ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಗುವಿನ ಪಾಲಿಗೆ ಯಮನಾದ ಕೂಲ್ ಡ್ರಿಂಕ್ಸ್‌ ಬಾಟಲಿ ಮುಚ್ಚಳ!

Viral Video: ಪೋಷಕರ ನಿರ್ಲಕ್ಷ್ಯದಿಂದ ರುದ್ರ ಅಯಾನ್ ಎಂಬ 9 ತಿಂಗಳ ಗಂಡು ಮಗುವೊಂದು ಕೂಲ್ ಡ್ರಿಂಕ್‍ ಬಾಟಲಿಯ ಕ್ಯಾಪ್ ನುಂಗಿ ಪ್ರಾಣ ಕಳೆದುಕೊಂಡ ಘಟನೆ ತೆಲಂಗಾಣದ ಉತ್ಕೂರ್ ಗ್ರಾಮದಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪೋಷಕರ ಬೇಜವಾಬ್ದಾರಿ ವರ್ತನೆಯಿಂದಾಗಿ ಮಗು ಈ ದುರಂತಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕೂಲ್ ಡ್ರಿಂಕ್‍ ಬಾಟಲಿ ಮುಚ್ಚಳ ನುಂಗಿ 9 ತಿಂಗಳ ಮಗು ಸಾವು

Profile pavithra Mar 11, 2025 7:37 PM

ಹೈದರಾಬಾದ್: ಪೋಷಕರ ಅಜಾಗೂರೂಕತೆಯಿಂದ ಮಕ್ಕಳು ಪ್ರಾಣ ಕಳೆದುಕೊಂಡ ಅಥವಾ ಗಂಭೀರ ಗಾಯಗಳಿಗೆ ಒಳಗಾದ ಅನೇಕ ಘಟನೆಗಳು ಸಂಭವಿಸಿವೆ. ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಘಟನೆಯೊಂದರಲ್ಲಿ ಪೋಷಕರು ಗಮನಿಸದೆ ಬಿಟ್ಟಿದ್ದರಿಂದ 9 ತಿಂಗಳ ಗಂಡು ಮಗುವೊಂದು ಕೂಲ್ ಡ್ರಿಂಕ್‍ ಬಾಟಲಿಯ ಕ್ಯಾಪ್ ನುಂಗಿ ಪ್ರಾಣ ಕಳೆದುಕೊಂಡಿದೆ. ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ತೆಲಂಗಾಣದ ಉತ್ಕೂರ್ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಗುವು ತನ್ನ ಕುಟುಂಬದವರೊಂದಿಗೆ ಭಾಗವಹಿಸಿತ್ತು. ಅಲ್ಲಿ ಮಗು ಆಕಸ್ಮಿಕವಾಗಿ ಕೂಲ್ ಡ್ರಿಂಕ್‍ ಬಾಟಲಿಯ ಕ್ಯಾಪ್ ನುಂಗಿ ದುರಂತವಾಗಿ ಸಾವನಪ್ಪಿದೆ ಎಂದು ಮೂಲಗಳು ತಿಳಿಸಿವೆ. ಮಗುವನ್ನು ರುದ್ರ ಅಯಾನ್ ಎಂದು ಗುರುತಿಸಲಾಗಿದ್ದು, ಪೋಷಕರ ಬೇಜವಾಬ್ದಾರಿ ವರ್ತನೆಯಿಂದಾಗಿ ಮಗು ಪ್ರಾಣ ಕಳೆದುಕೊಂಡಿದೆ ಎನ್ನಲಾಗಿದೆ.

ಮಗು ಕೂಲ್ ಡ್ರಿಂಕ್‍ ಬಾಟಲಿಯ ಕ್ಯಾಪ್ ನುಂಗಿದ ವಿಷಯ ಪೋಷಕರ ಗಮನಕ್ಕೆ ಬಂದ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಿದರೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ.



ಚಿಕ್ಕ ಮಕ್ಕಳು ವಸ್ತುಗಳನ್ನು ನುಂಗಿ ಸಾವನಪ್ಪಿದ ಘಟನೆ ನಡೆದಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಧ್ಯ ಪ್ರದೇಶದ ಸರೆಡಿ ಗ್ರಾಮದ ನಿವಾಸಿ ಹೀರೆನ್ ಜೋಶಿ ಅವರ ಮಗ ಮಾನ್ವಿಕ್ (14 ತಿಂಗಳು) ವಿಕ್ಸ್ ಡಬ್ಬಿಯ ಮುಚ್ಚಳ ನುಂಗಿ ದುರಂತವಾಗಿ ಸಾವನಪ್ಪಿದ್ದ ಘಟನೆ ನಡೆದಿತ್ತು. ಮಗು ರಾತ್ರಿ ಮನೆಯಲ್ಲಿಟ್ಟಿದ್ದ ವಿಕ್ಸ್ ಡಬ್ಬಿಯ ಜತೆಗೆ ಆಟವಾಡುತ್ತಿತ್ತು. ಮಗು ಆಟವಾಡುತ್ತಿರುವುದನ್ನು ಗಮನಿಸದ ಪೋಷಕರು ತಮ್ಮದೇ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ವಿಕ್ಸ್ ಡಬ್ಬಿಯ ಮುಚ್ಚಳ ನುಂಗಿದೆ. ಅದು ಗಂಟನಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೇ ನೆಲದಲ್ಲಿ ಬಿದ್ದು ಒದ್ದಾಡಿದೆ. ಕೊನೆಗೆ ಮಗುವಿನ ಪೋಷಕರು ಗಂಟಲನ್ನು ಪರೀಕ್ಷಿಸಿದಾಗ ವಿಕ್ಸ್ ಡಬ್ಬದ ಮುಚ್ಚಳ ಪತ್ತೆಯಾಗಿದೆ. ಕೊನೆಗೆ ಮಗುವನ್ನು ಬಾಂಸ್ವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆದಲ್ಲಿ ಮಗು ಕೊನೆಯುಸಿರೆಳೆದಿತ್ತು.

ಈ ಸುದ್ದಿಯನ್ನೂ ಓದಿChild death: ಮಂಗಳೂರಿನಲ್ಲಿ ದಾರುಣ ಘಟನೆ, ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ ಮಗು ಸಾವು

ಇತ್ತೀಚೆಗೆ ಪಿಸ್ತಾ ತಿನ್ನುವಾಗ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿತ್ತು. ಕುಂಬಳೆಯ ಭಾಸ್ಕರ್ ನಗರ ನಿವಾಸಿ ಅನ್ವರ್ – ಮೆಹರುನ್ನೀಸಾ ದಂಪತಿಯ ಪುತ್ರ ಅನಾಸ್ ಮೃತಪಟ್ಟ ಬಾಲಕ. ಮನೆಯಲ್ಲಿ ಪಿಸ್ತಾದ ಸಿಪ್ಪೆ ತೆಗೆದು ತಿನ್ನುವಾಗ ಮಗುವಿನ ಗಂಟಲಿಗೆ ಪಿಸ್ತಾ ಸಿಲುಕಿಕೊಂಡಿತ್ತು. ಅದನ್ನು ಗಂಟಲಿಗೆ ಬೆರಳು ಹಾಕಿ ತೆಗೆಯಲಾಗಿತ್ತು. ಆದರೂ ಮಗುವಿನ ಉಸಿರಾಟದಲ್ಲಿ ತೊಂದರೆ ಕಂಡುಬಂದಾಗ ಕುಂಬಳೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಮಗುವಿಗೆ ಉಸಿರಾಟದ ಸಮಸ್ಯೆ ಉಲ್ಬಣಿಸಿತ್ತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮಗು ಮೃತಪಟ್ಟಿತ್ತು.