಪ್ರಯಾಣಿಕರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿದ್ದಾರೆ. ಅದೇನೆಂದರೆ, ದ್ವಿಚಕ್ರ ವಾಹನದಲ್ಲಿ ಇಬ್ಬರು ಪ್ರಯಾಣಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಒಂದು ತ್ರಿಚಕ್ರ ವಾಹನವು ಕನಿಷ್ಠ 4 ಜನರನ್ನು ಸಾಗಿಸಬಹುದು. ಅಂತೆಯೇ, ನಾಲ್ಕು ಚಕ್ರದ ವಾಹನದಲ್ಲಿ ಚಾಲಕನನ್ನು ಹೊರತುಪಡಿಸಿ ಮೂವರು ಪ್ರಯಾಣಿಕರು ಪ್ರಯಾಣಿಸಬಹುದು. ಹಾಗೇ ಮುಂಭಾಗದ ಸೀಟ್ ಬೆಲ್ಟ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂಬ ನಿರ್ಬಂಧವಿದೆ. ಆದರೆ ಇಷ್ಟೆಲ್ಲಾ ನಿಯಮಗಳಿದ್ದರೂ ಇದನ್ನೆಲ್ಲಾ ಗಾಳಿ ತೂರಿ ಶಾಲಾ ಮಕ್ಕಳನ್ನು ಈ ರೀತಿಯಾಗಿ ತುಂಬಿಸಿಕೊಂಡು ಹೋಗುತ್ತಾರೆ.

ಈ ಸುದ್ದಿಯನ್ನೂ ಓದಿ:‌Viral Video: ಸಾಕು ಶ್ವಾನದ ಜೀವಂತ ಸಮಾಧಿ ಮಾಡಿದ ಕ್ರೂರಿ ಮಾಲೀಕ; ಹೃದಯವಿದ್ರಾವಕ ವಿಡಿಯೊ ವೈರಲ್!

ಆಟೋದ ಮೇಲ್ಛಾವಣಿಯ ಮೇಲೆ ಕುಳಿತ ಪ್ರಯಾಣಿಕರು

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆಟೋದ ಒಳಗೆ ಜನ ಕಿಕ್ಕಿರಿದು ತುಂಬಿದ್ದು ಅಲ್ಲದೇ ಆಟೋದ ಛಾವಣಿಯ ಮೇಲೂ ಕೂಡ ಒಂದಷ್ಟು ಪ್ರಯಾಣಿಕರು ಕುಳಿತಿದ್ದಾರೆ. ಇದು ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತ್ತು. ವೈರಲ್ ವಿಡಿಯೊದಲ್ಲಿ ಇಬ್ಬರು ಪುರುಷರು ಚಲಿಸುತ್ತಿರುವ ಆಟೋದ ಮೇಲ್ಛಾವಣಿಯ ಮೇಲೆ ಕುಳಿತಿರುವುದನ್ನು ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ. ಈ ವಿಡಿಯೊ ವೈರಲ್ ಆಗಿ ಝಾನ್ಸಿ ಪೊಲೀಸರ ಗಮನಸೆಳೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.