Viral News: ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಹಸೆಮಣೆಗೇರಿದ ವೃದ್ಧ ಜೋಡಿ; ಇಲ್ಲಿದೆ ಅಪರೂಪದ ಲವ್‌ಸ್ಟೋರಿ
ರಾಜಸ್ಥಾನದ ಡುಂಗರಪುರ ಜಿಲ್ಲೆಯ ಗಲಂದರ್ ಗ್ರಾಮದಲ್ಲಿ ರಮಾ ಭಾಯಿ ಖರಾರಿ (95) ಮತ್ತು ಜೀವಲಿ ದೇವಿ (90) 70 ವರ್ಷಗಳ ಲಿವಿಂಗ್ ಟು ಗೆದರ್ ಸಂಬಂಧದ ನಂತರ ತಮ್ಮ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಯನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.


ಜೈಪುರ: ಇತ್ತೀಚೆಗೆ ರೈಲಿನಲ್ಲಿ ವಯಸ್ಸಾದ ಗಂಡನೊಬ್ಬ ತನ್ನ ಪತ್ನಿಯ ಕಾಲಿಗೆ ನೈಲ್ ಪಾಲಿಷ್ ಹಚ್ಚುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರಾಜಸ್ಥಾನದ ಡುಂಗರಪುರ ಜಿಲ್ಲೆಯ ಗಲಂದರ್ ಗ್ರಾಮದಲ್ಲಿ ವಯಸ್ಸಾದ ಜೋಡಿಯ ಅಪರೂಪದ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ದಶಕಗಳಿಂದ ಈ ಜೋಡಿ ಲಿವಿಂಗ್ ಟು ಗೆದರ್ ರಿಲೆಷನ್‍ಶಿಪ್‍ನಲ್ಲಿತ್ತು. ಇದೀಗ ಇವರು ತಮ್ಮ ಮಕ್ಕಳು, ಮೊಮ್ಮಕ್ಕಳ ಮುಂದೆ ಮದುವೆಯಾಗಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
95 ವರ್ಷ ವಯಸ್ಸಿನ ರಮಾ ಭಾಯಿ ಖರಾರಿ ಮತ್ತು 90 ವರ್ಷ ವಯಸ್ಸಿನ ಜೀವಲಿ ದೇವಿ 7 ದಶಕಗಳಿಗೂ ಹೆಚ್ಚು ಕಾಲ ಒಂದೇ ಮನೆಯಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಇನ್ನು ಅವರಿಗೆ 6 ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡ ಇದ್ದಾರೆ.
ಹೀಗಿರುವಾಗ ಇತ್ತೀಚೆಗೆ, ಈ ವೃದ್ಧ ಜೋಡಿ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿತ್ತು. ಹಾಗಾಗಿ ಮಕ್ಕಳು, ಖುಷಿಯಿಂದ ಅವರ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ದಂಪತಿಯ ಮದುವೆ ಮೆರವಣಿಗೆಯಲ್ಲಿ ಸ್ಥಳೀಯರು ಕೂಡ ಪಾಲ್ಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ದಿನಕ್ಕೆ 20-30ಸಾವಿರ ದುಡಿವ ಆಟೋ ಚಾಲಕ; ಇಲ್ಲಿದೆ ನೋಡಿ ಇವನ ದುಡಿಮೆಯ ಸಿಕ್ರೆಟ್!
ಮದುವೆಯಾಗಿ ವರ್ಷ ಕಳೆಯುವ ಮೊದಲೇ ಡಿವೋರ್ಸ್ ನೀಡಿ ದೂರವಾಗುವ ಈಗಿನ ಜೋಡಿಗಳಿಗೆ ಈ ಅಜ್ಜ-ಅಜ್ಜಿ ಮಾದರಿ.