ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಐ ಶೃಂಗಸಭೆಯಲ್ಲಿ ಭಾಗವಹಿಸಿದ ಮಹಿಳೆಗೆ 5 ನಿಮಿಷದಲ್ಲಿ ಆಹಾರ ತಲುಪಿಸಿದ ಝೆಪ್ಟೊ

ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ 'ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026' ಕಾರ್ಯಕ್ರಮದಲ್ಲಿ ಆನ್‌ಲೈನ್ ಆ್ಯಪ್‌ಗಳು ಭಾರಿ ಸದ್ದು ಮಾಡಿವೆ. ಕೇವಲ ಕೃತಕ ಬುದ್ಧಿಮತ್ತೆಯ ವಿಚಾರ ಚರ್ಚೆ ಮಾತ್ರವಲ್ಲದೆ ಝೆಪ್ಟೊ ಕಂಪನಿಯ ವೇಗದ ಫುಡ್‌ ಡೆಲಿವರಿ ವಿಚಾರವಾಗಿಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಐದೇ ನಿಮಿಷದಲ್ಲಿ ಫುಡ್ ವಿತರಿಸಿ ಮೆಚ್ಚುಗೆಗೆ ಪಾತ್ರವಾಯ್ತು ಝೆಪ್ಟೊ

5 ನಿಮಿಷದಲ್ಲಿ ಆಹಾರ ತಲುಪಿಸಿದ ಝೆಪ್ಟೊ -

Profile
Pushpa Kumari Feb 18, 2026 8:14 PM

ನವದೆಹಲಿ, ಫೆ. 18: ಇತ್ತೀಚೆಗೆ ಪ್ರತಿಯೊಂದು ಕೆಲಸಗಳಿಗೂ ನಾವು ಆನ್‌ಲೈನ್ ಅವಲಂಬಿಸುತ್ತಿದ್ದೇವೆ. ಹಣದ ವ್ಯವಹಾರದಿಂದ ಹಿಡಿದು ಯಾವುದೇ ಅಗತ್ಯ ವಸ್ತುಗಳಿಗೂ ಬಹಳಷ್ಟು ಆ್ಯಪ್‌ಗಳು ಪ್ರಸಿದ್ಧಿ ಪಡೆದಿದೆ. ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ 'ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026' ಕಾರ್ಯಕ್ರಮದಲ್ಲೂ ಆನ್‌ಲೈನ್ ಆ್ಯಪ್‌ಗಳು ಭಾರಿ ಸದ್ದು ಮಾಡುತ್ತಿವೆ. ಕೇವಲ ಕೃತಕ ಬುದ್ಧಿಮತ್ತೆಯ ವಿಚಾರ ಚರ್ಚೆ ಮಾತ್ರವಲ್ಲದೆ ಝೆಪ್ಟೊ ಕಂಪನಿಯ ವೇಗದ ಆಹಾರ ಸೇವನೆಯ ವಿಚಾರವಾಗಿಯೂ ಸೋಶಿಯಲ್ ಮೀಡಿಯಾದಲ್ಲಿ (Viral News) ಭಾರಿ ಸದ್ದು ಮಾಡಿದೆ.

ನವದೆಹಲಿಯಲ್ಲಿ ನಡೆದ ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026 ಭಾರಿ ಜನ ಸಂದಣಿ, ದೀರ್ಘ ಸರತಿ ಸಾಲುಗಳ ಮೂಲಕ ಸಾಕಷ್ಟು ಗಮನವನ್ನು ಸೆಳೆದಿದೆ. ಈ ನಡುವೆ ಮಹಿಳೆಯೊಬ್ಬರು ತಾವು ಆರ್ಡರ್ ಮಾಡಿದ ಆಹಾರವು ಐದೇ ನಿಮಿಷದಲ್ಲಿ ತನಗೆ ಸಿಕ್ಕಿರುವ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಈ ಸಮ್ಮಿಟ್‌ಗೆ ಬಂದಿದ್ದ ಕೃತಿಕಾ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

ಕೃತಿಕಾ ಕಪೂರ್ ಅವರ ಪೋಸ್ಟ್‌:



ʼʼಇಷ್ಟೊಂದು ಜನದಟ್ಟಣೆಯ ನಡುವೆಯೂ, ನಾನು ಆರ್ಡರ್ ಮಾಡಿದ ಆಹಾರವು ಕೇವಲ 5 ನಿಮಿಷಗಳಲ್ಲಿ ಸಿಕ್ಕಿದೆ. ಇದು ನಿಜಕ್ಕೂ ಅದ್ಭುತʼʼ ಎಂದು ಬರೆದುಕೊಂಡಿದ್ದಾರೆ. ಅವರು ತಮ್ಮ ಕೈಯಲ್ಲಿ ಝೆಪ್ಟೊ ಪ್ಯಾಕೇಜ್ ಹಿಡಿದಿರುವ ಫೋಟೊ ಪೋಸ್ಟ್ ಮಾಡಿದ್ದಾರೆ. ʼʼಇದು ತುಂಬಾ ಖುಷಿ ನೀಡಿದೆ. ಹೆಚ್ಚು ಜನಸಂದಣಿ ಸೇರಿದ್ದ ಶೃಂಗಸಭೆಯ ಮಧ್ಯದಲ್ಲಿ ಕೇವಲ 5 ನಿಮಿಷಗಳಲ್ಲಿ ನನ್ನ ಆಹಾರವನ್ನು ಪಡೆದುಕೊಂಡೆʼʼ ಎಂದಿದ್ದಾರೆ.

ರೈಲ್ವೆ ಹಳಿ ಮೇಲೆ ಉರುಳಿದ ಟ್ರಕ್‌; ತಪ್ಪಿದ ಭಾರೀ ಅನಾಹುತ

ಸಾವಿರಾರು ಜನ ಸೇರಿದ್ದ ನಡುವೆಯೂ ಡೆಲಿವರಿ ಬಾಯ್ ಆರ್ಡರ್ ಮಾಡಿದ್ದ ಗ್ರಾಹಕರನ್ನು ಪತ್ತೆಹಚ್ಚಿ ಸರಿಯಾದ ಸ್ಥಳಕ್ಕೆ ಆಹಾರ ತಲುಪಿಸಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ. ಅವರ ಪೋಸ್ಟ್ ತ್ವರಿತವಾಗಿ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದು 80,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅನೇಕ ಬಳಕೆದಾರರು ಈ ಸೇವೆಯ ವೇಗವನ್ನು ಹೊಗಳಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಝೆಪ್ಟೊ ಸಿಇಒ ಆದಿತ್ ಪಲಿಚಾ, ʼʼಈ ಸಮಾವೇಶದಲ್ಲಿ ಒಂದೇ ದಿನದಲ್ಲಿ 1,000ಕ್ಕೂ ಹೆಚ್ಚು ಆರ್ಡರ್‌ಗಳನ್ನು ಅತ್ಯಂತ ವೇಗವಾಗಿ ವಿತರಣೆ ಮಾಡಿದ್ದೇವೆʼʼ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.