Fake Marriage: 4 ವರ್ಷ 4 ಮದುವೆ- ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಖತರ್ನಾಕ್ ಮಹಿಳೆ ಇದೀಗ ಪೊಲೀಸರ ಬಲೆಗೆ!
ಬಾಂಗ್ಲಾದೇಶದ ಖತರ್ನಾಕ್ ಮಹಿಳೆಯೊಬ್ಬಳು ಕಳೆದ 4 ವರ್ಷಗಳಲ್ಲಿ ನಾಲ್ವರು ಗಂಡಸರನ್ನು ಯಾಮಾರಿಸಿ ನಕಲಿ ಮದುವೆಯಾಗಿದ್ದು, ನಂತರ ಅವರನ್ನು ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಇದೀಗ ಪಶ್ಚಿಮ ಬಂಗಾಳದ ಬಿಧಾನ್‌ನಗರ ಪೊಲೀಸರು ಭಾರತೀಯ ಯುವಕನೊಬ್ಬನ್ನು ಮದುವೆಯಾಗಲು ಮೆಡಿಕಲ್ ವೀಸಾ ಬಳಸಿಕೊಂಡು ಗಡಿ ದಾಟುತ್ತಿದ್ದ ಆಕೆಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೊಲ್ಕತ್ತಾ ಪೊಲೀಸರ ಸಾಂದರ್ಭಿಕ ಚಿತ್ರ

ಕೊಲ್ಕತ್ತಾ: ಬಾಂಗ್ಲಾದೇಶದ(Bangladesh) ಖತರ್ನಾಕ್ ಮಹಿಳೆಯೊಬ್ಬಳು ಕಳೆದ 4 ವರ್ಷಗಳಲ್ಲಿ ನಾಲ್ವರು ಗಂಡಸರನ್ನು ಯಾಮಾರಿಸಿ ನಕಲಿ ಮದುವೆಯಾಗಿದ್ದು(Fake Marriage), ನಂತರ ಅವರನ್ನು ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಇದೀಗ ಪಶ್ಚಿಮ ಬಂಗಾಳದ(West Bengal) ಬಿಧಾನ್‌ನಗರ ಪೊಲೀಸರು ಮತ್ತೋರ್ವ ಭಾರತೀಯ ಯುವಕನನ್ನು ಮದುವೆಯಾಗಲು ಮೆಡಿಕಲ್ ವೀಸಾ ಬಳಸಿಕೊಂಡು ಗಡಿ ದಾಟುತ್ತಿದ್ದ ಆಕೆಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಸಹನಾ ಸಾದಿಕ್ ಎಂಬ ಮಹಿಳೆಯು 4 ವರ್ಷಗಳಲ್ಲಿ ಆರು ಬಾರಿ ಭಾರತಕ್ಕೆ ಪ್ರವೇಶಿಸಿದ್ದು, ಅಕ್ರಮವಾಗಿ ಗಡಿ ದಾಟಿದ್ದಾಳೆ. ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು 4 ವಿವಾಹಗಳನ್ನು ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ ಮಹಿಳೆ ಕೋಲ್ಕತ್ತಾದ ರಾಜರ್ಹತ್ ಮತ್ತು ನ್ಯೂ ಟೌನ್ ಪ್ರದೇಶಗಳಲ್ಲಿ ತಾನು ಮದುವೆಯಾದ ಪತಿಯಂದಿರ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾಳೆ. ಅಕ್ಟೋಬರ್ 2024 ರಲ್ಲಿ ಆಕೆ ಒಂದು ಮದುವೆಯಾಗಿದ್ದು, ಪೊಲೀಸರನ್ನು ಭೇಟಿ ಮಾಡಿ ತನ್ನ ಪತಿ ಅಶ್ಲೀಲ ಫೋಟೊ ತೆಗೆದಿದ್ದಾರೆ ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ತನಿಖೆಯ ನಂತರ ಕಿʼಲೇಡಿʼಯ ಮುಖವಾಡ ಕಳಚಿ ಬಿದ್ದಿದ್ದು, ಇದೀಗ ಪೊಲೀಸರು ಅವಳ ವಿರುದ್ಧ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಶ್ವಾನ; ಮತ್ತೊಂದು ವಿಡಿಯೊ ವೈರಲ್
ಅಕ್ರಮವಾಗಿ ಸೆಕ್ಸ್ ಮೂವಿ ಶೂಟಿಂಗ್ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್
ಇತ್ತೀಚೆಗಷ್ಟೇ ಅಸ್ಸಾಂನ ಗುವಾಹಟಿಯ ಹೋಟೆಲ್ ಒಂದರಲ್ಲಿ ಸೆಕ್ಸ್ ಮೂವಿ ಶೂಟಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶಿ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ದಿಸ್ಪುರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಸ್ಸಾಂ ಮೂಲದ ಶಫಿಕುಲ್, ಜಹಾಂಗೀರ್ ಮತ್ತು ಬಾಂಗ್ಲಾದೇಶದ ನಿವಾಸಿ ಮೀನ್ ಅಖ್ತರ್ ಎಂದು ಗುರುತಿಸಲಾಗಿತ್ತು. ಆರೋಪಿಗಳು ಗುವಾಹಟಿಯ ಸೂಪರ್ ಮಾರ್ಕೆಟ್ ಪ್ರದೇಶದ ಹೋಟೆಲ್ ಒಂದರಲ್ಲಿ ಕೊಠಡಿಗಳನ್ನು ಬುಕ್ ಮಾಡಿದ್ದರು. ಅಲ್ಲಿ ಅವರು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಯೋಜಿಸಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿ ದಾಳಿ ನಡೆಸಿದ್ದರು.
ಮೀನ್ ಅಖ್ತರ್ ಬಾಂಗ್ಲಾದೇಶದ ಗಡಿಗೆ ಪ್ರಯಾಣಿಸಿ ಉದ್ಯೋಗದ ಸುಳ್ಳು ನೆಪದಲ್ಲಿ ಭಾರತವನ್ನು ಪ್ರವೇಶಿಸಿದ್ದಾಳೆ ಎಂದು ಮೂಲಗಳು ಬಹಿರಂಗಪಡಿಸಿದ್ದವು. ಆಕೆ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೇ ಅಸ್ಸಾಂಗೆ ಪ್ರವೇಶಿಸಿದ್ದಾಳೆ ಎಂದು ಆರೋಪಿಸಲಾಗಿತ್ತು.