Viral Video: ಸಾಕು ಶ್ವಾನದ ಜೀವಂತ ಸಮಾಧಿ ಮಾಡಿದ ಕ್ರೂರಿ ಮಾಲೀಕ; ಹೃದಯವಿದ್ರಾವಕ ವಿಡಿಯೊ ವೈರಲ್!
Viral Video: ಚಿಲಿಯ ರಾಂಕಾಗುವಾದಲ್ಲಿ ಇತ್ತೀಚೆಗೆ ಸ್ಥಳೀಯರು ಜೀವಂತ ಸಮಾಧಿ ಮಾಡಿದ ನಾಯಿಯೊಂದನ್ನು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿ ನಾಯಿ ಮಾಲೀಕನ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಕೊನೆಗೆ ಪೊಲೀಸರು ನಾಯಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.


ಸ್ಯಾಂಟಿಯಾಗೊ: ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ಸತ್ತು ಹೋದ ನಾಯಿಯ ಕ್ಲೋನಿಂಗ್‍ಗಾಗಿ ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿದ್ದಳು. ತಾವು ಸಾಕಿದ ನಾಯಿಗಾಗಿ ಕೆಲವರು ಏನು ಬೇಕಾದರೂ ಮಾಡುವುದಕ್ಕೆ ಜನ ಸಿದ್ಧರಿರುತ್ತಾರೆ. ಆದರೆ ಇನ್ನು ಕೆಲವರು ಈ ನಾಯಿಗಳ ಜೊತೆ ಕ್ರೂರವಾಗಿ ವರ್ತಿಸುತ್ತಾರೆ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ಚಿಲಿಯ ರಾಂಕಾಗುವಾದಲ್ಲಿ ನಡೆದಿದೆ. ಮಾಲೀಕನೊಬ್ಬ ತಾನು ಸಾಕಿದ ನಾಯಿಯನ್ನು ಜೀವಂತ ಸಮಾಧಿ ಮಾಡಿದ ಹೀನ ಘಟನೆಯೊಂದು ನಡೆದಿದೆ. ಕೊನೆಗೆ ಸ್ಥಳೀಯರು ನಾಯಿಯನ್ನು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.
ವರದಿಗಳ ಪ್ರಕಾರ, ಸ್ಥಳೀಯ ನಿವಾಸಿಗಳು ನಾಯಿಯನ್ನು ರಾಂಕಾಗುವಾದ ಎಲ್ ಸೋಲ್ ಮತ್ತು ನ್ಯಾಸಿಯೋನಲ್ ಆಂಟುಕೊ ಜಂಕ್ಷನ್ ಬಳಿ ಗೋಣಿಚೀಲದಲ್ಲಿ ಕಟ್ಟಿಹಾಕಿ ಸಮಾಧಿ ಮಾಡಿರುವುದನ್ನು ಕಂಡುಕೊಂಡಿದ್ದಾರೆ. ಹಾಗಾಗಿ ಸ್ಥಳೀಯರು ಸೇರಿಕೊಂಡು ನಾಯಿಯನ್ನು ಸಮಾಧಿಯಿಂದ ಹೊರಗೆ ತೆಗೆದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ನಾಯಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ನಾಯಿಯ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಈ ವಿಡಿಯೊಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರು ನಾಯಿಯ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರೊಬ್ಬರು, "ನಾನು ಇನ್ನು ಮುಂದೆ ಇದನ್ನು ಓದಲು ಸಾಧ್ಯವಿಲ್ಲ. ಇದು ನನ್ನ ಮನಸ್ಸನ್ನು ಹಾಳುಮಾಡುತ್ತದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು, "ದೇವರಿಗೆ ಧನ್ಯವಾದಗಳು! ಈಗ ರಾಕ್ಷಸನನ್ನು ಹುಡುಕಿ ಮತ್ತು ಅದೇ ರೀತಿ ಮಾಡಿ!" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ನಾಯಿಮರಿಗಳನ್ನು ಜೀವಂತವಾಗಿ ಸುಟ್ಟು ಹಾಕಿ ವಿಕೃತಿ ಮೆರೆದ ಪಾಪಿಗಳು!
ನಾಯಿಯನ್ನು ಗೋಣಿಚೀಲದಲ್ಲಿ ಕಟ್ಟಿ ರೈಲಿಗೆ ಎಸೆದ ಕ್ರೂರಿ!
ಮೂಕ ಪ್ರಾಣಿಗಳ ಮೇಲೆ ಜನರು ಕ್ರೌರ್ಯಮೇರೆಗೆ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ನಾಯಿಯನ್ನು ಗೋಣಿಚೀಲದಲ್ಲಿ ಕಟ್ಟಿ ರೈಲಿಗೆ ಎಸೆದ ಆಘಾತಕಾರಿ ಘಟನೆ ಕೋಲ್ಕತ್ತಾ ಬಳಿಯ ಬರಾಸತ್‍ನಲ್ಲಿ ಬೆಳಕಿಗೆ ಬಂದಿದೆ. ಗೋಣಿಚೀಲದಲ್ಲಿ ಅಲುಗಾಡುವುದನ್ನು ಗಮನಿಸಿದ ಪ್ರಯಾಣಿಕರು ಯಾರೋ ಈ ನಾಯಿಯನ್ನು ಚೀಲದಿಂದ ಬಿಡಿಸಿ ರಕ್ಷಣೆ ಮಾಡಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ವಿಡಿಯೊದಲ್ಲಿ ಒಬ್ಬ ಪ್ರಯಾಣಿಕನು ಚೀಲದಲ್ಲಿ ಚಲನೆ ಮತ್ತು ವಿಚಿತ್ರ ಶಬ್ದಗಳನ್ನು ಕೇಳಿ, ಅವನು ಅದನ್ನು ತೆರೆದು ನೋಡಿದಾಗ ಒಳಗೆ ನಾಯಿ ಇರುವುದು ಕಂಡುಬಂದಿದೆ. ಅದು ಗೋಣಿಚೀಲದಲ್ಲಿ ಬಂಧಿಯಾಗಿ ಉಸಿರಾಡಲು ತೊಂದರೆ ಅನುಭವಿಸುತ್ತಿತ್ತು. ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಾಯಿಯನ್ನು ಚೀಲಕ್ಕೆ ತುಂಬಿ ಹೀಗೆ ರೈಲಿನ ಬೋಗಿಯೊಳಗೆ ಎಸೆದಿದ್ದರು ಎಂಬುದು ತಿಳಿದು ಬಂದಿಲ್ಲ. ಈ ಪೋಸ್ಟ್ ಕಾಮೆಂಟ್ ವಿಭಾಗದಲ್ಲಿ, ಜನರು ಈ ಅಮಾನವೀಯತೆಯ ಕೃತ್ಯದ ಬಗ್ಗೆ ದುಃಖ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಕೃತ್ಯ ಎಸಗಿದ್ದ ಅಪರಾಧಿಗಳನ್ನು ಹುಡುಕಿ ಶಿಕ್ಷಿಸುವಂತೆ ಆಗ್ರಹಿಸಿದ್ದಾರೆ.