ಪಂಜಾಬ್ ಮದುವೆಯಲ್ಲಿ ನೋಟುಗಳ ಸುರಿಮಳೆ: ಸಭಾಂಗಣ ತುಂಬೆಲ್ಲ ಹಣ ಕಂಡು ಕಕ್ಕಾಬಿಕ್ಕಿಯಾದ ಅತಿಥಿಗಳು!
Viral Video: ಪಂಜಾಬ್‌ನ ಮದುವೆ ಎಂದಮೇಲೆ ಅಲ್ಲಿ ಅದ್ಧೂರಿತನಕ್ಕೆ ಕಮ್ಮಿ ಇರುವುದಿಲ್ಲ. ಇದೀಗ ತರ್ನ್ ತರನ್ ಜಿಲ್ಲೆಯ ಪಟ್ಟಿ ಎಂಬ ಗ್ರಾಮದಲ್ಲಿ ನಡೆದ ಮದುವೆಯೊಂದು ಎಲ್ಲರನ್ನು ದಂಗಾಗಿಸಿದೆ. ಆಸ್ಟ್ರೇಲಿಯಾ ಮತ್ತು ಕೆನಡಾದ ಅನಿವಾಸಿ ಭಾರತೀಯ ಅತಿಥಿಗಳು ವಧು- ವರರ ಮೇಲೆ 4-5 ಲಕ್ಷ ರೂ. ಮತ್ತು ಅಮೆರಿಕನ್ ಡಾಲರ್‌ಗಳನ್ನು ಸುರಿದಿರುವ ದೃಶ್ಯ ಕಂಡು ಬಂದಿದೆ.
ಪಂಜಾಬ್ ಮದುವೆಯಲ್ಲಿ ನೋಟುಗಳ ಸುರಿಮಳೆ -
ಚಂಡೀಗಢ, ಫೆ. 18: ಇತ್ತೀಚೆಗೆ ಮದುವೆ ಸಮಾರಂಭವನ್ನು ಗ್ರ್ಯಾಂಡ್ ಆಗಿ ಆಯೋಜನೆ ಮಾಡುವುದು ಟ್ರೆಂಡ್ ಆಗಿದೆ. ಅದ್ಧೂರಿ ಸೆಟ್ ಅಪ್, ವಧು- ವರರ ಎಂಟ್ರಿ ಹೀಗೆ ಎಲ್ಲವೂ ವಿಭಿನ್ನವಾಗಿ ಇರುತ್ತದೆ. ಅದರಲ್ಲೂ ಪಂಜಾಬ್‌ನ ಮದುವೆ ಕಾರ್ಯಕ್ರಮ ಅಂದಮೇಲೆ ಅಲ್ಲಿ ಅದ್ಧೂರಿತನಕ್ಕೆ ಕಮ್ಮಿ ಇರುವುದಿಲ್ಲ. ಇದೀಗ ತರ್ನ್ ತರನ್ ಜಿಲ್ಲೆಯ ಪಟ್ಟಿ ಎಂಬ ಗ್ರಾಮದಲ್ಲಿ ನಡೆದ ಮದುವೆಯೊಂದು ಎಲ್ಲರನ್ನು ದಂಗಾಗಿಸಿದೆ. ಆಸ್ಟ್ರೇಲಿಯಾ ಮತ್ತು ಕೆನಡಾದ ಅನಿವಾಸಿ ಭಾರತೀಯ ಅತಿಥಿಗಳು ವಧು- ವರರ ಮೇಲೆ 4-5 ಲಕ್ಷ ರೂ. ಮತ್ತು ಅಮೆರಿಕನ್ ಡಾಲರ್‌ಗಳನ್ನು ಸುರಿದಿರುವ ದೃಶ್ಯ (Viral Video) ಕಂಡು ಬಂದಿದೆ.
ಮದುವೆಗೆ ಹಾಜರಾದ ಅತಿಥಿಗಳು ದಂಪತಿಗೆ ಉಡುಗೊರೆಯನ್ನು ನೀಡುವುದು ಸಾಮಾನ್ಯ. ಆದರೆ ಪಂಜಾಬ್‌ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವಿದೇಶದಿಂದ ಬಂದಿದ್ದ ಅನಿವಾಸಿ ಭಾರತೀಯ ಅತಿಥಿಗಳು ವಧು-ವರರ ಮೇಲೆ ರಾಶಿ- ರಾಶಿ ನೋಟುಗಳನ್ನು ಸುರಿದಿದ್ದಾರೆ.
ವಿಡಿಯೊ ನೋಡಿ:
A video from a lavish Punjabi wedding in Patti town of Punjab’s Tarn Taran has gone viral.
— Vani Mehrotra (@vani_mehrotra) February 18, 2026
The ceremony, held on February 14, shows guests showering bundles of currency notes over the bride and groom as they stand on the wedding stage.
Several attendees, including NRI guests… pic.twitter.com/p7PuwnWW4G
ಫೆಬ್ರವರಿ 14ರಂದು ತರ್ನ್ ತರನ್ ಜಿಲ್ಲೆಯ ಪಟ್ಟಿ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ, ದಂಪತಿ ವೇದಿಕೆಯ ಮೇಲೆ ನಿಂತಾಗ ಅತಿಥಿಗಳು ನೋಟುಗಳ ಬಂಡಲ್‌ಗಳನ್ನು ವಧು ವರರ ಮೇಲೆ ಎಸೆದಿದ್ದಾರೆ. ವೇದಿಕೆ ಮತ್ತು ಸುತ್ತಮುತ್ತಲಿನ ನೆಲವು ನೋಟುಗಳಿಂದ ಕೂಡಿರುವುದನ್ನು ದೃಶ್ಯಗಳು ತೋರಿಸುತ್ತವೆ.
ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು
ಆಸ್ಟ್ರೇಲಿಯಾ ಮತ್ತು ಕೆನಡಾದ ಅನಿವಾಸಿ ಭಾರತೀಯ ಅತಿಥಿಗಳು ದಂಪತಿಯ ಮೇಲೆ 4-5 ಲಕ್ಷ ರುಪಾಯಿ ಮತ್ತು ಅಮೆರಿಕನ್ ಡಾಲರ್‌ಗಳನ್ನು ಸುರಿಸಿದ್ದಾರೆ. ದುಬಾರಿ ಬಟ್ಟೆಗಳನ್ನು ಧರಿಸಿದ್ದ ಅತಿಥಿಗಳು ಬ್ಯಾಗ್‌ಗಳಿಂದ ನೋಟುಗಳನ್ನು ತೆಗೆದು ಸುರಿಸಿದ್ದಾರೆ. ಸದ್ಯ ವೈರಲ್ ಆದ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವು ಬಳಕೆದಾರರು ಈ ದೃಶ್ಯವನ್ನು ಪಂಜಾಬಿ ವಿವಾಹದ ವೈಭವ ಎಂದರೆ ಇನ್ನು ಕೆಲವರು ಇಂತಹ ಅದ್ಧೂರಿ ಸಾರ್ವಜನಿಕ ಪ್ರದರ್ಶನದ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.