Viral Video: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಶ್ವಾನ; ಮತ್ತೊಂದು ವಿಡಿಯೊ ವೈರಲ್
ಸೂಫಿ ಅರೋರಾ ನಂತರ ಇನ್‌ಸ್ಟಾಗ್ರಾಂ ಮೂಲದ ಕಂಟೆಂಟ್ ಕ್ರಿಯೇಟರ್ ವಂಶ್ ಛಾಬ್ರಾ ತನ್ನ ಸಾಕು ನಾಯಿ ಜೊರಾವರ್‌ನೊಂದಿಗೆ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಅವನ ಸಾಕುನಾಯಿ ಪ್ರೇಮ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.


ಲಖನೌ: ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಮಹಾ ಕುಂಭಮೇಳದ ಸಾಕಷ್ಟು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಪವಿತ್ರ ನದಿಗಳ ಸಂಗಮದಲ್ಲಿ ಸ್ನಾನ ಮಾಡಲು ಸಾಕಷ್ಟು ಜನ ಕುಂಭಮೇಳಕ್ಕೆ ಹೋಗುತ್ತಿದ್ದಾರೆ. ತಾವೂ ಸ್ನಾನ ಮಾಡುವುದಲ್ಲದೇ, ತಮ್ಮ ಪ್ರೀತಿಯ ಸಾಕುಪ್ರಾಣಿಗಳಿಗೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಸುತ್ತಿದ್ದಾರೆ. ಈ ಹಿಂದೆ ಸೂಫಿ ಅರೋರಾ ಎಂಬ ತನ್ನ ಸಾಕು ನಾಯಿಯನ್ನು ಪ್ರಯಾಗ್‌ರಾಜ್‌ನ ಪವಿತ್ರ ನೀರಿನಲ್ಲಿ ಸ್ನಾನ ಮಾಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಮತ್ತೊಂದು ಸಾಕು ನಾಯಿ ತನ್ನ ಯಜಮಾನನ ಜೊತೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಅವನಿಗೆ ತಮ್ಮ ಸಾಕುನಾಯಿಯ ಮೇಲಿದ್ದ ಪ್ರೇಮ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಇನ್‌ಸ್ಟಾಗ್ರಾಂ ಮೂಲದ ಕಂಟೆಂಟ್ ಕ್ರಿಯೇಟರ್ ವಂಶ್ ಛಾಬ್ರಾ ತನ್ನ ಸಾಕು ನಾಯಿ ಜೊರಾವರ್‌ನೊಂದಿಗೆ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿದ್ದು, ವಿಡಿಯೊದಲ್ಲಿ ಅವನು ತನ್ನ ನಾಯಿಯನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಸಂಗಮಕ್ಕೆ ಹೋಗಿದ್ದಾನೆ. ಅಲ್ಲಿ ಅವನು ತನ್ನ ಜೊತೆ ತನ್ನ ನಾಯಿಗೂ ಪವಿತ್ರ ಸ್ನಾನ ಮಾಡಿಸಿದ್ದಾನೆ.
ವಂಶ್ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಮೊದಲಿಗೆ ತನ್ನ ಸಾಕು ನಾಯಿಯನ್ನು ಮೇಳಕ್ಕೆ ಕರೆದೊಯ್ಯಲು ಯೋಜಿಸಿರಲಿಲ್ಲವಂತೆ. ಆದರೆ ಆತ ಪ್ರಯಾಗ್‍ರಾಜ್‍ಗೆ ಹೋಗಲು ತನ್ನ ಕಾರಿನಲ್ಲಿ ಕುಳಿತಾಗ ನಾಯಿ ಬಂದು ಅವನ ಬಳಿ ಕುಳಿತಿದೆಯಂತೆ. ಸಾಕು ನಾಯಿಯ ಮುಗ್ಧ ಮುಖವನ್ನು ಕಂಡು ವಂಶ್ ಅದನ್ನು ಸಹ ಮಹಾ ಕುಂಭಕ್ಕೆ ತನ್ನ ಜೊತೆ ಕರೆಯೊಯ್ದಿದ್ದಾನಂತೆ.
ಈ ವಿಡಿಯೊವನ್ನು ಫೆಬ್ರವರಿ 11 ರಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಈಗಾಗಲೇ ಏಳು ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ ಮತ್ತು 6.9 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೊವನ್ನು ಲೈಕ್ ಮಾಡಿದ್ದಾರೆ ಮತ್ತು ವಂಶ್‍ಗೆ ತನ್ನ ಸಾಕು ನಾಯಿಯ ಮೇಲಿನ ಪ್ರೀತಿಯನ್ನು ಕಂಡು ಅನೇಕರು ಅವನನ್ನು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ತ್ರಿವೇಣಿ ಸಂಗಮದಲ್ಲಿ ಸಾಕು ನಾಯಿಗೆ ʻಪವಿತ್ರ ಸ್ನಾನ' ಮಾಡಿಸಿದ ವ್ಯಕ್ತಿ; ವಿಡಿಯೊ ನೋಡಿ ನೆಟ್ಟಿಗರು ಫುಲ್ ಫಿದಾ!
ಈ ಹಿಂದೆ ಸೂಫಿ ಅರೋರಾ ಎಂಬ ವ್ಯಕ್ತಿ ತನ್ನ ಸಾಕುನಾಯಿ 'ಕ್ಯಾಮ್ಮಿ'ಯನ್ನು ಹಿಡಿದುಕೊಂಡು ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಪವಿತ್ರ ನದಿಗಳ ಸಂಗಮದಲ್ಲಿ ಸ್ನಾನ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅರೋರಾ ಅಲ್ಲಿ ತನ್ನ ನಾಯಿಯೊಂದಿಗೆ ಸ್ನಾನ ಮಾಡುವುದನ್ನು ನೋಡಿ ಅಲ್ಲಿದ್ದ ಜನರು ಕೂಡ ಖುಷಿಪಟ್ಟಿದ್ದಾರೆ.