ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕುದುರೆ ಡಿಕ್ಕಿ; ಅಪಘಾತದ ದೃಶ್ಯ ವೈರಲ್‌

ಬೀದಿ ಕುದುರೆಗಳು ದಿಢೀರ್ ಆಗಿ ರಸ್ತೆ ದಾಟಿದ ಪರಿಣಾಮ ಮಹಿಳೆಯೊಬ್ಬರ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ಮಹಿಳೆ ಶಾಲಾ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸದ್ಯ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಭೀಕರ ಘಟನೆಯ ದೃಶ್ಯ ವೈರಲ್ ಆಗಿದೆ.

ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕುದುರೆ ಡಿಕ್ಕಿ

ಮಹಿಳೆಗೆ ಬೀದಿ ಕುದುರೆ ಡಿಕ್ಕಿ -

Profile
Pushpa Kumari Dec 16, 2025 9:06 PM

ಚೆನ್ನೈ, ಡಿ. 16: ವಾಹನದಲ್ಲಿ ಸಂಚರಿವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ನಾವು ಸರಿಯಾದ ರಸ್ತೆ ಸುರಕ್ಷಿತ ನಿಯಮಗಳನ್ನು ಪಾಲಿಸಿದರೂ ಕೆಲವೊಮ್ಮೆ ಅನಾಹುತಗಳು ನಡದೇ ಬಿಡುತ್ತವೆ. ಇದಕ್ಕೆ ಉದಾಹರಣೆಯಂತಿದೆ ಈ ಘಟನೆ. ಕೊಯಮತ್ತೂರಿನ ವೆಳ್ಳಕಿನಾರಿನಲ್ಲಿ ಅಪಘಾತವೊಂದು ನಡೆದಿದೆ. ನಗರದ ಜನನಿಬಿಡ ರಸ್ತೆಯಲ್ಲಿ ಬೀದಿ ಕುದುರೆಗಳು ದಿಢೀರ್ ಆಗಿ ಮಹಿಳೆಯೊಬ್ಬರ ದ್ವಿಚಕ್ರವಾಹನ ಡಿಕ್ಕಿ ಹೊಡೆದಿವೆ. ಮಹಿಳೆ ಶಾಲಾ ಮಕ್ಕಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸದ್ಯ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಭೀಕರ ಘಟನೆಯ ದೃಶ್ಯ ವೈರಲ್ (Viral Video) ಆಗಿದೆ.

ಕೊಯಮತ್ತೂರಿನ ವೆಳ್ಳಕಿನಾರು ಮೆಟ್ಟುಪಾಳ್ಯಂ ರಸ್ತೆಯಲ್ಲಿ ಈ ಆಘಾತ ನಡೆದಿದೆ. ಮಹಿಳೆ ತನ್ನ ಸ್ಕೂಟಿಯಲ್ಲಿಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಪ್ರಯಾಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೀದಿ ಕುದುರೆಗಳು ಇದ್ದಕ್ಕಿದ್ದಂತೆ ರಸ್ತೆಗೆ ಎಂಟ್ರಿ ನೀಡಿವೆ. ಅದರಲ್ಲೂ ಒಂದು ಕುದುರೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ತಕ್ಷಣ ಮಹಿಳೆಯ ನಿಯಂತ್ರಣ ತಪ್ಪಿದೆ. ಹೀಗಾಗಿ ವಾಹನ ಉರುಳಿಬಿದ್ದಿದ್ದು ಮಹಿಳೆ ಮತ್ತು ಇಬ್ಬರು ಮಕ್ಕಳು ರಸ್ತೆಗೆ ಬಿದಿದ್ದಾರೆ‌. ಅದೃಷ್ಟವಶಾತ್, ಮೂವರಿಗೂ ಸಣ್ಣಪುಟ್ಟ ಗಾಯ ಆಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.



ಇನ್ನು ಹಿಂದೆ ಇದ್ದ ವಾಹನ ಸವಾರ ಸವಾರರು ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ, ದೊಡ್ಡ ಅನಾಹುತವೊಂದು ತಪ್ಪಿದೆ. ಈ ಘಟನೆ ಆದಾಗಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಧಾವಿಸಿ ಬಿದ್ದ ಗಾಯಾಳುಗಳಿಗೆ ನೆರವಾಗಿದ್ದಾರೆ. ಈ ಅಪಘಾತದ ದೃಶ್ಯ ವೈರಲ್ ಆಗಿದ್ದು ಇದರಲ್ಲಿ ಇಬ್ಬರು ಮಕ್ಕಳು ಹೆಲ್ಮೆಟ್‌ ಧರಿಸದೇ ಇರುವುದು ಕಂಡು ಬಂದಿದೆ. ಮಹಿಳೆ ಹೆಲ್ಮೆಟ್ ಧರಿಸಿದ್ದರೂ, ಮಕ್ಕಳ ಸುರಕ್ಷತೆಯ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಶೂಟಿಂಗ್‌ ವೇಳೆ ಗೋಡೆ ಏರಿದ ಅಕ್ಷಯ ಕುಮಾರ್‌

ಮಕ್ಕಳನ್ನು ಈ ರೀತಿ ಅಜಾಗರೂಕತೆಯಿಂದ ಕರೆದುಕೊಂಡು ಹೋಗುವುದು ತಪ್ಪು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಪ್ರಾಣಿಗಳು ಯಾವಾಗ ರಸ್ತೆ ಮಧ್ಯೆ ಬರುತ್ತವೆ ಎಂದು ಹೇಳಲಾಗದು. ಹಾಗಾಗಿ ಸವಾರರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ‌. ಸ್ಥಳೀಯರು ಮೆಟ್ಟುಪಾಳ್ಯಂ ರಸ್ತೆಯಲ್ಲಿ ಬೀದಿ ಕುದುರೆಗಳ ಉಪಟಳ ನಿರಂತರವಾಗಿದ್ದು ವಾಹನ ಸವಾರರಿಗೆ ಗಂಭೀರ ಅಪಾಯ ತಂದೊಡ್ಡುತ್ತಿವೆ ಎಂದು ದೂರಿದ್ದಾರೆ.